ನದಿ-ಕೊಳವೆಬಾವಿ ಬತ್ತಿದರೆ ಜಲಕ್ಷಾಮ!


Team Udayavani, Dec 22, 2017, 3:12 PM IST

22-Dec-13.jpg

ಪುತ್ತೂರು : ಕುಮಾರಧಾರಾ ನದಿ ಬತ್ತಿದರೆ 60 ಲಕ್ಷ ಲೀಟರ್‌ ನೀರಿಗೇನು ವ್ಯವಸ್ಥೆ ಅಂದರೆ, ನಗರಸಭೆ ಕೊಳವೆಬಾವಿ ಕಡೆ ಕೈ ತೋರಿಸುತ್ತಿದೆ. ಕೊಳವೆಬಾವಿಯೂ ಕೈ ಕೊಟ್ಟರೇನು ದಾರಿ ಅಂದರೆ, ನಗರ ಸಭೆಯ ಬಳಿ ಉತ್ತರವಿಲ್ಲ ! ದಿನವೊಂದಕ್ಕೆ 75 ಲಕ್ಷ ಲೀಟರ್‌ ನೀರು ಅಗತ್ಯವಿರುವ ನಗರಕ್ಕೆ ನೆಕ್ಕಿಲಾಡಿಯ ಕುಮಾರಧಾರಾ ಡ್ಯಾಂ ಪ್ರಮುಖ ಆಧಾರ. 60 ಲಕ್ಷ ಲೀಟರ್‌ ಡ್ಯಾಂನಿಂದ ಬಂದರೆ ಇನ್ನುಳಿದ 15 ಲಕ್ಷ ಲೀಟರ್‌ ನೀರನ್ನು 144 ಕೊಳವೆಬಾವಿಗಳು ಪೂರೈಸುತ್ತವೆ.

ನದಿಯ ಮಟ್ಟ ಹಾಗೂ ನೀರು ಹರಿವಿನ ಪ್ರಮಾಣ ಕುಸಿಯುತ್ತ ಸಾಗಿದ್ದು, ಡ್ಯಾಂ ನೀರನ್ನೇ ನಂಬಿ ಕೂರುವಂತಿಲ್ಲ. ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಕೊಳವೆಬಾವಿಗಳ ಮೇಲೂ ನಂಬಿಕೆ ಇಡುವಂತಿಲ್ಲ. ಹಾಗಾಗಿ ಬೇಸಗೆಯಲ್ಲಿ ನೀರಿನ ಬವಣೆಯ ಅಪಾಯ ಇದ್ದೇ ಇದೆ.

ನಗರಸಭೆಯ ನೀರು ಪೂರೈಕೆ
ನಗರದಲ್ಲಿ 53,061 ಜನಸಂಖ್ಯೆ ಇದೆ. 14,948 ಮನೆಗಳಿವೆ. ಮನೆ, ಗೃಹೇತರ, ವಾಣಿಜ್ಯ ಆಧಾರಿತ ಸೇರಿ 12,943 ನಳ್ಳಿ ಸಂಪರ್ಕ ಇವೆ. ಪ್ರಸ್ತುತ ಹೊಸ ನಳ್ಳಿ ಸಂಪರ್ಕಕ್ಕಾಗಿ 2 ಸಾವಿರ ಅರ್ಜಿಗಳು ಬಂದಿವೆ. ನೀರು ಪೂರೈಕೆಗೆ ಸಂಬಂಧಿಸಿ ನಗರವನ್ನು 8 ವಲಯವನ್ನಾಗಿ ವಿಭಜಿಸಲಾಗಿದೆ.  ಕ್ಕಮುಟ್ನೂರು, ಪಟ್ನೂರು, ಕರ್ಮಲ, ಸೀಟಿಗುಡ್ಡೆ, ಕಬಕ ಲಿಂಗದಗುಡ್ಡೆ, ಬಲಾ°ಡು, ಬೀರಮಲೆ ಭಾಗದಲ್ಲಿ 50 ಸಾವಿರ, 1 ಲಕ್ಷ, 2, 6, 9, 15 ಲಕ್ಷ ಲೀಟರ್‌ ನೀರು ಸಂಗ್ರಹವಾಗುವ ಟ್ಯಾಂಕ್‌ಗಳಿವೆ.

