ಅನೈತಿಕ ಸಂಬಂಧ?: ಮಂಗಳೂರಿನಲ್ಲಿ ಪತ್ನಿಯ ಹತ್ಯೆಗೈದ ಪತಿ
Team Udayavani, Aug 19, 2017, 9:35 AM IST
ಮಂಗಳೂರು: ಇಲ್ಲಿನ ಕೊಟ್ಟಾರ ಚೌಕಿಯ ಜೆ.ಬಿ.ಲೋಬೋ ರಸ್ತೆಯಲ್ಲಿ ಅನೈತಿಕ ಸಂಬಂಧವೊಂದು ಕೊಲೆಯಲ್ಲಿ ಅಂತ್ಯವಾಗಿದೆ. ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾದ ಪತ್ನಿಯನ್ನು ಪತಿ ಶುಕ್ರವಾರ ರಾತ್ರಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ಬ್ಲೋಸಮ್ ಲೋಬೋ (31)ಎಂಬ ಮಹಿಳೆ ಹತ್ಯೆಗೀಡಾಗಿದ್ದು, ಪತಿ ವಿಲಿಯಮ್ ಲೋಬೋ(35)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅನೈತಿಕ ಸಂಬಂದ ಹೊಂದಿದ್ದ ಬ್ಲೋಸಮ್ಗೆ ಹಲವು ದಿನಗಳಿಂದ ಎಚ್ಚರಿಕೆ ನೀಡಿದ್ದರೂ ಮುಂದುವರಿಸಿದ್ದುದಕ್ಕಾಗಿ ಕುಪಿತನಾಗಿ ಕತ್ತಿಯಿಂದ ಬರ್ಬರವಾಗಿ ಕಡಿದು ಕೊಲೆಗೈದಿದ್ದಾನೆ ಎನ್ನಲಾಗಿದೆ. ಕೋಣೆಯ ತುಂಬೆಲ್ಲ ರಕ್ತ ಚೆಲ್ಲಾಡಿರುವುದು ಹತ್ಯೆಯ ಭೀಕರತೆಗೆ ಸಾಕ್ಷಿಯಾಗಿತ್ತು.
ಹತ್ಯೆಗೀಡಾದ ಬ್ಲೋಸಮ್ ಮತ್ತು ಆರೋಪಿ ವಿಲಿಯಮ್
ಉರ್ವ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ರಾತ್ರಿ 10 ಗಂಟೆಯ ವೇಳೆಗೆ ಕೊಲೆ ನಡೆದಿದೆ ಎಂದು ವರದಿಯಾಗಿದೆ.
ಅಂತ್ಯಕ್ರಿಯೆಗೆ ಆಗಮಿಸಿ ಬ್ಲೋಸಮ್ ಪೋಷಕರು,ಸಂಬಂಧಿಕರು ಮತ್ತು ನೆರೆ ಮನೆಯ ನಿವಾಸಿಗಳು ಅನೈತಿಕ ಸಂಬಂಧ ಹೊಂದಿಲ್ಲ, ಇದು ಸುಳ್ಳು ಎಂದಿರುವುದಾಗಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ
Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.