ಹೆಗ್ಗಡೆಯವರು ಸೇವೆಯಿಂದಲೇ ಗುರುತಿಸಲ್ಪಟ್ಟವರು: ಯದುವೀರದತ್ತ ಒಡೆಯರ್‌


Team Udayavani, Oct 25, 2017, 8:07 AM IST

25-5.jpg

ಬೆಳ್ತಂಗಡಿ: ಸೇವೆ ಮುಖ್ಯ. ಉತ್ತಮ ಸೇವೆ ಅದಕ್ಕಿಂತ ಮುಖ್ಯವಾಗುತ್ತದೆ. ಅಂತಹ ಉತ್ತಮ ಸೇವೆಯಿಂದಾಗಿ ಇಂದು ಧರ್ಮಸ್ಥಳ ಹಾಗೂ ಹೆಗ್ಗಡೆಯವರು ಎಲ್ಲೆಡೆ ಗುರು ತಿಸಲ್ಪಟ್ಟಿದ್ದಾರೆ ಎಂದು ಮೈಸೂರು ಅರಮನೆಯ ಮಹಾರಾಜರಾದ ಯದುವೀರದತ್ತ ಒಡೆಯರ್‌ ಅವರು ಹೇಳಿದರು.

ಅವರು ಮಂಗಳವಾರ ರಾತ್ರಿ ಧರ್ಮ ಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿ ಷೇಕದ ಸುವರ್ಣ ಮಹೋತ್ಸವ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶುಚಿತ್ವದಲ್ಲಿ ರಾಷ್ಟ್ರ ಮಟ್ಟದ ಪುರಸ್ಕಾರ ಗಳಿಸಿರುವ ಧರ್ಮಸ್ಥಳದ ಜತೆ ಸ್ವತ್ಛ ನಗರಿ ಮೈಸೂರಿಗೂ ನಂಟಿದೆ. 1812ರಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ಮೈಸೂರು ಅರಮನೆಯಲ್ಲಿ ನಡೆದಿತ್ತು. ಅನಂತರ ದೇವಸ್ಥಾನದ ಬಳಕೆಗೆ ಶ್ರೀಗಂಧದ ಪೂರೈಕೆ ಮಾಡಲಾಗುತ್ತಿತ್ತು. ನನ್ನ ತಂದೆ ಇಲ್ಲಿಗೆ ಗ್ರಂಥಗಳನ್ನು ನೀಡಿದ್ದರು. ಶಾಂತಿವನದಲ್ಲಿ ಸಾಧಕರಾಗಿದ್ದರು. ಈ ಸಂಬಂಧ ಇಂದಿಗೂ ಮುಂದುವರಿದಿದೆ ಎಂದರು.

ನಾನು ನನ್ನಿಂದ ಅಲ್ಲ
ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತ ನಾಡಿ, ಕ್ಷೇತ್ರದ ಮಹತ್ವ, ಸತ್ವ ನನ್ನಿಂದ ಅನೇಕ ಕೆಲಸ ಮಾಡಿಸಿದೆ. ನನ್ನಿಂದಾಗಿ ಆದದ್ದು ಯಾವುದೂ ಇಲ್ಲ. ಪಟ್ಟಾಧಿ ಕಾರಿಯಾ ಗಿರುವುದೇ ನನ್ನ ವ್ಯಕ್ತಿತ್ವ. ಅದಿಲ್ಲದಿದ್ದರೆ ನಾನು ಶೂನ್ಯ. ಎಲ್ಲ ಕೆಲಸಗಳಿಗೂ ಅದೇ ನಾಂದಿ, ಅದೇ ಅಂತಸ್ಸತ್ವ. ನಾನು ಯಾವತ್ತೂ ಪೀಠ ವನ್ನು ಹೊರೆಯೆಂದು ಕಾಣಲಿಲ್ಲ. ಆದ್ದರಿಂದ ಸಲೀಸಾಗಿ ನಿರ್ವಹಿಸಿದೆ ಎಂದರು.  

