ಅಕ್ರಮ ಕಟ್ಟಡ ಆರೋಪ: ಮಾತಿನ ಚಕಮಕಿ


Team Udayavani, Sep 5, 2017, 8:40 AM IST

matina-chakamaki.jpg

ಬಂಟ್ವಾಳ : ಅಕ್ರಮ ಕಟ್ಟಡ ಕುರಿತಾದ ಆರೋಪ – ಪ್ರತ್ಯಾರೋಪಗಳ ಪರಿಣಾಮ ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಗದ್ದಲ ಉಂಟಾಯಿತು.

ಪುರಸಭೆ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ ಅಧ್ಯಕ್ಷತೆಯಲ್ಲಿ ಸೆ. 4ರಂದು ನಡೆದ ಸಭೆಯಲ್ಲಿ ವಿಪಕ್ಷ ಸದಸ್ಯ ಬಿ.ದೇವದಾಸ ಶೆಟ್ಟಿ  ಮಾತನಾಡಿ, “ಸಚಿವರೊಬ್ಬರ ಹೆಸರಲ್ಲಿ ಇರುವ ಜಮೀನಿನಲ್ಲಿ ನಿರ್ಮಿಸಿದ ಕಟ್ಟಡ ಅಕ್ರಮ ವಾಗಿದೆ. ಇದಕ್ಕೆ ಸಿಂಗಲ್‌ ತೆರಿಗೆ ಅನ್ವಯ ಮಾಡಲಾಗಿದೆ. ಆದರೆ ಜನಸಾಮಾನ್ಯರ ಇದೇ ರೀತಿಯ ಕಟ್ಟಡಗಳಿಗೆ ಡಬ್ಬಲ್‌ ತೆರಿಗೆ ಹಾಕಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು. ಈ ಕುರಿತಾದ ಚರ್ಚೆಯಲ್ಲಿ ಹಲವು ಸದಸ್ಯರು ಪಾಲ್ಗೊಂಡರು.

ಜಮೀನು ಅತಿಕ್ರಮಣ
ಸದಸ್ಯ ಎ. ಗೋವಿಂದ ಪ್ರಭು ಮಾತನಾಡಿ ಒಂದು ಕಟ್ಟಡಕ್ಕೆ ಡಬ್ಬಲ್‌ ತೆರಿಗೆ, ಇನ್ನೊಂದಕ್ಕೆ ಸಿಂಗಲ್‌ ತೆರಿಗೆ ಇದೆಂತಹ ನೀತಿ. ಅದರಲ್ಲಿ  ಜಮೀನು ಅತಿ ಕ್ರಮಣ ಆಗಿದೆ. ಕಟ್ಟಡ ನಂಬರ್‌ ಇಲ್ಲದೆ ರಾಷ್ಟ್ರಮಟ್ಟದ ಬ್ಯಾಂಕ್‌, ಎಟಿಎಂನಂತಹ ಕಚೇರಿಗಳು ಬಂದಿರುವುದು ಹೇಗೆ. ಇದರ ಹಿಂದೆ ಏನು ಮಸಲತ್ತು ನಡೆದಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬುಡಾ ಅಧ್ಯಕ್ಷ ಸದಾಶಿವ ಬಂಗೇರ ನೀವೇನು ಸಾಚಾಗಳ. ನಿಮ್ಮ ಬಿಜೆಪಿ ಆಡಳಿತ ಇದ್ದಾಗ ಯಾವ ಯಾವ ಕಟ್ಟಡಗಳಿಗೆ ಅನುಮತಿ ನೀಡಿದೆ. ಆದೆಷ್ಟು ಸಕ್ರಮ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಪ್ರತಿಕ್ರಿಯಿಸಿದರು.

ಇದೇ ಸಂದರ್ಭ ಅಧ್ಯಕ್ಷರು ಪ್ರತಿಕ್ರಿಯಿಸಿ ನೀವು ಸತ್ಯಹರಿಶ್ಚಂದ್ರರಲ್ಲ. ನಿಮ್ಮ ಅವಧಿಯಲ್ಲಿ ನಡೆದ ವಿಚಾರಗಳು ತಿಳಿದಿವೆ. ಸುಮ್ಮನೆ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಎಂದರು. ಈ ಸಂದರ್ಭ ಮತ್ತಷ್ಟು ತಾರಕ ಸ್ವರದಲ್ಲಿ ಬುಡಾ ಅಧ್ಯಕ್ಷರು, ಪುರಸಭಾ ಅಧ್ಯಕ್ಷರು ಮತ್ತು ದೇವದಾಸ ಶೆಟ್ಟಿ ಪರಸ್ಪರ ಏರಿದ ಧ್ವನಿಯಲ್ಲಿ  ದೂರಿಕೊಂಡರು.