ಒಬ್ಬನಿಗೆ 15 ಲೀ. ಕೊರತೆ
ನಗರಕ್ಕೆ ಪ್ರತಿದಿನ ಬೇಕಾಗುವ ನೀರಿನ ಪ್ರಮಾಣ 7.5 ಎಂಎಲ್‌ಡಿ. 6.5 ಎಂಎಲ್‌ಡಿ ನೆಕ್ಕಿಲಾಡಿ ಡ್ಯಾಂನಿಂದ, 1.5 ಎಂಎಲ್‌ಡಿ ಕೊಳವೆಬಾವಿಯಿಂದ ಬಳಸಲಾಗುತ್ತಿದೆ. ನಿಯಮದ ಪ್ರಕಾರ ಪ್ರತಿ ವ್ಯಕ್ತಿಗೆ ದಿನವೊಂದಕ್ಕೆ 135 ಲೀಟರ್‌ ನೀರು ನೀಡಬೇಕು. ನಗರಸಭೆ ಈಗ ನೀಡುತ್ತಿರುವ ನೀರಿನ ಪ್ರಮಾಣ 120 ಲೀಟರ್‌ ಮಾತ್ರ. ಇಲ್ಲಿ ವ್ಯಕ್ತಿಯೊಬ್ಬನಿಗೆ 15 ಲೀಟರ್‌ ಕೊರತೆ ಇದೆ. ನಗರದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿದರೆ ದಿನವೊಂದಕ್ಕೆ 7,95,915 ಲಕ್ಷ ಲೀಟರ್‌ ನೀರಿನ ಕೊರತೆಯಿದೆ. ನೀರಿನ ಅಭಾವ ತಪ್ಪಿಸಲು ಕುಡ್ಸೆಂಪ್‌ ಯೋಜನೆಯಡಿ 15 ಕೋಟಿ ರೂ. ವ್ಯಯಿಸಲು ಪ್ರಾಥಮಿಕ
ಸರ್ವೆ ಕಾರ್ಯ ನಡೆದಿದೆ. ವಿಪರ್ಯಾಸ ಅಂದರೆ ನೀರು ತರಲು ಉದ್ದೇಶಿಸಿರುವ ಕುಮಾರಧಾರಾ ನದಿಯ ನೆಕ್ಕಿಲಾಡಿ ಬಳಿ ಈ ಬೇಸಗೆ ಕಾಲದಲ್ಲಿ ನೀರಿದೆಯೋ ಎಂಬ ಚಿಂತನೆ ಮಾಡಿಲ್ಲ.

ಟ್ಯಾಂಕರ್‌ ಬಳಕೆ
ಅಭಾವವಿರುವ ಕೆಲವು ಪ್ರದೇಶಗಳಲ್ಲಿ ಎರಡು – ಮೂರು ದಿನಗಳಿಗೊಮ್ಮೆ ನಗರಸಭೆಯಿಂದ ನೀರು ಸರಬರಾಜು ಮಾಡಲಾಗಿತ್ತು. ನಗರದ ಸಾಮೆತ್ತಡ್ಕ, ಬನ್ನೂರಿನ ಆಶ್ರಯ ಕಾಲನಿ, ಮಚ್ಚಿಮಲೆ ಭಾಗಗಳಿಗೆ ನೀರಿನ ಹರಿವು ಸರಾಗವಿಲ್ಲದೆ ಈ ಕಡೆಗಳಿಗೆ ಟ್ಯಾಂಕರ್‌ಗಳಲ್ಲಿ ನೀರನ್ನು ಸರಬರಾಜು ಮಾಡಲಾಗಿತ್ತು.

