ಸೂಪರ್ ಬೈಕ್ ಇದ್ರೆ ಲೈಫೇ ಸೂಪರ್!
Team Udayavani, May 4, 2018, 3:14 PM IST
ಬೈಕ್ ರೈಡಿಂಗ್ ಅಂದ್ರೆ ಯುವಕರಿಗೆ ತೀರದ ಹುಮ್ಮಸ್ಸು. ಸಾಮಾನ್ಯ ಬೈಕ್‌ಗಳಲ್ಲಿ ಅವರಿಗೀಗ ಆಸಕ್ತಿ ಇಲ್ಲ. ಪರಿಣಾಮ ಆಧುನಿಕತೆಗೆ ತಕ್ಕಂತೆ ಭಾರತದಲ್ಲೂ ಸೂಪರ್ ಬೈಕ್‌ಗಳ ಕ್ರೇಜ್ ಶುರುವಾಗಿದೆ.
ಏಕೆ ಈ ಕ್ರೇಜ್ ?
ವಿಶ್ವದ ಅತಿ ದೊಡ್ಡ ಬೈಕ್ ಮಾರುಕಟ್ಟೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ. ಐಷಾರಾಮಿ, ಸೂಪರ್ ಲುಕ್, ಭರ್ಜರಿ ಪವರ್ ಇತ್ಯಾದಿಗಳ ಕಾರಣದಿಂದ ಸೂಪರ್ ಬೈಕ್ಸ್ ಇಷ್ಟ ಪಡುವವರ ಸಾಲು ದೊಡ್ಡದಿದೆ. ಜೀವನ ಮಟ್ಟ ಸುಧಾರಣೆಯಾಗುತ್ತಿದ್ದಂತೆ, ಹೊಸ ತಂತ್ರಜ್ಞಾನದ, ಭಾರೀ ಶಕ್ತಿ ಸಾಮರ್ಥ್ಯದ ಬೈಕ್ ಹೊಂದುವುದು ಈಗ ಫ್ಯಾಶನ್ ಆಗಿದೆ. ಪರಿಣಾಮ 2014ರ ಅನಂತರದಲ್ಲಿ ಇದಕ್ಕೆ ದೊಡ್ಡ ಮಾರುಕಟ್ಟೆ ಭಾರತದಲ್ಲಿ ಸೃಷ್ಟಿಯಾಗಿದೆ.
ವಿವಿಧ ಮಾದರಿಗಳು
ಸೂಪರ್ ಬೈಕ್‌ಗಳಲ್ಲಿ ನ್ಪೋರ್ಟ್ಸ್, ಕ್ರೂಸರ್, ಅಡ್ವೆಂಚರ್, ಕ್ಲಾಸಿಕ್ ಮಾದರಿಗಳಿವೆ. ಕ್ರೂಸರ್ ಉದ್ದವಿದ್ದು, ತಿರುಗಾಟಕ್ಕೆ ಸೂಕ್ತವಾದರೆ ಅಡ್ವೆಂಚರ್ ದುರ್ಗಮ ಪ್ರದೇಶದಲ್ಲೂ ಸಾಗುವಂತೆ ಟೂರಿಂಗ್‌ಗೆ ಹೇಳಿಮಾಡಿಸಿದ್ದು. ಇನ್ನು ಸ್ಪೋರ್ಟ್ಸ್ ಟ್ರ್ಯಾಕ್ ರೇಸಿಂಗ್‌ಗೆ, ಕ್ಲಾಸಿಕ್ ಹಳೆಯ ಬೈಕ್‌ಗಳ ರೀತಿ ಸ್ಟೈಲ್, ಆರಾಮದಾಯಕ ಸವಾರಿಗೆ ಸೂಕ್ತ.
ಭಾರತದಲ್ಲಿ ಯಾವುದೆಲ್ಲ ಇವೆ?
ಹಾರ್ಲೆಡೆವಿಡ್ಸನ್, ಸುಜುಕಿ, ಕವಾಸಾಕಿ, ಯಮಹಾ, ಟ್ರಿಂಫ್, ಡ್ಯುಕಾಟಿ, ಕೆಟಿಎಂ, ಹೋಂಡಾ, ಇಂಡಿಯಾನ, ಹೊಯಿಸಂಗ್, ಬಿಎಂಡಬ್ಲ್ಯೂ, ಮೋಟೋ ಗುಜ್ಜಿ ಕಂಪೆನಿಗಳ ಹಲವು ಮಾಡೆಲ್‌ಗಳು ಭಾರತದಲ್ಲಿ ಲಭ್ಯವಿವೆ.