ಅಕ್ರಮ ಕಟ್ಟಡಗಳ ಪಟ್ಟಿ 
ಮೇಲ್ನೋಟಕ್ಕೆ  ಇಲ್ಲಿನ ಕ್ರಮ ತಪ್ಪಾಗಿರುವಂತೆ ಕಂಡು ಬರುವಂತಿದೆ. ಅಂತಿಮವಾಗಿ ಎಲ್ಲ ಅಕ್ರಮ ಕಟ್ಟಡಗಳ ಪಟ್ಟಿಯನ್ನು ಮಾಡಿ ಅದರ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಅಧ್ಯಕ್ಷರ ಸೂಚನೆಯಂತೆ ಮುಖ್ಯಾಧಿಕಾರಿ ಪ್ರಕಟಿ ಸಿದರು.

ಕಸ ವಿಲೇವಾರಿ ಮಾಡುವ ಗುತ್ತಿಗೆದಾರನಿಗೆ ಬಿಲ್‌ ನೀಡಬಾರದು ಎಂದು ನಿರ್ಣಯ ಆಗಿದ್ದರೂ ಅದನ್ನು ಪಾವತಿ ನೀಡಿದ್ದೀರಿ. ಗುತ್ತಿಗೆ ಕಾರ್ಮಿಕರಿಗೆ ಪಿಎಫ್‌ಐ,  ಇಎಸ್‌ಐ ಮಾಡಿದ್ದಾಗಿ ಗುತ್ತಿಗೆದಾರ ಹೇಳಿದ್ದಾನೆ ಎನ್ನುತ್ತೀರಿ. ಅದಕ್ಕೆ ಸಂಬಂಧ ಪಟ್ಟ ದಾಖಲೆ ಪುರಸಭೆಯಲ್ಲಿ ಇಲ್ಲ. ಹಾಗಾಗಿ ಅದನ್ನು ನಂಬುವುದು ಹೇಗೆ ಎಂದು ದೇವದಾಸ ಶೆಟ್ಟಿ ಅವರು ಪ್ರಶ್ನಿಸಿದರು. 

ಪ.ಜಾತಿ, ಪಂಗಡ, ಪ.ಜಾತಿ ವಿಭಾಗದವರಿಗೆ ವಿವಿಧ ಉದ್ದೇಶಗಳಿಗೆ ನೀಡುವ ಸಾಲಕ್ಕೆ ಈಗಾಗಲೇ 29 ಅರ್ಜಿಗಳು ಬಂದಿವೆ. ಹದಿನೆಂಟು ಮಂದಿಗೆ ಮಾತ್ರ ಅದರಲ್ಲಿ ಅವಕಾಶವಿದ್ದು ಸಭೆಯು ಮುಂದಿನ ನಿರ್ಣಯ ಮಾಡುವಂತೆ ಪ್ರಸ್ತಾವವಾಯಿತು.

ಸಭೆಯಲ್ಲಿ ವಾಸು ಪೂಜಾರಿ, ಗಂಗಾಧರ, ವಸಂತಿ ಚಂದಪ್ಪ, ಯಾಸ್ಮಿàನ್‌, ಚಂಚಲಾಕ್ಷಿ, ಸಂಜೀವಿ, ಜಗದೀಶ ಕುಂದರ್‌, ಪ್ರಭಾ ಆರ್‌. ಸಾಲಿಯಾನ್‌, ಸುಗುಣಾ ಕಿಣಿ,  ಭಾಸ್ಕರ ಟೈಲರ್‌, ಸಂಧ್ಯಾ ಬಿ. ಮೋಹನ್‌, ಜಸಿಂತಾ ಡಿಸೋಜಾ, ಮುನಿಶ್‌ ಅಲಿ, ಮಮ್ತಾಜ್‌ ಮೊದಲಾದವರು ವಿವಿಧ ಸಮಸ್ಯೆಗಳನ್ನು ಪ್ರಸ್ತಾವಿಸಿದರು. ಉಪಾಧ್ಯಕ್ಷ ಮಹಮ್ಮದ್‌ ನಂದರಬೆಟ್ಟು ಉಪಸ್ಥಿತರಿದ್ದರು. ಮುಖ್ಯಾಧಿಕಾರಿ ಎಂ.ಎಚ್‌. ಸುಧಾಕರ್‌ ಸ್ವಾಗತಿಸಿ, ವಂದಿಸಿದರು.