ಮಳೆಯ ಸಂರಕಣೆಯಿಲ್ಲ
ಹೊಸ ಕಟ್ಟಡ ರಚನೆಯ ಸಂದರ್ಭದಲ್ಲಿ ಮಳೆ ಕೊಯ್ಲ ಪದ್ಧತಿ ಪಾಲಿಸಬೇಕು ಎಂಬುವುದು ಸರಕಾರದ ಕಡ್ಡಾಯ ಆದೇಶ. ವರ್ಷಕ್ಕೆ ನೂರಾರು ಹೊಸ ಕಟ್ಟಡ ನಿರ್ಮಾಣ ವಾಗುತ್ತಿದ್ದರೂ, ಮಳೆ ಕೊಯ್ಲು ಅಳವಡಿಸಿರುವುದು ಒಂದೆರಡು ಕಟ್ಟಡಗಳಲ್ಲಿ ಮಾತ್ರ. 144 ಕೊಳವೆಬಾವಿ ಇದ್ದರೂ, ಜಲ ಮರುಪೂರಣ ಘಟಕವೇ ಇಲ್ಲ. ಹಾಗಾಗಿ ಇಲ್ಲಿ ನೀರಿನ ಸಂರಕ್ಷಣೆಗೆ ಆದ್ಯತೆಯೇ ನೀಡಿಲ್ಲ.

ಕೊಳವೆಬಾವಿ ಇದೆ
ನಗರದಲ್ಲಿ 144 ಕೊಳವೆ ಬಾವಿ ಇದ್ದು, ನೀರಿನ ಪೂರೈಕೆಗೆ ಬಳಸಲು ಸಿದ್ಧವಾಗಿದೆ. ಹೊಸ ನಳ್ಳಿ ಸಂಪರ್ಕಕ್ಕಾಗಿ 2 ಸಾವಿರಕ್ಕೂ ಮಿಕ್ಕಿ ಅರ್ಜಿ ಬಂದಿದ್ದು, ಕನೆಕ್ಷನ್‌ಗೆ ಕ್ರಮ ಕೈಗೊಳ್ಳಲಾಗುವುದು. ಡ್ಯಾಂನಲ್ಲಿ ನೀರು ಕಡಿಮೆ ಆದರೂ, ನಗರಕ್ಕೆ ನೀರಿನ ಸಮಸ್ಯೆ ಬಾರದಂತೆ ನಗರಸಭೆ ಕೊಳವೆಬಾವಿ ವ್ಯವಸ್ಥೆಯನ್ನು ಹೊಂದಿದೆ.
ರೂಪಾ ಶೆಟ್ಟಿ
ಪೌರಾಯುಕ್ತೆ, ನಗರಭೆ

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Mandya:ಹಲವು ರೋಗ ನಿವಾರಕ; ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ

ct rav

C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

1(1

Sullia: ವಿಎಒ ಹೊಸ ಕಟ್ಟಡಕ್ಕೆ ಅನುದಾನವಿಲ್ಲ !

8-belthangady

Belthangady: ಬೈಕಿಗೆ ಕಾರು ಢಿಕ್ಕಿ, ಓಡಿಲ್ನಾಳದ ಯುವಕ ಸಾವು

4-train

Train; ಮಂಗಳೂರು-ಪುತ್ತೂರು ಪ್ಯಾಸೆಂಜರ್‌ ರೈಲು ಸುಬ್ರಹ್ಮಣ್ಯಕ್ಕೆ?

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

horatti

C.T. Ravi; ಅವಾಚ್ಯ ಶಬ್ದಗಳಿಂದ ನಿಂದಿಸಿದ ದಾಖಲೆ ಇಲ್ಲ: ಮಹತ್ವ ಪಡೆದ ಸಭಾಪತಿ ಹೇಳಿಕೆ

TuluMovie; Middle Class Family is ready to hit the screens: Release date has arrived

TuluMovie; ತೆರೆಗೆ ಬರಲು ಸಿದ್ದವಾಯ್ತು ಮಿಡಲ್‌ ಕ್ಲಾಸ್‌ ಫ್ಯಾಮಿಲಿ: ರಿಲೀಸ್‌ ದಿನಾಂಕ ಬಂತು

kejriwal-2

BJP ಪೂರ್ವಾಂಚಲಿಗಳನ್ನು ರೋಹಿಂಗ್ಯಾಗಳೆಂದು ಮತಗಳನ್ನು ಅಳಿಸುತ್ತಿದೆ: ಕೇಜ್ರಿವಾಲ್ ಆರೋಪ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

Gold & Cash: ಕಾಡಿನ ಬಳಿ ನಿಲ್ಲಿಸಿದ್ದ ಕಾರಿನಲ್ಲಿ 52 ಕೆ.ಜಿ ಚಿನ್ನ, 9 ಕೋಟಿ ನಗದು ಪತ್ತೆ

1-ewewqe

Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.