ಆಂತರಿಕ ಭದ್ರತೆಗೆ ಸವಾಲಾದ ವಲಸೆ ಕಾರ್ಮಿಕರು!
Team Udayavani, Aug 24, 2018, 11:38 AM IST
ಸುಬ್ರಹ್ಮಣ್ಯ: ಕೊಡಗು ಮತ್ತು ದ.ಕ. ಜಿಲ್ಲೆಯ ಗಡಿಭಾಗ ಕಡಮಕಲ್ಲಿನಲ್ಲಿ ಸಾವಿರಾರು ಎಕರೆ ವಿಸ್ತಾರದ ರಬ್ಬರ್ ಎಸ್ಟೇಟ್ ತೋಟಗಳಲ್ಲಿ ನೂರಾರು ಮಂದಿ ಹೊರರಾಜ್ಯಗಳ ವಲಸೆ ಕಾರ್ಮಿಕರಿದ್ದಾರೆ. ಆಂತರಿಕ ಭದ್ರತೆಗೆ ಇವರೆಲ್ಲ ಸವಾಲಾಗಿದ್ದಾರೆ. ಅಕ್ರಮ ನುಸುಳುಕೋರರಿಗೆ ಕಡಮಕಲ್ಲು ಪ್ರದೇಶ ಅತ್ಯಂತ ಸುರಕ್ಷಿತ ಸ್ಥಳವಾಗಿದೆ!
ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯ ಕಡಮಕಲ್ಲು ಮತ್ತು ಕೂಜುಮಲೆ ಎರಡು ರಬ್ಬರ್ ಎಸ್ಟೇಟುಗಳು ಗಾಳಿಬೀಡು ಮತ್ತು ಕಾಲೂರು ಗ್ರಾಮಕ್ಕೆ ಸೇರಿದೆ. ಕಡಮಕಲ್ಲು ಎಸ್ಟೇಟಿನಲ್ಲಿ ಸುಮಾರು 2,800 ಎಕರೆ ಹಾಗೂ ಕೂಜುಮಲೆ ಎಸ್ಟೇಟಿನಲ್ಲಿ 1,200 ಎಕರೆ ವಿಸ್ತಾರದಲ್ಲಿ ರಬ್ಬರ್ ತೋಟವಿದೆ. ಎರಡು ಎಸ್ಟೇಟಿನಲ್ಲಿ 650ಕ್ಕೂ ಅಧಿಕ ಮಂದಿ ಕೂಲಿ ಕಾರ್ಮಿಕರಿದ್ದು ಇವರೆಲ್ಲರೂ ವಲಸಿಗರು. ಕಡಿಮೆ ವೇತನಕ್ಕೆ ಈ ಕಾರ್ಮಿಕರನ್ನು ದುಡಿಸಿಕೊಳ್ಳಲಾಗುತ್ತಿದೆ. ಹಿಂದಿ ಭಾಷಿಗರಾದ ಇವರ ಮೂಲ ವಿಚಾರಿಸಿದರೆ ಜಾರ್ಖಂಡ್, ಅಸ್ಸಾಂ, ಒರಿಸ್ಸ, ಛತ್ತಿಸ್‌ಘಡ ಎಂದೆಲ್ಲ ಹೇಳುತ್ತಾರೆ.
ಹದಿಹರೆಯದವರೇ ಹೆಚ್ಚು
ಉತ್ತರ ಭಾರತದಿಂದ ವಲಸೆ ಬಂದ ಈ ಕಾರ್ಮಿಕರು ಬಹುತೇಕ ಅಕ್ರಮ ಬಾಂಗ್ಲಾ ದೇಶೀಯರು ಆಗಿರುವ ಸಾಧ್ಯತೆ ಹೆಚ್ಚಿದೆ. ಮುಸ್ಲಿಂ, ಹಿಂದೂ ಸಮುದಾಯದ ಇವರಲ್ಲಿ ಹೆಚ್ಚಿನವರೆಲ್ಲರೂ 18 ವರ್ಷ ವಯೋಮಿತಿಯ ಒಳಗಿನವರು.
ದಾಖಲೆ ತೋರಿಸಲು ಹಿಂದೇಟು
ಗುರುತಿನ ಚೀಟಿ, ಅಧಾರ್ ಕಾರ್ಡು, ಪಡಿತರ ಚೀಟಿ ಇದೆ ಎನ್ನುವ ಇವರು, ಅದನ್ನು ತೋರಿಸಲು ಹಿಂದೇಟು ಹಾಕುತ್ತಾರೆ. ದಾಖಲೆ ಪರಿಶೀಲಿಸಿದ ವೇಳೆ ಒಂದೊಂದರಲ್ಲಿ ಒಂದೊಂದು ರಾಜ್ಯದ ವಿಳಾಸವಿರುವುದು ಬೆಳಕಿಗೆ ಬಂದಿದೆ. ಅವರ ಬ್ಯಾಂಕಿನ ಖಾತೆ ಎಸ್ಟೇಟ್ ಮ್ಯಾನೇಜರ್‌ನ ವಿಳಾಸ ಹೊಂದಿದೆ.
ತನಿಖೆ ಆಗಬೇಕು
ಕಂಪೆನಿ ಅಡ್ಡದಾರಿಯಲ್ಲಿ ಕಾನೂನು ಮೀರಿ ಲೀಸ್ ಅವಧಿ ಮುಂದುವರೆಸಿದೆ. ಅರಣ್ಯ ಒತ್ತುವರಿ ಮಾಡಿರುವುದು ಸ್ಪಷ್ಟ. ಜತೆಗೆ ಅಕ್ರಮ ಬಾಂಗ್ಲಾ ನಿವಾಸಿಗರು ಇಲ್ಲಿರುವ ಸಾಧ್ಯತೆಯೂ ಇದೆ. ಮಾನವ ಹಕ್ಕು ಉಲ್ಲಂಘನೆ ಜತೆ ಮಕ್ಕಳ ಶೈಕ್ಷಣಿಕ ಹಕ್ಕನ್ನು ಇಲ್ಲಿ ಕಸಿದುಕೊಳ್ಳಲಾಗಿದೆ. ಈ ಕುರಿತು ತನಿಖೆಯಾಗಬೇಕು.
- ಪ್ರದೀಪ್ ಕುಮಾರ್ ಕೆ.ಎಲ್.,
ನ್ಯಾಯವಾದಿ
ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Udupi: ಬೀದಿ ನಾಯಿಗಳಿಗೆ 29.13 ಲಕ್ಷ ರೂ. ವೆಚ್ಚ!
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.