ಹಣ ವರ್ಗಾವಣೆ
ಗೂಡಿನ ಬಳಿ ವಾರ್ಡಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ಮೀಸಲಿಟ್ಟ ಹಣವನ್ನು ನನ್ನ ಗಮನಕ್ಕೂ ಬಾರದಂತೆ ವರ್ಗಾಯಿಸಲಾಗಿದೆ. ಇದು ಹೇಗೆ ಸಾಧ್ಯವಾಯಿತು. ನನಗೆ ಬಂದ ಪತ್ರದ ಯಥಾ ಪ್ರತಿ ಇದ್ದು ಇದರ ಕುರಿತು ಕ್ರಮ ಆಗಬೇಕು ಎಂದು ಸದಸ್ಯ ಮಹಮ್ಮದ್‌ ಇಕ್ಬಾಲ್‌ ಸಭೆಯಲ್ಲಿ ಪ್ರಸ್ತಾವಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರು ಮತ್ತು ಸದ್ರಿ ಸದಸ್ಯರ ಜತೆ ಮಾತಿನ ಚಕಮಕಿ ನಡೆಯಿತು.

ಟೆಂಡರ್‌ ಹಾಕಿಲ್ಲ
ಕಸ ವಿಲೇವಾರಿ ಗುತ್ತಿಗೆಯ ಬಗ್ಗೆ ಮೂರು ಸಲ ಟೆಂಡರ್‌ ಕರೆದಿದ್ದರೂ ಯಾರೊಬ್ಬರು ಟೆಂಡರ್‌ ಹಾಕಿಲ್ಲ. ಹಾಗಾಗಿ ಹಿಂದಿನ ಗುತ್ತಿಗೆಯವರಿಗೇ ಟೆಂಡರ್‌ ಇಲ್ಲದೆಯೇ ಗುತ್ತಿಗೆ ಮುಂದುವರಿಸಲಾಗಿದೆ. ಮುಂದಿನ ಹಂತದಲ್ಲಿ ಹೊರಗುತ್ತಿಗೆ ಕಾರ್ಮಿಕರನ್ನು ಪುರಸಭೆಯ ಸಿಬಂದಿ ನೆಲೆಯಲ್ಲಿ ಸ್ವೀಕರಿಸಲು ಕಾನೂನು ಆಗುತ್ತಿದೆ.
– ಮುಖ್ಯಾಧಿಕಾರಿ, ಬಂಟ್ವಾಳ ಪುರಸಭೆ.

ಟಾಪ್ ನ್ಯೂಸ್

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

Bhopal: ಬಿಜೆಪಿ ಮಾಜಿ ಶಾಸಕ ಸಿಂಗ್‌ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23 ಶಾಲೆಗೆ ಬಾಂಬ್ ಬೆದರಿಕೆ ಹಾಕಿದ 12ನೇ ತರಗತಿ ವಿದ್ಯಾರ್ಥಿ

ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್

Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್‌, ಟ್ರಾಫಿಕ್‌ ಜಾಮ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Bangladeshi national arrested for illegally residing in the city

Mangaluru: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ಪ್ರಜೆಯ ಬಂಧನ

vaman

Mangaluru: ವಾಮಂಜೂರು ಗುಂಡು ಹಾರಾಟ ಪ್ರಕರಣ: ಇಬ್ಬರು ಕುಖ್ಯಾತರ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru: ಹೈಡ್ರೋ ವೀಡ್‌ ಗಾಂಜಾ ಸಹಿತ ಓರ್ವನ ಬಂಧನ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆMangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Mangaluru ಕಮಿಷನ್‌ ಆಮಿಷವೊಡ್ಡಿ 9 ಲ. ರೂ. ವಂಚನೆ

Kulai: ನೀರುಪಾಲಾದವರ ಶವ ಹಸ್ತಾಂತರ

Kulai: ನೀರುಪಾಲಾದವರ ಶವ ಹಸ್ತಾಂತರ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

Divorce: ಚಾಹಲ್‌ ಬಳಿಕ ಇದೀಗ ಮನೀಶ್‌ ಪಾಂಡೆ ವಿಚ್ಛೇದನ? ಏನಿದು ವರದಿ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

ಅರಾಟೆ ಸೇತುವೆ: ಅಪಘಾತ ವಲಯ! ಬೆಳಕಿಲ್ಲ, ಸಿಗ್ನಲ್‌ ಲೈಟ್‌ ಉರಿಯುತ್ತಿಲ್ಲ!

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

3(2

Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.