ಕಾರುಗಳಿಗಿಂತ ಅಧಿಕ ಸಾಮರ್ಥ್ಯ
ಸೂಪರ್ ಬೈಕ್‌ಗಳು 500 ಸಿಸಿ ಎಂಜಿನ್ ಸಾಮರ್ಥ್ಯಕ್ಕಿಂತ ಮೇಲ್ಪಟ್ಟು 1800 ಸಿಸಿ ತನಕ ಲಭ್ಯವಿದೆ. ಹಾಗಾಗಿ ಇದು ಸಾಮಾನ್ಯ ಕಾರುಗಳಿಂದಲೂ ಅಧಿಕ ಪವರ್ ಉಳ್ಳದ್ದಾಗಿದ್ದು ಇದನ್ನು ಓಡಿಸುವುದೇ ಒಂದು ಮಜಾ ಹಾಗೂ ಇವುಗಳಲ್ಲಿ ಟ್ರಾಕ್ಷನ್ ಕಂಟ್ರೋಲ್, ಅಡ್ವೆಂಚರ್ ರೈಡ್‌ಗೆ ಪೂರಕ ಫೀಚರ್‌ಗಳು, ಕ್ರೂಸ್ ಮೋಡ್, ಜಿಪಿಎಸ್, ಎಬಿಎಸ್ ಇತ್ಯಾದಿಗಳಿವೆ. ಅತಿ ಸಾಮರ್ಥ್ಯ ಕಾರಣ ಇವುಗಳು 200 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಓಡಬಲ್ಲದು.
ಭಾರತದಲ್ಲೇ ಜೋಡಣೆ
ಎಲ್ಲ ಸೂಪರ್‌ಬೈಕ್‌ಗಳು ಭಾರತದಲ್ಲಿ ತಯಾರಾಗುತ್ತಿಲ್ಲ. ಹೆಚ್ಚಿನವು ಆಮದಾಗುತ್ತವೆ. ಇನ್ನು ಕೆಲವು ಬಿಡಿಭಾಗ ಆಮದು ಮಾಡಿ ಇಲ್ಲೇ ಜೋಡಣೆಯಾಗುತ್ತವೆ. ವಿದೇಶದಿಂದ ಆಮದಾಗುವ ಬೈಕ್ ಗಳಿಗೆ ಆಮದು ಸುಂಕ ಹೆಚ್ಚು. ಇದಕ್ಕೆ ಶೇ.125ರಷ್ಟು ಹೆಚ್ಚು ಬೆಲೆ ತೆರಬೇಕು. ಪರಿಣಾಮ ಹಾರ್ಲೆಡೆವಿಡ್ಸನ್, ಟ್ರಿಂಫ್, ಸುಝುಕಿ, ಹೋಂಡಾಗಳು ಇಲ್ಲೇ ಬಿಡಿಭಾಗ ತಂದು ಜೋಡಣೆಮಾಡಿ ಮಾರುಕಟ್ಟೆಗೆ ಬಿಡುತ್ತಿವೆ.
ದುಡ್ಡೇ ದೊಡ್ಡಪ್ಪ
ಸೂಪರ್ ಬೈಕ್ ಹೆಸರಿಗೆ ಮಾತ್ರವಲ್ಲ ದುಡ್ಡೂ ತುಂಬಾ ತೆರಬೇಕು. ಸುಮಾರು ನಾಲ್ಕು ಲಕ್ಷಗಳಿಂದ ತೊಡಗಿ, 38 ಲಕ್ಷ ರೂ. ವರೆಗೆ ಸೂಪರ್ ಬೈಕ್‌ಗಳಿವೆ. ಭಾರತದ ರಸ್ತೆಗಳು ಈ ಸುಪರ್ ಬೈಕ್ ಓಡಿಸಲು ಅಷ್ಟೊಂದು ಅನುಕೂಲ ಹೊಂದಿಲ್ಲದಿದ್ದರೂ, ಈಗ ಹೆಚ್ಚಿನ ಸಂಖ್ಯೆಗಳಲ್ಲಿ ಖರೀದಿಯಾಗುತ್ತಿದೆ.
ಕಡಿಮೆಯಾದ ಆಮದು ತೆರಿಗೆ
ವಿದೇಶಗಳಿಂದ ಆಮದು ಮಾಡಿಕೊಳ್ಳುವ ಸೂಪರ್ ಬೈಕ್ ಕಂಪೆನಿಗಳಾದ ಡುಕಾಟಿ, ಹಾರ್ಲೆಡೆವಿಡ್ಸನ್, ಇಂಡಿಯಾನ ತನ್ನ ಆಮದು ತೆರಿಗೆಯನ್ನು ಶೇ. 75 ರಿಂದ 50ಕ್ಕೆ ಇಳಿಸಿವೆ. ಇದರಿಂದ ಭಾರತದ ಉತ್ಸಾಹಿ ಗ್ರಾಹಕರನ್ನು ಇದು ಉತ್ತೇಜಿಸುತ್ತಿದೆ.
