ಶಾಶ್ವತ ಯೋಜನೆಗಳಿಂದ ಅಮರತ್ವ : ಡಾ| ಶಾಂತಾರಾಮ ಶೆಟ್ಟಿ
Team Udayavani, Jul 20, 2017, 5:35 AM IST
ಮೂಡಬಿದಿರೆ: “ಭಾರತದಲ್ಲಿ ಶೇ. ಮೂವತ್ತರಷ್ಟು ಜನ ವಸತಿ, ಸಮರ್ಪಕ ಶಿಕ್ಷಣದಿಂದ ವಂಚಿತರಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಅವರ ಜೀವನವನ್ನು ಎತ್ತರಿಸುವ ಕೆಲಸ ಆಗಬೇಕಾಗಿದೆ. ಕ್ಷಣಿಕ ಸಹಾಯದ ಬದಲಾಗಿ, ಶಾಶ್ವತ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಸೇವಾ ಸಂಸ್ಥೆಗಳು ಅಮರತ್ವ ಸಾಧಿಸಲು ಸಾಧ್ಯ’ ಎಂದು ಡಾ| ಶಾಂತಾರಾಮ ಶೆಟ್ಟಿ ಹೇಳಿದರು.
ನಿಶ್ಮಿತಾ ಟವರ್ನ ಪ್ಯಾರಡೈಸ್ ಹಾಲ್‌ನಲ್ಲಿ ಸೋಮವಾರ ಜರಗಿದ ಮೂಡಬಿದಿರೆ ಇನ್ನರ್‌ವೀಲ್ ಕ್ಲಬ್‌ನ ರಜತ ವರ್ಷವನ್ನು ಉದ್ಘಾಟಿಸಿ, ನೂತನ ಅಧ್ಯಕ್ಷೆ ಜಯಶ್ರೀ ಎ. ಶೆಟ್ಟಿ ಸಹಿತ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಅವರು ಮಾತನಾಡಿ, “ಮನುಕುಲವನ್ನು ಕಂಗೆಡಿಸಿದ ಪೋಲಿಯೋ ನಿವಾರಣೆ ಯಲ್ಲಿ ರೋಟರಿಯು ಭಾರತದಲ್ಲಿ ಮುಂದಾಳಾಗಿ ಕೆಲಸ ಮಾಡಿದ್ದು ಇನ್ನರ್ ವೀಲ್‌ನ ಸಕಾಲಿಕ ಸಹಭಾಗಿತ್ವ ಸ್ಮರಣೀಯ’ ಎಂದರು.
ಆರಂಭಿಕ ಕೊಡುಗೆಗಳು
ಇನ್ನರ್‌ವೀಲ್ ವತಿಯಿಂದ ರಜತ ವರ್ಷದ ಆರಂಭಿಕ ಕೊಡುಗೆಯಾಗಿ, ಮೂಡಬಿದಿರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ರೂ. 50 ಸಾವಿ ರ ವೆಚ್ಚದಲ್ಲಿ 40 ಬೆಡ್‌ಶೀಟ್, ದಿಂಬು, ಫ್ರಿಜ್, ಟಿವಿ, ಫುಡ್ ಟ್ರಾಲಿ, ಊಟದ ತಟ್ಟೆ, ಲೋಟಗಳನ್ನು ವೈದ್ಯಾಧಿಕಾರಿ ಡಾ| ಶಶಿಕಲಾ ಅವರಿಗೆ ಹಸ್ತಾಂತರಿಸಲಾಯಿತು. “ಹ್ಯಾಪಿ ಸ್ಕೂಲ್’ ಯೋಜನೆಯನ್ವಯ ಮಿಜಾರು ಸ.ಹಿ.ಪ್ರಾ. ಶಾಲೆಗೆ ರೂ. 50 ಸಾವಿ ರ ವೆಚ್ಚದಲ್ಲಿ ಸ್ಟೀಲ್ ಕಪಾಟು, ಕಂಪ್ಯೂಟರ್, ಪ್ರಿಂಟರ್, ಫುಡ್ ಟ್ರಾಲಿ, ಮೂಡಬಿದಿರೆ ಮೈನ್ ಶಾಲೆಗೆ ರೂ. 35 ಸಾವಿ ರ ವೆಚ್ಚದಲ್ಲಿ ಕಂಪ್ಯೂಟರ್, ಚಾರ್ಟ್‌ಗಳು, ಅಶ್ವಿನ್‌ಗೆ ವೀಲ್‌ಚೇರ್, ನೂತನವಾಗಿ ಆರಂಭವಾಗಿರುವ “ಸ್ಫೂರ್ತಿ ವಿಶೇಷ ಮಕ್ಕಳ ಶಾಲೆ’ಗೆ 1 ಕ್ವಿಂಟಾಲ್ ಅಕ್ಕಿ (ಯೋಜಿತ 3 ಕ್ವಿಂ.), ವಿನಯ ಮಿಜಾರು ಅವರಿಗೆ ಕೃಷಿ ಉಪಕರಣಗಳು (ರೂ. 10,000) ಹಾಗೂ ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆಗೆ ಅಕ್ವಾಗಾರ್ಡ್, ಪುಸ್ತಕ (ರೂ. 17,000) ನೀಡಲಾಯಿತು. ಶೋಭಾ ಎಂ. ಆಳ್ವ ಸಂಸ್ಮರಣಾರ್ಥ 8 ವರ್ಷದ ಡಯಬೆಟಿಕ್ ಬಾಲಕನಿಗೆ 1 ವರ್ಷದ ಔಷಧ ವಿತರಿಸಲಾಯಿತು.