ನೂತನ ಯೋಜನೆ
ಇದೇ ಸಂದರ್ಭ ಹಲವು ನೂತನ ಯೋಜನೆಗಳನ್ನು  ಡಾ| ವೀರೇಂದ್ರ ಹೆಗ್ಗಡೆ ಅವರು ಘೋಷಿಸಿದರು.  ಬೆಂಗಳೂರಿನ ನೆಲ ಮಂಗಲ ಬಳಿ ಈ ವರ್ಷ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆ ಆರಂಭಿಸಲಾಗುವುದು. ಮಂಗಳೂರಿನಲ್ಲಿ ರಾಮಕೃಷ್ಣ ಮಲ್ಯ ಅವರು ನೀಡಿದ ಭೂಮಿ ಯಲ್ಲಿ ಪ್ರೌಢ ಶಾಲೆ ತೆರೆಯಲಾಗುವುದು. ಉಡುಪಿ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಹೊಸ ಆಸ್ಪತ್ರೆ ವಿಭಾಗ ಆರಂಭಿಸಲಾಗುವುದು. ಉಡುಪಿ ಹಾಗೂ ಧಾರವಾಡ ಕಾಲೇಜಿನಲ್ಲಿ ನ್ಯಾನೋ ಟೆಕ್ನಾ ಲಜಿ ಯಿಂದ ಸ್ಟೆಮ್‌ಸೆಲ್ಸ್‌ ವರೆಗೆ ಹೆಚ್ಚಿನ ವೈದ್ಯಕೀಯ ಸಂಶೋಧನೆಗೆ ಆದ್ಯತೆ ನೀಡಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು. 

ಧರ್ಮದ ವ್ಯಾಖ್ಯೆ ಹಿಗ್ಗಿಸಿದರು
ಲೇಖಕ, ನಿವೃತ್ತ ಪ್ರಾಚಾರ್ಯ ಗುರುರಾಜ ಕರ್ಜಗಿ ಅಭಿನಂದನಾ ಭಾಷಣ ಮಾಡಿ, ವೀರೇಂದ್ರ ಹೆಗ್ಗಡೆ ಯವರು ಧರ್ಮದ ವ್ಯಾಖ್ಯೆ ಯನ್ನು ಹಿಗ್ಗಿಸಿದರು. ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಾರ್ಥಕ್ಯ ಕಂಡರು. ಯಾವುದೇ ವಸ್ತು ಹೆಚ್ಚು ರೂಪಗಳಲ್ಲಿ ಬದುಕಿದ್ದರೆ ಸ್ಥಿರತೆ ಬರುತ್ತದೆ. ಮನುಷ್ಯ ಹೆಚ್ಚು ಸ್ತರಗಳಲ್ಲಿ ವಿಸ್ತಾರವಾಗಿ ಕೆಲಸ ಮಾಡಿದರೆ ಬದುಕು ಗಟ್ಟಿಯಾಗುತ್ತದೆ. ನಿಷ್ಕಲ್ಮಶವಾಗಿ ಇತರರು ಬೊಟ್ಟು ಮಾಡ ದಂತೆ ಬದುಕಿದವರು ಹೆಗ್ಗಡೆ ಯವರು. ಅವರು ಎಲ್ಲರ ಮನಸ್ಸನ್ನು ಚೈತನ್ಯರೂಪಿಯಾಗಿ ತುಂಬಿಕೊಂಡಿದ್ದಾರೆ ಎಂದರು.

