ಎಚ್ಚೆತ್ತುಕೊಳ್ಳದಿದ್ದರೆ ಕರಾವಳಿ ಕೈತಪ್ಪೀತು!
Team Udayavani, Mar 5, 2018, 3:40 PM IST
ಪುತ್ತೂರು: ಜೆಹಾದಿ ಶಕ್ತಿಗಳನ್ನು ಸಲಹುತ್ತಿರುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರಕ್ಕೆ ತಕ್ಕ ಉತ್ತರ
ನೀಡಬೇಕಾಗಿದೆ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕಾಶ್ಮೀರದಲ್ಲಿ ಪಂಡಿತರಿಗಾದ ಗತಿ ಕರಾವಳಿಯಲ್ಲೂ ಬರಬಹುದು, ಕರಾವಳಿ ಕೈತಪ್ಪಿ ಹೋಗಬಹುದು ಎಂದು ಸಂಸದ ಪ್ರತಾಪ್‌ಸಿಂಹ ಎಚ್ಚರಿಸಿದರು ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಆಶ್ರಯದಲ್ಲಿ ಪುತ್ತೂರಿನ ದರ್ಬೆಯಿಂದ ಬೊಳುವಾರು ವರೆಗೆ ಪಾದಯಾತ್ರೆಯ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರಾವಳಿ ನಾಡು ಶಿಕ್ಷಣದ ನೆಲೆವೀಡು. ಇದನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕಿದೆ. ಹಿಂದೂಗಳು ಒಗ್ಗಟ್ಟಾಗಿ ಮುನ್ನಡೆಯಬೇಕು. ಇಲ್ಲದೇ ಹೋದರೆ ಕಾಶ್ಮೀರದ ಪರಿಸ್ಥಿತಿ ಕರಾವಳಿಗೂ ಒದಗಬಹುದು. ಪಾಕಿಸ್ಥಾನದ ಬಗ್ಗೆ ಡಾ|ಬಿ.ಆರ್. ಅಂಬೇಡ್ಕರ್ ಬರೆದ ಪುಸ್ತಕದಲ್ಲಿ “ಪಾಕ್‌ನಲ್ಲಿ ಇಸ್ಲಾಮಿಕ್ ಬ್ರದರ್‌ಹುಡ್ ಇದೆ’ ಎಂದು ಹೇಳಿದ್ದರು. ಭಾರತದ ಚರಿತ್ರೆಯ ಪುಟಗಳಲ್ಲಿ ಹುಟ್ಟಿಬಂದ ಮತ್ತೂಬ್ಬ ಮೇಧಾವಿ ಅಂಬೇಡ್ಕರ್. ಇವರಿಗೆ ಮಹಾತ್ಮಾ ಗಾಂಧೀಜಿಗೆ ನೀಡಿದ ಸ್ಥಾನಮಾನ ನೀಡಬೇಕಿತ್ತು ಎಂದರು.
ಹುಣಸೂರಿನ ಇಬ್ಬರು ವಿದ್ಯಾರ್ಥಿಗಳ ಹತ್ಯೆ, ಮಂಗಳೂರು, ಹುಬ್ಬಳ್ಳಿ, ಮೈಸೂರು, ಕ್ಯಾತಮಾರನಹಳ್ಳಿ ಮೊದಲಾದ ಕಡೆಗಳಲ್ಲಿ ನಡೆದ ಹತ್ಯೆಗಳ ಹಿಂದೆ ಕೆಎಫ್‌ಡಿ, ಪಿಎಫ್‌ಐ, ಎಸ್‌ಡಿಪಿಐ ನೇರ ಶಾಮೀಲಾಗಿವೆ. ಇವು ಕರಾವಳಿಗೆ ಬಂದು ಹಲವು ವರ್ಷಗಳೇ ಸಂದವು, ಈಗ ರಾಜ್ಯಾದ್ಯಂತ ಹಬ್ಬುತ್ತಿವೆ. ಜೆಹಾದಿ ಶಕ್ತಿಗಳಿಗೆ ರಾಜ್ಯದಲ್ಲಿ ಅವಕಾಶ ಒದಗಿಸಲಾಗುತ್ತಿದೆ. ಇದಕ್ಕೆ ಮುಂದಿನ 2 ತಿಂಗಳಲ್ಲಿ ಉತ್ತರ ನೀಡುವ ಕೆಲಸ ಆಗಬೇಕಿದೆ ಎಂದರು.