ಮಹಿಳೆಯರನ್ನು ಬಿಡದ ಕ್ರೇಜ್
ಪುಣೆಯಲ್ಲಿ ಭಾರತದ ಮೊದಲ ಮಹಿಳಾ ಬೈಕರ್ ಗಳ ಗುಂಪನ್ನು 2011 ರಲ್ಲಿ ಊರ್ವಶಿ ಪಟೇಲ್ ಅವರು ಪ್ರಾರಂಭಿಸಿದರು.ಹಲವು ಬಾಲಿವುಡ್ ನಟಿಯರು ಈಗಾಗಲೇ ಸೂಪರ್ ಬೈಕ್‌ಗಳನ್ನು ಹೊಂದಿದ್ದಾರೆ. ವಿವಿಧ ನಗರಗಳಲ್ಲಿ ಬೈಕರ್ ಕ್ಲಬ್‌ಗಳಿವೆ. ಮಾತ್ರವಲ್ಲದೆ ಈಗ ಮಹಿಳೆಯರೇ ಕ್ಲಬ್‌ಗಳನ್ನು ರಚಿಸಿ ದೂರದ ಟ್ರಿಪ್ ಹೋಗುತ್ತಾರೆ.
ಸೆಲೆಬ್ರೆಟಿಗಳಿಗೆ ಅಚ್ಚುಮೆಚ್ಚು
ಟೀಂ ಇಂಡಿಯಾದ ಮಾಜಿ ಕ್ರಿಕೆಟ್ ಕ್ಯಾಪ್ಟನ್ ಎಂ.ಎಸ್. ಧೋನಿಯಿಂದ ಹಿಡಿದು ಸಲ್ಮಾನ್ ಖಾನ್, ಪುನೀತ್ ರಾಜ್‌ಕುಮಾರ್ ವರೆಗೆ ಸೆಲೆಬ್ರೆಟಿಗಳಿಗೂ ಸೂಪರ್‌ಬೈಕ್‌ಗಳ ಖಯಾಲಿ ಇದೆ. ಇದೂ ಮಾರುಕಟ್ಟೆಯಲ್ಲಿ ಒಂದಷ್ಟು ಪ್ರಭಾವ ಬೀರಲು ಕಾರಣವಾಗಿದೆ.
ಸೂಪರ್ ಬೈಕ್‌ಗಳ ಬೆಲೆ
.ಸುಜುಕಿ ಹಯಬೂಸ – 15.48 ಲಕ್ಷ ರೂ. ಎಂಜಿನ್ ಸಾಮರ್ಥ್ಯ 1340 ಸಿಸಿ.
.ಬಿಎಂಡಬ್ಲೂ- 19.97 ಲಕ್ಷ ರೂ. ಎಂಜಿನ್ ಸಾಮರ್ಥ್ಯ 999ಸಿಸಿ.
.ಯಮಹ ವೈಝಡ್‌ಎಫ್ ಆರ್ 1- 18.28 ಲಕ್ಷ ರೂ. 998 ಸಿಸಿ.
.ಕವಾಸಾಕಿ ನಿಂಜ ಎಚ್2- 36.92 ಲಕ್ಷ ರೂ. 998 ಸಿಸಿ.
.ಡ್ಯುಕಾಟಿ 1299 – 57.82 ಲಕ್ಷ ರೂ. 1285 ಸಿಸಿ.
. ಎಪ್ರಿಲಿಯಾ ಆರ್‌ಎಸ್‌ವಿ4 ಆರ್ ಎಫ್- 22.80 ಲಕ್ಷ ರೂ. 999 ಸಿಸಿ.
.ಹೋಂಡಾ 1000ಆರ್‌ಆರ್ ಫೈರ್‌ಬ್ಲೇಡ್- 18.48 ಲಕ್ಷ ರೂ.
999 ಸಿಸಿ.
.ಎಂವಿ ಅಗಸ್ಟಾ ಎಫ್4 ಆರ್‌ಆರ್- ಸೂಪರ್‌ಬೆ 34.71 ಲಕ್ಷ ರೂ. 998 ಸಿಸಿ.
ಭರತ್ ರಾಜ್ ಕರ್ತಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.