ಸವಲತ್ತು ವಿಮುಖವಾಗಿದ್ದ ಕುಟುಂಬಕ್ಕೆ ಚೈತನ್ಯ
Team Udayavani, Sep 29, 2018, 11:12 AM IST
ಉಪ್ಪಿನಂಗಡಿ: ಹದಿನೆಂಟು ವರ್ಷಗಳಿಂದ ಸರಕಾರಿ ಸವಲತ್ತುಗಳಿಂದ ವಿಮುಖನಾಗಿದ್ದ ಬೆಳ್ತಂಗಡಿ ತಾ|ಬಂದಾರು ಗ್ರಾ.ಪಂ. ವ್ಯಾಪ್ತಿಯ ಮೊಗ್ರು ಗ್ರಾಮದ ಪಚ್ಚಡ್ಕ ಮನೆ ನಿವಾಸಿ ಚೆನ್ನ ಮೇರ ಅವರಿಗೆ ಬಂದಾರಿನಲ್ಲಿ ನಡೆದ ಸರಕಾರಿ ಕಾರ್ಯಕ್ರಮದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಚುನಾವಣಾ ಗುರುತು ಪತ್ರ ವಿತರಿಸಲಾಯಿತು.
ದಿ| ಹುಕ್ರ ಮೇರ ಎಂಬವರ ಮಗನಾದ ಚೆನ್ನ ಮೇರ ಎಂಬವರ ಬದುಕಿನಲ್ಲಿ ಮೂಡಿದ್ದ ಅನ್ಯಾಯವೆಂಬ ಭಾವ ಅವರನ್ನು ನಾಗರಿಕ ಸಮಾಜದಿಂದ ದೂರವಿರುವಂತೆ ಮಾಡಿತು. ತನಗೆ ಮಂಜೂರಾದ ಮನೆಯನ್ನು ಬೇರಾರೋ ಕಬಳಿಸಿದರೆಂಬ ಭಾವನೆಯಿಂದ ತನಗಿನ್ನು ಪಂ. ಕಚೇರಿ ಬೇಡ, ಚುನಾವಣೆ ಬೇಡ, ಪಡಿತರ ಬೇಡ, ವಿದ್ಯುತ್ ಬೇಡ, ಸೀಮೆ ಎಣ್ಣೆ ಬೇಡ ಎಂದೆಲ್ಲಾ ಪಟ್ಟು ಹಿಡಿದು, ನ್ಯಾಯಕ್ಕಾಗಿ ಪದೇ ಪದೇ ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿದ್ದವರ ಬದುಕಿನಲ್ಲಿ ಇದೀಗ ವಿಶ್ವಾಸದ ಆಶಾ ಕಿರಣ ಮೂಡಿದೆ. ಶಾಸಕ ಹರೀಶ್ ಪೂಂಜಾ, ವಿ.ಪರಿಷತ್ ಸದಸ್ಯ ಹರೀಶ್ ಕುಮಾರ್, ಪಂ. ಅಧ್ಯಕ್ಷ ಉದಯ ಕುಮಾರ್ ಉಪಸ್ಥಿತರಿದ್ದರು. ಈ ಕುರಿತು ಉದಯವಾಣಿ 8 ತಿಂಗಳ ಹಿಂದೆ ಸಚಿತ್ರ ವರದಿ ಪ್ರಕಟಿಸಿತ್ತು.
ನೋವನ್ನು ನುಂಗಿದರು
ಚೆನ್ನ ಮೇರ ಅವರಿಗೆ ಸರಕಾರಿ ದಾಖಲೆಗಳನ್ನು ವಿತರಿಸಿ ಮಾತನಾಡಿದ ತಾ.ಪಂ. ಸದಸ್ಯ ಕೃಷ್ಣಯ್ಯ ಆಚಾರ್ಯ ಅವರು ಉಪ್ಪಿನಂಗಡಿಯ ನಂದ ಕುಮಾರ್ ಎಂಬ ಪೊಲೀಸ್ ಅಧಿಕಾರಿ ತೋರಿದ ಮಾನವೀಯ ಸ್ಪಂದನೆಯಿಂದಾಗಿ ಚೆನ್ನ ಮೇರ ಎಂಬ ಮುಗ್ಧ ವ್ಯಕ್ತಿಯ ಬದುಕಿನ ಕರಾಳ ಛಾಯೆ ಸಮಾಜಕ್ಕೆ ಅನಾವರಣವಾಯಿತು. ಅವರ ಹಠದ ಹೊರತಾಗಿಯೂ ಅವರಿಗೆ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಚುನಾವಣಾ ಗುರುತು ಪತ್ರವನ್ನು ಒದಗಿಸಲು ಶ್ರಮಿಸಿದ ಜನ ಪ್ರತಿನಿಧಿಗಳ ಸಹಕಾರದಿಂದ ಚೆನ್ನರ ಮುನಿದಿದ್ದ ಮನಸು ನಲಿಯುವಂತಾಗಿದೆ. ಕಳೆದ 18 ವರ್ಷಗಳ ನೋವನ್ನು ಮರೆತು, ನಾಗರಿಕ ಸಮಾಜದೊಂದಿಗೆ ಸುಂದರ ಬದುಕು ನಡೆಸುವಂತಾಗಲಿ ಎಂದು ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.