ವ್ಯವಸ್ಥೆಯ ಜತೆ ಸಂಸ್ಕೃತಿ
ಸಮಾಜದಲ್ಲಿ ವ್ಯವಸ್ಥೆ ಕಟ್ಟಲು ವ್ಯಕ್ತಿ ಬೇಕು. ವ್ಯಕ್ತಿ ತುಂಬ ದೊಡ್ಡವ ರಾದಾಗ ವ್ಯವಸ್ಥೆ ಬಿದ್ದು ಹೋಗು ತ್ತದೆ. ಸಮರ್ಥ ವ್ಯಕ್ತಿಗಳು ಮಾತ್ರ ವ್ಯವಸ್ಥೆ ಹಾಗೂ ವ್ಯಕ್ತಿತ್ವವನ್ನು ಬೆಳೆಸು ತ್ತಾರೆ. ಅಂತಹ ಸಾಧನೆ ಮಾಡಿ ದವರ ಪೈಕಿ ವಿವೇಕಾನಂದ ಹಾಗೂ ವೀರೇಂದ್ರ ಹೆಗ್ಗಡೆ ಅವರು ಮಾತ್ರ ಮುಂಚೂಣಿ ಯಲ್ಲಿದ್ದಾರೆ. ವ್ಯವಸ್ಥೆಯನ್ನು ಬೆಳೆಸು ವವರು ಸಂಸ್ಕೃತಿಯನ್ನು ನಿರ್ಮಿಸು ತ್ತಾರೆ. ಮೌಲ್ಯದ ಪ್ರತಿನಿಧಿಯಾಗಿ ನಿಲ್ಲುವುದು ಮಾಡಿದ ಕೃತಿಗಳಿಂದ ಎಂದು ಗುರುರಾಜ ಕರ್ಜಗಿ ಅವರು ಹೇಳಿದರು.

ಅರಣ್ಯ ಸಚಿವ ಬಿ. ರಮಾನಾಥ ರೈ ಮಾತನಾಡಿ, ಹೆಗ್ಗಡೆಯವರ ತ್ಯಾಗದ ಕುರಿತು ಎಲ್ಲೆಡೆ ಮೆಚ್ಚುಗೆಯಿದೆ. ಧಾರ್ಮಿಕ ನೆಲೆಗಟ್ಟಿನ ಅಡಿಯಲ್ಲಿ ಧರ್ಮಪೀಠದ ನೆಲೆಯಲ್ಲಿ ಎಲ್ಲ ಜಾತಿ ಧರ್ಮದವರ ಪ್ರೀತಿಗೆ ಪಾತ್ರ ರಾದವರು ಹೆಗ್ಗಡೆಯವರು ಎಂದು ಹೇಳಿದರು.

ಹೇಮಾವತಿ ವೀ. ಹೆಗ್ಗಡೆ, ಮಾಣಿಲ ಶ್ರೀಧಾಮದ ಶ್ರೀ ಮೋಹನ ದಾಸ ಸ್ವಾಮೀಜಿ, ಮಾಜಿ ಸಚಿವ, ಶಾಸಕ ಅಭಯಚಂದ್ರ  ಜೈನ್‌, ಡಿ. ಸುರೇಂದ್ರ ಕುಮಾರ್‌, ಅನಿತಾ ಸುರೇಂದ್ರ ಕುಮಾರ್‌, ಡಾ| ನಿರಂಜನ್‌ ಕುಮಾರ್‌, ಪದ್ಮಲತಾ, ಸುಪ್ರಿಯಾ ಹರ್ಷೇಂದ್ರ ಕುಮಾರ್‌, ರಾಜೇಂದ್ರ ಕುಮಾರ್‌, ನೀತಾ ಆರ್‌. ಕುಮಾರ್‌, ಅಮಿತ್‌ ಕುಮಾರ್‌, ಶ್ರದ್ಧಾ ಅಮಿತ್‌ ಕುಮಾರ್‌, ಶ್ರೇಯಸ್‌ ಕುಮಾರ್‌, ನಿಶ್ಚಲ್‌ ಕುಮಾರ್‌ ಉಪಸ್ಥಿತರಿದ್ದರು.

