ತಾಲೂಕು ಆಸ್ಪತ್ರೆಯಲ್ಲಿ ಶೀಘ್ರವೇ ಐಸಿಯು ಆರಂಭ: ಬಂಗೇರ
Team Udayavani, Oct 8, 2017, 12:13 PM IST
ಬೆಳ್ತಂಗಡಿ: ತಾಲೂಕಿನ ಎಲ್ಲ ಬಡವರಿಗೂ ಅನುಕೂಲವಾಗುವಂತೆ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ತೆರೆಯಲಾಗಿದ್ದು ಶೀಘ್ರದಲ್ಲೇ ಐಸಿಯು ಘಟಕ ಆರಂಭಿಸಲಾಗುವುದು. ಅತ್ಯಂತ ಕಡಿಮೆ ದರದ ಜೆನೆರಿಕ್ ಔಷಧ ಕೇಂದ್ರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ ಎಂದು ಶಾಸಕ ಕೆ.ವಸಂತ ಬಂಗೇರ ಹೇಳಿದ್ದಾರೆ. ಅವರು ಶನಿವಾರ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ಈಗ ಒಂದು ಯಂತ್ರ ಅಳವಡಿಸಲಾಗಿದ್ದು ಇನ್ನೊಂದು ಯಂತ್ರ ಅಳವಡಿಸಲಾಗುವುದು. ಅಗತ್ಯವಿರುವ ಎಲ್ಲರಿಗೂ ಉಚಿತವಾಗಿ ಡಯಾಲಿಸಿಸ್ ನಡೆಸಲಾಗುವುದು. ಒಂದು ಯಂತ್ರದಲ್ಲಿ ಒಂದು ದಿನದಲ್ಲಿ ಇಬ್ಬರಿಗೆ ಡಯಾಲಿಸಿಸ್ ಮಾಡಬಹುದು. ಇದರಿಂದಾಗಿ ಬಡ ಜನತೆ ವಾರಕ್ಕೆ ಮೂರು ಬಾರಿ ಮಂಗಳೂರಿಗೆ ಹೋಗುವುದು ತಪ್ಪುತ್ತದೆ. ಇದು ನನ್ನ ಅನೇಕ ಸಮಯದ ಬೇಡಿಕೆಯಾಗಿತ್ತು. ರಕ್ತ ತಪಾಸಣೆಗೆ ಸದ್ಯ ಖಾಸಗಿ ಮೊರೆ ಹೋಗುವ ಅನಿವಾರ್ಯತೆ ಇದ್ದು ಇದನ್ನು ಶೀಘ್ರವಾಗಿ ಬಗೆಹರಿಸಿ ಪ್ರಯೋಗಾಲಯಕ್ಕೆ ದಾನಿಗಳ ಮೂಲಕ ಯಂತ್ರ ಖರೀದಿಸಿ ಬಡವರಿಗೆ ಅನುಕೂಲ ಮಾಡಿಕೊಡಲಾಗುವುದು. ಐಸಿಯು ಘಟಕಕ್ಕಾಗಿ ಸಿದ್ಧತೆ ಪೂರ್ಣ ಪ್ರಮಾಣದಲ್ಲಿ ನಡೆದಿದ್ದು ತುರ್ತು ಚಿಕಿತ್ಸೆಗೆ ಕೂಡ ಇಲ್ಲೇ ವ್ಯವಸ್ಥೆಯಾಗಲಿದೆ ಎಂದವರು ತಿಳಿಸಿದರು
ಜೆನೆರಿಕ್ ಮಳಿಗೆ
ತಾಲೂಕು ಆಸ್ಪತ್ರೆಯಲ್ಲಿಯೇ ಜೆನೆರಿಕ್ ಔಷಧ ಮಳಿಗೆ ತೆರೆಯಲಾಗಿದೆ. ಸರಕಾರಿ ಆಸ್ಪತ್ರೆಯಿಂದ ಯಾವುದೇ ವೈದ್ಯರು ಔಷಧಕ್ಕಾಗಿ ಹೊರಗಡೆಗೆ ಚೀಟಿ ಕೊಡುವಂತಿಲ್ಲ. ಕೊಟ್ಟರೆ ಅಂತಹ ವೈದ್ಯರನ್ನು ತತ್‌ಕ್ಷಣ ಅಮಾನತು ಮಾಡುವ ಆದೇಶ ಈಗಾಗಲೇ ಸರಕಾರದಿಂದ ಬಂದಿದೆ. ಇಲ್ಲಿ ಔಷಧಗಳ ಅಲಭ್ಯತೆ ಕೂಡ ಉಂಟಾಗಬಾರದು. 300 ರೂ. ಗಳ ಔಷಧ 35 ರೂ.ಗೆ ಲಭ್ಯವಾಗುತ್ತದೆ. ಜನರಿಗೆ ಕಡಿಮೆ ದರದಲ್ಲಿ ಔಷಧಗಳು ಲಭ್ಯವಾಗಬೇಕು ಎಂಬ ಉದ್ದೇಶ ಸರಕಾರದ್ದು. ಇಲ್ಲಿ ಕೇವಲ ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಮಾತ್ರ ಔಷಧ ದೊರೆಯುವುದಲ್ಲ, ಬದಲಿಗೆ ಖಾಸಗಿ ಆಸ್ಪತ್ರೆ ರೋಗಿಗಳು, ಯಾವುದೇ ಸಾರ್ವಜನಿಕರು ಇಲ್ಲಿ ಬಂದು ಔಷಧ ಖರೀದಿಸಬಹುದು. ಯಾವುದೇ ನಿಯಮ ನಿರ್ಬಂಧಗಳಿಲ್ಲ ಎಂದರು.
