ಜಾತ್ಯತೀತ ವ್ಯಕ್ತಿಯಾಗಿಯೇ ಇರುತ್ತೇನೆ: ರಮಾನಾಥ ರೈ
Team Udayavani, Jan 10, 2018, 12:25 PM IST
ವಿಟ್ಲ : ಅಲ್ಪಸಂಖ್ಯಾಕ, ಬಹುಸಂಖ್ಯಾಕ ಮತೀಯವಾದಿಗಳು ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಜಾತ್ಯತೀತ ಸಿದ್ಧಾಂತವನ್ನು ನಂಬಿಕೊಂಡು ಬಂದವನು. ನಾನು ಜಾತ್ಯತೀತ ವ್ಯಕ್ತಿಯಾಗಿಯೇ ಇರುತ್ತೇನೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.
ಅವರು ಮಂಗಳವಾರ ಸಾಲೆತ್ತೂರು, ಕೊಳ್ನಾಡು, ವಿಟ್ಲಪಟ್ನೂರು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನೆರವೇರಿಸಿ, ವಿಟ್ಲಪಟ್ನೂರು ಗ್ರಾಮದ ಕೊಡಂಗಾಯಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಯಾರಿಗೂ ಯಾರನ್ನೂ ದ್ವೇಷಿಸುವ ಮನಸ್ಸು ಕೊಡಬೇಡ, ಎಲ್ಲರೂ ಎಲ್ಲರನ್ನೂ ಪ್ರೀತಿಸುವ ಮನಸ್ಸು ಕೊಡು ಎಂದು ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಅದಕ್ಕಾಗಿ ಕೂಲಿ ಕೊಡಿ ಎಂದು ಮತದಾರರಲ್ಲಿವಿನಂತಿಸುತ್ತೇನೆ ಎಂದು ಸಚಿವರು ತಿಳಿಸಿದರು.
ಅನುದಾನ ಬಿಡುಗಡೆ
ವಾಮದಪದವು ಮತ್ತು ಕನ್ಯಾನ ಪ.ಪೂ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮಾತನಾಡಿದರು. ಕಾಲೇಜಿಗೆ ಕಟ್ಟಡಕ್ಕೆ ತಲಾ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಮಂಚಿ ಪ್ರೌಢಶಾಲೆಗೆ ಎರಡು ಕೊಠಡಿಗೆ ಅನುದಾನ ಬಿಡುಗಡೆಯಾಗಿದೆ. ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ವೈದ್ಯಾಧಿಕಾರಿ ಮತ್ತು 4 ಸಿಬಂದಿ ಇರುವ ಪ್ರಾಥಮಿಕ ಆರೋಗ್ಯ ವಿಸ್ತರಣ ಕೇಂದ್ರದ ಕಟ್ಟಡಕ್ಕೆ 10 ಲಕ್ಷ ರೂ. ಅನುದಾನ ಮಂಜೂರಾಗಿದೆ. ಬಿ.ಸಿ. ರೋಡಿನಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ಶೀಘ್ರದಲ್ಲೇ ಶಂಕುಸ್ಥಾಪನೆ ನಡೆಯಲಿದೆ. ಕ್ರೀಡಾಂಗಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಗೊಂಡಿದೆ. ಮಂಗಳೂರಿನ ಪಡೀಲಿನಲ್ಲಿ 41 ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಎನ್‌ಜಿಟಿ ವಿರೋಧ ವ್ಯಕ್ತಪಡಿಸಿತ್ತು. ಇದೀಗ ಆ ಪ್ರಕರಣ ಬಿದ್ದುಹೋಗಿದ್ದು, ಶೀಘ್ರದಲ್ಲೇ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ವಿರೋಧಿಗಳಿಂದ ದ್ವಂದ್ವ ಹೇಳಿಕೆ
ರಾಜಕೀಯ ವಿರೋಧಿಗಳು ಕೆಲವೊಮ್ಮೆ ಟೀಕಿಸುವ ಭರದಲ್ಲಿ ದ್ವಂದ್ವ ಹೇಳಿಕೆ ನೀಡುತ್ತಾರೆ. ರಮಾನಾಥ ರೈ ಏನೂ ಅಭಿವೃದ್ಧಿ ಕಾರ್ಯ ಮಾಡಲಿಲ್ಲವೆಂದು ಹೇಳುತ್ತಾರೆ. ಮತ್ತೆ ಕೆಲವು ದಿನಗಳ ಬಳಿಕ ಅವರೇ ರಮಾನಾಥ ರೈ ಎಲ್ಲ ಅನುದಾನವನ್ನೂ ಬಂಟ್ವಾಳ ಕ್ಷೇತ್ರಕ್ಕೆ ಸೀಮಿತವಾಗಿಸಿದ್ದಾರೆ. ಇನ್ನೊಮ್ಮೆ ಜಿಲ್ಲೆಗಾಗಿ ಏನೂ ಮಾಡಲಿಲ್ಲವೆನ್ನುತ್ತಾರೆ.