ಸಮ್ಮಾನ
ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ| ಎಸ್‌. ಪ್ರಭಾಕರ್‌ ಅವರಿಗೆ ಸುಜ್ಞಾನಪ್ರಭಾ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಕ್ಷೇತ್ರದಲ್ಲಿ ಸುದೀರ್ಘ‌ ಅವಧಿ ಸೇವೆ ಸಲ್ಲಿಸಿದ ಮಣೆಗಾರ್‌ ಅನಂತ ಪದ್ಮನಾಭ ಭಟ್‌, ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ, ಜಮಾ ಉಗ್ರಾಣ ಮುತ್ಸದ್ದಿ ಬಿ. ಭುಜಬಲಿ, ಹೆಗ್ಗಡೆಯವರ ಕಾರ್ಯ ದರ್ಶಿ ಕೃಷ್ಣ ಸಿಂಗ್‌, ಕಟ್ಟಡ ವಿಭಾಗದ ಗೋಪಾಲ್‌ ಮೆನನ್‌, ಚಾಲಕ ಧನಕೀರ್ತಿ ಶೆಟ್ಟಿ, ಚಾಲಕ ದಿವಾಕರ ಪ್ರಭು ಅವರನ್ನು ಕ್ಷೇತ್ರದ ಪರವಾಗಿ ಸಮ್ಮಾನಿಸಲಾಯಿತು. ಸ್ವರ್ಣಾನುಭವ ಸ್ಮರಣಸಂಚಿಕೆ ಬಿಡುಗಡೆ ಮಾಡ ಲಾಯಿತು. ಸಮ್ಮಾನಿತರ ಪರವಾಗಿ ಅನಂತ ಪದ್ಮನಾಭ ಭಟ್‌ ಹಾಗೂ ಸೀತಾರಾಮ ತೋಳ್ಪಾಡಿತ್ತಾಯ ಅನಿಸಿಕೆ ಹೇಳಿದರು.

ಲಕ್ಷ್ಮೀನಾರಾಯಣ ರಾವ್‌, ಎ.ವಿ. ಶೆಟ್ಟಿ ಅವರು ಸಮ್ಮಾನ ಪತ್ರ ವಾಚಿ ಸಿ ದರು. ಗ್ರಾಮಾಭಿವೃದ್ಧಿ ಯೋಜನೆ ಹಣಕಾಸು ನಿರ್ದೇಶಕ ಶಾಂತಾರಾಮ ಪೈ ಹಾಗೂ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್‌ ಸ್ವಾಗತಿಸಿದರು. ಉಪನ್ಯಾಸಕಿ ಶ್ರುತಿ ಜೈನ್‌ ರೆಂಜಾಳ, ಶಿಕ್ಷಕ ರಾಮಚಂದ್ರ ರಾವ್‌ ನಿರ್ವಹಿಸಿದರು. ಶುಭಚಂದ್ರರಾಜ್‌ ವಂದಿಸಿದರು.

    ರಾಮಭಕ್ತನಾಗುವುದು ಸುಲಭ. ಆದರೆ ರಾಮ ನಾಗು ವುದು, ರಾಮನ ಜತೆ ಬದುಕು ವುದು ಅಗ್ನಿದಿವ್ಯದಂತೆ ಕಷ್ಟ.
– ಗುರುರಾಜ ಕರ್ಜಗಿ

    ನಿಷ್ಠಾವಂತ ಕೆಲಸಗಾರರೇ  ನನ್ನ ಆಸ್ತಿ. ನಾವು ಕೊಡುವ ಪ್ರೀತಿ ಯನ್ನು ಅವರು ಸ್ವೀಕರಿ ಸುವ ರೀತಿ ಅವರ ನಿಷ್ಠೆಗೆ ಕಾರಣ.
    ಅಧ್ಯಾತ್ಮ ಹಾಗೂ ಸಮಾಜ ಸೇವೆಯನ್ನು ಪ್ರತ್ಯೇಕಿಸ ಲಾಗದು. ಜನತಾ ಸೇವೆಯೇ ಜನಾರ್ದನನ ಸೇವೆ.

 ಡಾ| ವೀರೇಂದ್ರ ಹೆಗ್ಗಡೆ

ಧರ್ಮಸ್ಥಳ: ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ  ಯದುವೀರದತ್ತ ಒಡೆಯರ್‌ ಅವರು  ಮಾತನಾಡಿದರು.

ಟಾಪ್ ನ್ಯೂಸ್

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

death

Puttur: ಎಲೆಕ್ಟ್ರಿಕ್‌ ಆಟೋ ರಿಕ್ಷಾ ಪಲ್ಟಿ; ಚಾಲಕ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Accident-logo

Putturu: ಬೈಕ್‌-ಪಿಕಪ್‌ ಢಿಕ್ಕಿ: ಇಬ್ಬರು ಸವಾರರಿಗೆ ಗಂಭೀರ ಗಾಯ

Arrest

Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.