ಸರಕಾರಿ ಆಸ್ಪತ್ರೆಯಿಂದ ಮೆಡಿಕಲ್‌ಗೆ ಚೀಟಿ ಕೊಡಲಾಗುತ್ತಿದೆ ಎಂಬ ಸಾರ್ವಜನಿಕರ ದೂರಿಗೆ ಸ್ಪಂದಿಸಿದ ಶಾಸಕರು ಅಂತಹ ವೈದ್ಯರ ವಿರುದ್ಧ ಅಮಾನತಿಗೆ ಈಗಾಗಲೇ ಆದೇಶ ಇರುವುದನ್ನು ಮನವರಿಕೆ ಮಾಡಿದರು. ಆಸ್ಪತ್ರೆ ಮೆಡಿಕಲ್ ಸಿಬಂದಿ ಖಾಸಗಿ ಮೆಡಿಕಲ್ ಇಟ್ಟುಕೊಂಡ ಕುರಿತೂ ದೂರಲಾಯಿತು. ಎಚ್ಚರಿಕೆಗೆ ಬಗ್ಗದಿದ್ದರೆ ಕ್ರಮ ಜರಗಿಸಲಾಗುವುದು ಎಂದು ಶಾಸಕರು ತಿಳಿಸಿದರು.
ಉಪಸ್ಥಿತಿ
ತಾಲೂಕು ಆರೋಗ್ಯಾಧಿಕಾರಿ ಡಾ| ಕಲಾಮಧು, ವೈದ್ಯಾಧಿಕಾರಿಗಳಾದ ಡಾ| ಆದಂ, ಡಾ| ಶಶಾಂಕ್, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಕೆ. ಸಾಹುಲ್ ಹಮೀದ್, ತಾ. ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ನ.ಪಂ. ಉಪಾಧ್ಯಕ್ಷ ಡಿ. ಜಗದೀಶ್, ಪ್ರಭಾಕರ ಡಿ. ಧರ್ಮಸ್ಥಳ, ಪದ್ಮನಾಭ ಸಾಲ್ಯಾನ್, ಕತಾರ್ ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಮಹಮ್ಮದ್ ಕುಂಞಿ ಉಪಸ್ಥಿತರಿದ್ದರು.
ಬಹುಕಾಲದ ಬೇಡಿಕೆ
ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಆರಂಭಿಸಬೇಕು ಎನ್ನುವುದು ಶಾಸಕರ ಬಹುಕಾಲದ ಬೇಡಿಕೆಯಾಗಿದೆ. ಈಗ ಇದು ನೆರವೇರಿದ್ದು ಇನ್ನಷ್ಟು ಸೌಕರ್ಯ, ಸೌಲಭ್ಯ ಒದಗಿಸಲಾಗುವುದು. ಬಡವರಿಗೆ, ಸಾರ್ವಜನಿಕರಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ಎಲ್ಲ ಕ್ರಮ
ಕೈಗೊಳ್ಳಲಾಗಿದೆ.
ಡಾ| ರಾಮಕೃಷ್ಣ ರಾವ್, ಜಿಲ್ಲಾ
ಆರೋಗ್ಯಾಧಿಕಾರಿ
ಜೆನೆರಿಕ್ ಮಳಿಗೆ, ಡಯಾಲಿಸಿಸ್ ಸೆಂಟರ್
ಜೆನೆರಿಕ್ ಔಷಧ ಮಳಿಗೆಯಲ್ಲಿ ಸರಕಾರಿ ಆಸ್ಪತ್ರೆ ರೋಗಿಗಳು ಮಾತ್ರವಲ್ಲ ತಾಲೂಕಿನ ಯಾವುದೇ ಆಸ್ಪತ್ರೆಯ ರೋಗಿಗಳು ಕಡಿಮೆ ದರದಲ್ಲಿ ಔಷಧ ಪಡೆದುಕೊಳ್ಳಬಹುದು. ಬಿಪಿಎಲ್ , ಎಪಿಎಲ್ ಸಹಿತ ಯಾವುದೇ ರೋಗಿಗಳು ಇಲ್ಲಿ ಉಚಿತವಾಗಿ ಡಯಾಲಿಸಿಸ್ ನಡೆಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.