ಸುವರ್ಣ ವರ್ಷದ ಸಂಭ್ರಮದಲ್ಲಿ ರುವ ಮೂಡಬಿದಿರೆ ರೋಟರಿ ಕ್ಲಬ್ ಅಧ್ಯಕ್ಷ ಬಿ. ಶ್ರೀಕಾಂತ ಕಾಮತ್ ಅವರು ರಜತ ವರ್ಷದ ರಜತಸದೃಶ ಬ್ಯಾಜ್‌ಗಳನ್ನು ಅನಾವರಣಗೊಳಿಸಿದರು. ನಿರ್ಗಮನ ತಂಡದ ವತಿಯಿಂದ ಬನ್ನಡ್ಕ ಶಾಲೆಗೆ ಬ್ಯಾಗ್‌ಗಳನ್ನು ವಿತರಿಸಲಾಯಿತು.
ನೂತನ ಅಧ್ಯಕ್ಷೆ ಜಯಶ್ರೀ ಅಮರನಾಥ ಶೆಟ್ಟಿ ಮೂಡಬಿದಿರೆ ಇನ್ನರ್‌ವೀಲ್‌ನ ಹೆಜ್ಜೆ ಗುರುತುಗಳು ಸಮಾಜದಲ್ಲಿ ದಾಖಲಾಗುವಂತೆ ನೋಡಿಕೊಳ್ಳಬೇಕಾಗಿದೆ ಎಂದರು.
ಇನ್ನರ್‌ವೀಲ್ ಜಿಲ್ಲಾ ಅಸೋಸಿಯೇಶನ್ ಕೌನ್ಸಿಲ್ ಸದಸ್ಯೆ ಚಿತ್ರಾ ವಿ. ರಾವ್ ಅವರು ಶುಭಾಶಂಸನೆಗೈದರು. ಡಾ| ಅಮರಶ್ರೀ ಶೆಟ್ಟಿ ತಮ್ಮ ತಾಯಿ ಜಯಶ್ರೀ ಅವರ ಜೀವನೋತ್ಸಾಹ ತುಂಬಿದ ವ್ಯಕ್ತಿತ್ವದ ಚಿತ್ರಣ ನೀಡಿ ಶುಭ ಹಾರೈಸಿದರು.
ಡಾ| ಸ್ವರ್ಣರೇಖಾ ಮತ್ತು ದೀಪ್ತಿ ಬಾಲಕೃಷ್ಣ ನೂತನ ಸದಸ್ಯೆಯರಾಗಿ ಸೇರ್ಪಡೆಗೊಂಡರು.
ನಿರ್ಗಮಿತ ಅಧ್ಯಕ್ಷೆ ಡಾ| ಸೀಮಾ ಸುದೀಪ್ ಸ್ವಾಗತಿಸಿ, ಕಾರ್ಯದರ್ಶಿ ಯಾಸ್ಮಿàನ್ ಸಿ.ಎಚ್.ವರದಿ ವಾಚಿಸಿದರು. ಡೊರೀನ್ ಪಿಂಟೊ ಕೊಡುಗೆಗಳ ವಿವರ ನೀಡಿದರು.ರೋಟರಿಯ ಗೌರವ ಸದಸ್ಯರಾದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ,ಶಾಸಕ ಕೆ. ಅಭಯಚಂದ್ರ, “ಆಳ್ವಾಸ್’ ಅಧ್ಯಕ್ಷ ಡಾ|ಎಂ. ಮೋಹನ ಆಳ್ವ, ಲಯನ್ಸ್ ಪ್ರಮುಖ ಕೆ. ಶ್ರೀಪತಿ ಭಟ್, ಇನ್ನರ್‌ವೀಲ್ ಮಾಜಿ ಜಿಲ್ಲಾಧ್ಯಕ್ಷೆಯರಾದ ಶಾಲಿನಿ ನಾಯಕ್, ಶಮೀಮ್ ಕುನಿಲ್, ಮಾಲಿನಿ ಹೆಬ್ಟಾರ್, ರಾಜಲಕ್ಷ್ಮೀ ಶೆಟ್ಟಿ ಸಹಿತ ಗಣ್ಯರು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಇನ್ನರ್‌ವೀಲ್ ಸಭಾಪತಿ ಡಾ| ವಿನಯಕುಮಾರ ಹೆಗ್ಡೆ, ಉಪಾಧ್ಯಕ್ಷೆ ಮೀನಾಕ್ಷಿ ನಾರಾಯಣ್, ಜತೆ ಕಾರ್ಯದರ್ಶಿ ಯಾಸ್ಮಿàನ್ ಸಿ.ಎಚ್., ಕೋಶಾಧಿಕಾರಿ ಪ್ರಕಾಶಿನಿ ವಿ. ಹೆಗ್ಡೆ ,ಸಾಕ್ಷರತಾ ಸಂಯೋಜಕಿ ಬೀಪಾ ಶರೀಫ್ ಸಹಿತ ಪದಾಧಿಕಾರಿಗಳು ಮತ್ತಿ ತ ರರು ಈ ಸಂದ ರ್ಭ ದಲ್ಲಿ ಉಪ ಸ್ಥಿತರಿದ್ದರು. ಐಎಸ್‌ಓ ಸುಚೇತಾ ಕೋಟ್ಯಾನ್ ಮತ್ತು ತರಿನಾ ಪಿಂಟೋ ಕಾರ್ಯ ಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಶಾಲಿನಿ ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.