ಏಕತೆಯಿದ್ದರೆ ಗೆಲುವು ಸುಲಭ: ಪ್ರಧಾನ್
Team Udayavani, Mar 26, 2018, 10:34 AM IST
ಕಾವೂರು: ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಪಕ್ಷ ಗೆಲ್ಲಬೇಕು ಎಂಬ ಏಕಮನಸ್ಸಿದ್ದರೆ ಮಂಗಳೂರು ಉತ್ತರ ಗೆದ್ದಂತೆ, ಇದು ರಾಜ್ಯಕ್ಕೆ ಅನ್ವಯಿಸಿದರೆ ಇಡೀ ರಾಜ್ಯವೇ ಗೆದ್ದಂತೆ ಎಂದು ಕೇಂದ್ರ ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಇಲಾಖೆಯ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
ಕಾವೂರಿನಲ್ಲಿ ರವಿವಾರ ಬಿಜೆಪಿ ಮಂಗಳೂರು ಉತ್ತರ ಮಂಡಲದ ಬೂತ್ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕೇಂದ್ರದ ಸೌಲಭ್ಯ ರಾಜ್ಯಕ್ಕೆ ಪರಿಣಾಮಕಾರಿಯಾಗಿ ಸಿಗಬೇಕಾದರೆ ರಾಜ್ಯದಲ್ಲಿ ಅಧಿಕಾರ ಹಿಡಿಯಬೇಕು ಎಂದರು.
ಛಲ, ಒಗ್ಗಟ್ಟಿನಿಂದ ಜಯ
ಚುನಾವಣೆ ಮತ್ತು ಯುದ್ಧಕ್ಕೆ ಹೆಚ್ಚಿನ ವ್ಯತ್ಯಾಸವಿಲ್ಲ. ಛಲ ಹಾಗೂ ಒಗ್ಗಟ್ಟಿನ ಏಕ ಗುರಿಯಿದ್ದರೆ ಯುದ್ಧ ಜಯಿಸಬಹುದು. ಬಿಜೆಪಿ ಕಾರ್ಯಕರ್ತರ ಹತ್ಯೆ ಮಾಡುವ, ಧರ್ಮವನ್ನು ಒಡೆಯುವ, ಓಲೈಕೆಯ ಸರಕಾರ ಈಗಿನ ಕಾಂಗ್ರೆಸ್. ಇದರ ಆಡಳಿತವನ್ನು ಕಿತ್ತೆಸೆಯುವ ಮೂಲಕ ಬಿಜೆಪಿ ಕಾರ್ಯಕರ್ತರು ಕೇಂದ್ರದ ಸೌಲಭ್ಯವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಶ್ರಮಿಸಬೇಕು ಎಂದರು.
ಮೋದಿ ಸರಕಾರ ವಿವಿಧ ಜನಪರ ಯೋಜನೆ ಮೂಲಕ ಮನೆ ಮಾತಾಗಿದೆ. ಕೇಂದ್ರವು ಪ್ರತೀ ವ್ಯವಸ್ಥೆಯನ್ನು ಮನೆ ಮನೆಗೆ ಮುಟ್ಟಿಸಲು ಕಟಿಬದ್ಧವಾಗಿದೆ ಎಂದರು.
ಉತ್ತರ ಮಂಡಲದ ಅಧ್ಯಕ್ಷ ಡಾ| ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್, ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಕ್ಯಾ| ಗಣೇಶ್ ಕಾರ್ಣಿಕ್, ಸುರೇಂದ್ರನ್, ಬ್ರಿಜೇಶ್ ಚೌಟ, ಉದಯಕುಮಾರ್, ಸತೀಶ್ಚಂದ್ರ, ಕಿಶೋರ್ ಕುಮಾರ್, ಸುಧೀರ್ ಶೆಟ್ಟಿ ಕಣ್ಣೂರು ಉಪಸ್ಥಿತರಿದ್ದರು. ಅಶೋಕ್ ಕೃಷ್ಣಾಪುರ ನಿರೂಪಿಸಿದರು.
ಮಂಗಳೂರು ಆರ್ಥಿಕ ಕೇಂದ್ರವಾಗಲಿದೆ
ದೇಶದಲ್ಲಿ ಕುಳಿತುಕೊಳ್ಳುವ ಕುರ್ಚಿಯಿಂದ ಹಿಡಿದು ಧರಿಸುವ ಬಟ್ಟೆಯವರೆಗೆ ಪೆಟ್ರೋಲಿಯಂನ ಪೂರಕ ವಸ್ತುಗಳಾಗಿವೆ. ದ.ಭಾರತದಲ್ಲಿ ಅತೀ ದೊಡ್ಡ ತೈಲ ಸಂಸ್ಕರಣಾ ಘಟಕ ಮಂಗಳೂರಿನಲ್ಲಿದೆ. ಈಗ ಇದೇ ಭಾಗದಲ್ಲಿ ಪೆಟ್ರೋಲಿಯಂ ಕಾಂಪ್ಲೆಕ್ಸ್ ಬರಲಿದೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಉದ್ಯೋಗ, ಪೂರಕ ಸಣ್ಣ ಸಣ್ಣ ಕೈಗಾರಿಕಾ ಘಟಕಗಳು ಅಸ್ತಿತ್ವಕ್ಕೆ ಬರಲಿವೆ. ಇದರ ಜತೆಗೆ ಉಕ್ಕಿನ ಕಾರ್ಖಾನೆ ನಿರ್ಮಿಸುವ ಯೋಜನೆಯಿದೆ. ಇದರಿಂದ ಮಂಗಳೂರು ಆರ್ಥಿಕ ಕೇಂದ್ರವಾಗಿ ಪ್ರಸಿದ್ಧಿಯಾಗಲಿದೆ.
– ಧರ್ಮೇಂದ್ರ ಪ್ರಧಾನ್,
ಸಚಿವ, ಕೇಂದ್ರ ನೈಸರ್ಗಿಕ ಅನಿಲ ಮತ್ತು
ಪೆಟ್ರೋಲಿಯಂ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.