ವಾಸ್ತವವಾಗಿ ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ನಡೆದಿದ್ದರೂ ಇವರ ಕಣ್ಣಿಗೆ ಕಾಣಸಿಗಲಿಲ್ಲ. ಕಾರಣವೇನೆಂದರೆ ಅವರ ಸಾಧನೆ ಏನೂ ಇಲ್ಲ ಎಂದು ರೈ ಅವರು ನಳಿನ್ ಕುಮಾರ್ ಕಟೀಲು ಅವರನ್ನುದ್ದೇಶಿಸಿ ವ್ಯಂಗ್ಯವಾಡಿದರು.
ಜಿ.ಪಂ. ಸದಸ್ಯ ಎಂ.ಎಸ್. ಮಹಮ್ಮದ್ ಮಾತನಾಡಿ, ಸಚಿವ ರಮಾನಾಥ ರೈ ಅವರು ವಿಟ್ಲ-ಕೊಳ್ನಾಡು ರಸ್ತೆಯ ಮಧ್ಯೆ ಕಡಂಬು, ಕೊಡಂಗಾಯಿ ಮತ್ತು ಕಾಡುಮಠದಲ್ಲಿ ಒಟ್ಟು 7 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಿಸಿದ ಸಾಧನೆ ಕಣ್ಣ ಮುಂದೆಯೇ ಇದೆ. ಅವರು ಇಂತಹ ಅತ್ಯಂತ ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಕ್ಷೇತ್ರದ ಜನತೆಯ ಋಣ ತೀರಿಸಿದ್ದಾರೆ. ಅವರ ಋಣ ತೀರಿಸುವ ಕಾರ್ಯ ಮತದಾರರಿಂದಾಗಬೇಕಾಗಿದೆ ಎಂದರು.
ಬಂಟ್ವಾಳ ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಟಾಸ್ ಅಲಿ, ತಾ.ಪಂ. ಸದಸ್ಯೆ ಶೋಭಾ ಪಿ. ರೈ, ತಾ.ಪಂ. ಸ್ಥಾಯೀ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಕೊಳ್ನಾಡು ಗ್ರಾ.ಪಂ. ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು, ವಿಟ್ಲ ಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್ ಶೆಟ್ಟಿ ಕರ್ಕಳ, ವಿಟ್ಲಪಟ್ನೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲ್ಲ ಕುಕ್ಕಿಲ, ಬೋಳಂತೂರು ಗ್ರಾ.ಪಂ. ಉಪಾಧ್ಯಕ್ಷ ಚಂದ್ರಶೇಖರ ರೈ ಬೋಳಂತೂರು, ಪ್ರಭಾರ ಅಭಿವೃದ್ಧಿ ಅಧಿಕಾರಿ ಸುಜಯ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಅರುಣ್ ಪ್ರಕಾಶ್, ಪ್ರೀತಮ್, ವಿವಿಧ ಗ್ರಾ.ಪಂ.ಗಳ ಸದಸ್ಯರು ಮತ್ತಿತರರಿದ್ದರು.
ಜಿ.ಪಂ. ಸದಸ್ಯೆ ಮಂಜುಳಾ ಮಾಧವ ಮಾವೆ ಪ್ರಸ್ತಾವನೆಗೈದು ಸ್ವಾಗತಿಸಿದರು. ನೌಫಲ್ ಕುಡ್ತಮುಗೇರು ಕಾರ್ಯಕ್ರಮ ನಿರ್ವಹಿಸಿದರು. ಸಿದ್ದಿಕ್ ಸರವು ಮತ್ತು ಅರವಿಂದ ರೈ ಮೂರ್ಜೆಬೆಟ್ಟು ಸಹಕರಿಸಿದರು. ವಿಟ್ಲಪಟ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷ ಸಂದೇಶ ಶೆಟ್ಟಿ ಬಿಕ್ನಾಜೆ ವಂದಿಸಿದರು.
ಕಾಮಗಾರಿಗಳ ವಿವರ
ಮಂಚಿ-ಕೊಳ್ನಾಡು ಗ್ರಾಮಗಳ ಸಂಪರ್ಕ ರಸ್ತೆಗೆ 80 ಲಕ್ಷ ರೂ. ವೆಚ್ಚದ ಕಲ್ಕಾರು ಸೇತುವೆ, 10 ಲಕ್ಷ ರೂ. ವೆಚ್ಚದ ಪಾಣಾಜೆಕೋಡಿ ರಸ್ತೆ, 35 ಲಕ್ಷ ರೂ. ವೆಚ್ಚದ ಸಾಲೆತ್ತೂರು- ಪಾತೂರು ರಸ್ತೆ ನವೀಕರಣ, 40 ಲಕ್ಷ ರೂ. ವೆಚ್ಚದ ಸಾಲೆತ್ತೂರು-ಪಡೆಕುಂಜ ರಸ್ತೆ ತಡೆ ಗೋಡೆ, ಕೊಳ್ನಾಡು ಗ್ರಾಮದ ಕುಡ್ತಮುಗೇರು ಜಂಕ್ಷನ್ ಅಭಿವೃದ್ಧಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು. ಕಡಂಬು, ಕೊಡಂಗಾಯಿ ಮತ್ತು ಕಾಡುಮಠದಲ್ಲಿ ಒಟ್ಟು
7 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿದ ಬೃಹತ್ ಸೇತುವೆಗಳನ್ನು ಉದ್ಘಾಟಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.