2019ರಲ್ಲಿ ಅಡಿಕೆ ಆಹಾರ ವಸ್ತು ಅಡಿಕೆಯನ್ನು ಆಹಾರ ವಸ್ತು ಎಂದು ಘೋಷಿಸಲು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಈ ಕುರಿತ ಪ್ರಯೋಗಾಲಯದ ವರದಿಯನ್ನು ಕೇಂದ್ರಕ್ಕೆ ಕೊಡಲಿದ್ದೇವೆ. 2019ರ ಮೊದಲು ಅಡಿಕೆ ಆಹಾರ ವಸ್ತು ಎಂದು ಘೋಷಣೆ ಆಗಲಿದೆ ಎಂದು ನಳಿನ್ ವಿಶ್ವಾಸ ವ್ಯಕ್ತಪಡಿಸಿದರು.
ಸುಳ್ಯದ ಬೊಳುಬೈಲಿನಲ್ಲಿ ಸಭೆ
ಇದಕ್ಕೂ ಮೊದಲು ಕೊಡಗಿನ ಕುಶಾಲನಗರದಿಂದ ಶನಿವಾರ ಹೊರಟಯಾತ್ರೆ ರವಿವಾರ ಬೆಳಗ್ಗೆ ಸುಳ್ಯ ವಿಧಾನ ಸಭಾ ಕ್ಷೇತ್ರ ಪ್ರವೇಶಿಸಿತು. ಅಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸಂಸದರಾದ ಪ್ರತಾಪ್‌ಸಿಂಹ ನಳಿನ್‌ಕುಮಾರ್ ಕಟೀಲು, ಶಾಸಕ ಎಸ್. ಅಂಗಾರ ಮಾತನಾಡಿದರು.
ಹಿಂದೂ ಒಗ್ಗಟ್ಟಿಗೆ ಕಾಂಗ್ರೆಸ್ ಅಡ್ಡಿ: ಪ್ರತಾಪ್
ಮುಸ್ಲಿಮರು ಶುಕ್ರವಾರ, ಕ್ರೈಸ್ತರು ರವಿವಾರ ಒಟ್ಟು ಸೇರುತ್ತಾರೆ. ಆದರೆ ಹಿಂದೂಗಳು ವರ್ಷಕ್ಕೆ 3-4 ಬಾರಿ ಹಬ್ಬಗಳ ಸಂದರ್ಭ ಒಗ್ಗಟ್ಟಾಗುವುದಕ್ಕೂ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ. ಗಣೇಶೋತ್ಸವಕ್ಕೆ ಬಾಂಡ್ ನೀಡಬೇಕು, ಮೈಕ್ ಕಟ್ಟಲು ಅನುಮತಿ ಇಲ್ಲ. ಹಿಂದೂಗಳು ಒಗ್ಗಟ್ಟಾಗುವ ಸಂಪ್ರದಾಯವನ್ನು ಹತ್ತಿಕ್ಕಲಾಗುತ್ತಿದೆ ಎಂದು ಪ್ರತಾಪ್ ಸಿಂಹ ವಿಶ್ಲೇಷಿಸಿದರು.
ಸಿದ್ದು ಸುಲ್ತಾನ್ ಆಡಳಿತ: ನಳಿನ್ ಕುಮಾರ್
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಅಧಿಕಾರಕ್ಕೆ ಬಂದ ತತ್‌ಕ್ಷಣ ಗೋಹತ್ಯೆ ನಿಷೇಧ ಕಾಯ್ದೆ ಹಿಂದೆಗೆದುಕೊಂಡು ಗೋಹತ್ಯೆಗೆ ಪೂರಕ ವಾತಾವರಣ ನಿರ್ಮಿಸಿಕೊಟ್ಟದ್ದು ಸಿದ್ದರಾಮಯ್ಯ ಸಾಧನೆ. ಈ ಮೂಲಕ ಮಹಮ್ಮದ್ ಘೋರಿ, ಅಕºರ್ ಅವರಂತೆ ತನ್ನದೂ ಸುಲ್ತಾನ್ ಆಡಳಿತ ಎಂದು ಅವರು ಸಾಬೀತು ಪಡಿಸಿದ್ದಾರೆ. ತಲವಾರು ತೋರಿಸಿ ದನಗಳ ಕಳವು ಮಾಡಿದರೂ ಸುಮ್ಮನಿರುವ ಶಾಸಕರು, ಗೋಪೂಜೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ
Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.