ಉರ್ವದಲ್ಲಿ ಶೀಘ್ರ ಐಎಂಸಿಕೆ ಕೇಂದ್ರ?
Team Udayavani, Mar 26, 2021, 6:00 AM IST
ಮಂಗಳೂರು: ವಿದೇಶಗಳಲ್ಲಿ ಉದ್ಯೋಗಗಳಿಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಅಧಿಕೃತ ಮಾಹಿತಿ, ಮಾರ್ಗದರ್ಶನ ಮತ್ತು ನೇಮಕಾತಿ ಉದ್ದೇಶದಿಂದ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಲಸೆ ಕೇಂದ್ರ (ಐಎಂಸಿಕೆ) ಆರಂಭಿಸಲು ನಿರ್ಧರಿಸಿದೆ. ಪ್ರಸ್ತಾ ವಿತ ಕೇಂದ್ರವು ನಗರದ ಉರ್ವ ಮಾರ್ಕೆಟ್ ನಲ್ಲಿ ಇರುವ ಮುಡಾ ಕಟ್ಟಡ ದಲ್ಲಿ ಆರಂಭವಾಗುವ ಸಾಧ್ಯತೆ ಇದೆ.
ಬೆಂಗಳೂರಿನಲ್ಲಿ ಈಗಾಗಲೇ ಇಂಥ ಕೇಂದ್ರ ಇದೆ. ಮಂಗಳೂರಿ ನಲ್ಲಿ ಆರಂಭಿಸಲು ಮಂಜೂರಾತಿ ದೊರೆತಿದ್ದರೂ ಸೂಕ್ತ ಕಟ್ಟಡ ಇಲ್ಲದೆ ಪ್ರಸ್ತಾವನೆಯಲ್ಲಿಯೇ ಉಳಿದಿತ್ತು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಇತ್ತೀಚೆಗೆ ನಡೆಸಿರುವ ಸಭೆಯಲ್ಲಿ ಮುಡಾ ಕಟ್ಟಡದಲ್ಲಿ ಕೇಂದ್ರ ಆರಂಭಿಸುವ ಬಗ್ಗೆ ಚರ್ಚಿಸಲಾಗಿದೆ. ಶೀಘ್ರವೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.
ತರಬೇತಿ ಮತ್ತು ನಿಯೋಜನೆ ಅವಕಾಶಗಳಿಗೆ ಸಂಬಂಧಿಸಿ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿಯಂತಹ ಉದ್ಯಮಶೀಲ ಸಂಘಟನೆಗಳ ಸಹಭಾಗಿತ್ವ ಪಡೆ ಯಲು ಕೌಶಲಾಭಿವೃದ್ಧಿ ಇಲಾಖೆ ನಿರ್ಧರಿಸಿದೆ.
ಐಎಂಸಿಕೆ ಯಾಕಾಗಿ? :
ಕೊಲ್ಲಿ ಮತ್ತಿತರ ವಿದೇಶ ಗಳಿಗೆ ತೆರಳುವ ಹಲವರು ವಿವಿಧ ಸಂದರ್ಭ ಗಳಲ್ಲಿ ವಂಚನೆ ಗೊಳ ಗಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಮತ್ತು ಉದ್ಯೋಗ ಕಳೆದು ಕೊಳ್ಳುವ ಸಾಧ್ಯತೆಯನ್ನು ಕಡಿಮೆ ಗೊಳಿಸುವ ಉದ್ದೇಶದಿಂದ ಐಎಂಸಿಕೆ ಆರಂಭಿಸಲಾಗುತ್ತಿದೆ. ಸರಕಾರವೇ ಇದರ ಜವಾಬ್ದಾರಿ ನಿರ್ವಹಿಸುವುದರಿಂದ ವಿದೇಶಕ್ಕೆ ಉದ್ಯೋಗಕ್ಕೆ ತೆರಳು ವವರು ಹಲವು ವಂಚನೆಗಳಿಗೆ ಒಳಗಾಗುವುದು ತಪ್ಪುತ್ತದೆ. ಉದ್ಯೋಗಾರ್ಥಿಗಳು ತೆರಳಲಿರುವ ದೇಶದ ಉದ್ಯೋಗ, ಕೌಶಲ, ಸಂಸ್ಕೃತಿ, ಭಾಷೆ ಮೊದಲಾದವುಗಳ ಬಗ್ಗೆಯೂ ಐಎಂಸಿಕೆ ಮಾಹಿತಿ ನೀಡಲಿದೆ. ಇದಕ್ಕಾಗಿ ಈಗಾ ಗಲೇ ಹಲವು ದೇಶಗಳ ಜತೆ ಸರಕಾರ ಒಪ್ಪಂದ ಮಾಡಿ ಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕೇಂದ್ರದಿಂದ ಉಡುಪಿ ಜಿಲ್ಲೆಗೂ ಅನುಕೂಲವಾಗಲಿದೆ. ಸದ್ಯ ಬೆಂಗಳೂರಿನ ಐಎಂಸಿಕೆ ಅಗತ್ಯ ಮಾಹಿತಿಗಳನ್ನು ನೀಡುತ್ತಿದ್ದು, ಅಗತ್ಯ ಇರುವವರು 080-29753007 ಸಂಪರ್ಕಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.