ಮೀನುಗಾರರ ಉತ್ತೇಜನಕ್ಕಾಗಿ “ಉತ್ಪಾದಕ ಸಂಸ್ಥೆ’ ಅನುಷ್ಠಾನ

ದ.ಕ.-3 ಉಡುಪಿಯಲ್ಲಿ 4 ಸಂಸ್ಥೆ ಕಾರ್ಯಾರಂಭ

Team Udayavani, Oct 24, 2022, 7:15 AM IST

ಮೀನುಗಾರರ ಉತ್ತೇಜನಕ್ಕಾಗಿ “ಉತ್ಪಾದಕ ಸಂಸ್ಥೆ’ ಅನುಷ್ಠಾನ

ಮಂಗಳೂರು: ಮೀನುಗಾರರ ಸಮೂಹವನ್ನು ಉತ್ತೇಜಿಸುವ ಸಲುವಾಗಿ ಮೀನು ಕೃಷಿಕರ ಉತ್ಪಾದಕ ಸಂಸ್ಥೆ ರಚಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಇದರಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3 ಹಾಗೂ ಉಡುಪಿಯಲ್ಲಿ 4 ಸಂಸ್ಥೆಗಳು ಕಾರ್ಯಾರಂಭಿಸಿದೆ.

ರಾಜ್ಯದಲ್ಲಿ ಅನುಷ್ಠಾನಕ್ಕೆ ಬಂದಿರುವ ರೈತ ಉತ್ಪಾದಕ ಸಂಸ್ಥೆಯ (ಪಿಎಫ್‌ಒ)ಸ್ವರೂಪದಲ್ಲಿ ಮೀನುಗಾರರಿಗೆ ಸೀಮಿತವಾಗಿ ಮೀನು ಕೃಷಿಕರ ಉತ್ಪಾದಕ ಸಂಸ್ಥೆ (ಎಫ್‌ಎಫ್‌ಪಿಒ) ರಚಿಸಲಾಗುತ್ತದೆ. ಈ ಮೂಲಕ ಮೀನು ಕೃಷಿಕರಿಗೆ ಪ್ರೋತ್ಸಾಹ ಹಾಗೂ ಮಾರ್ಗದರ್ಶನ ನೀಡಲು ಸಂಸ್ಥೆ ಸಹಕಾರ ನೀಡಲಿದೆ.

ಸದ್ಯ ಮೀನುಗಾರ ಸಹಕಾರಿ ಸಂಘಗಳು ಬ್ಯಾಂಕಿಂಗ್‌ ಸ್ವರೂಪದಲ್ಲಿ ಕಾರ್ಯನಿರ್ವಹಿಸಿದರೆ, ಮೀನು ಕೃಷಿಕರ ಉತ್ಪಾದಕ ಸಂಸ್ಥೆಗಳು ಅವರ ಉದ್ಯಮಕ್ಕೆ ಬೇಕಾಗುವ ಸಲಹೆ-ಸಹಕಾರ ಹಾಗೂ ಮಾರ್ಗದರ್ಶನಕ್ಕಾಗಿ ಮೀಸಲಾಗಿರುತ್ತದೆ.

ಉತ್ಪಾದಕ ಸಂಸ್ಥೆಗಳು ತಮ್ಮ ಸದಸ್ಯರಿಗೆ ಅಗತ್ಯವಿರುವ ಗುಣಮಟ್ಟದ ಪರಿಕರಗಳನ್ನು ಖರೀದಿಸುವುದು ಹಾಗೂ ಅವರು ಉತ್ಪಾದಿಸಿದ ಉತ್ಪನ್ನಗಳನ್ನು ತನ್ನ ಸದಸ್ಯರಿಂದ ಖರೀದಿಸಿ ಮಧ್ಯವರ್ತಿಗಳನ್ನು ತಪ್ಪಿಸಿ ನೇರವಾಗಿ ಮಾರಾಟ ಮಾಡುವ ಮೂಲಕ ಹೆಚ್ಚಿನ ದರ ಪಡೆಯಬಹುದು.

ಯಾಕಾಗಿ ಎಫ್‌ಎಫ್‌ಪಿಒ?
ಉತ್ಪಾದಕರಾಗಿರುವ ಮೀನುಗಾರರ ಉತ್ಪನ್ನಗಳಿಗೆ ಹಲವು ಬಾರಿ ಸೂಕ್ತ ಬೆಲೆ ಪಡೆಯಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿ ಉತ್ಪಾದಕರ ಸಂಸ್ಥೆಗಳ ರಚನೆಯು ಉತ್ಪಾದಕರ ಸಂಘಟನೆಗೆ ಕಾರಣವಾಗುತ್ತದೆ. ಇದರಿಂದ ಉತ್ಪಾದಕರು ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆಗಾಗಿ ಒಗ್ಗಟ್ಟಿನಿಂದ ಎದುರಿಸಬಹುದು. ಈ ಮೂಲಕ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು ಸಾಧ್ಯ. ಹಾಗೂ ಉತ್ಪಾದಕ ಸಂಸ್ಥೆಗಳ ಮೂಲಕ ಗುಣಮಟ್ಟದ ಪರಿಕರ, ಯಂತ್ರಗಳು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ. ಈ ಮೂಲಕ ಉತ್ಪಾದನೆಗೆ ಸೂಕ್ತ ಬೆಲೆ ದೊರಕಿಸಿ ಸದಸ್ಯರ ಆದಾಯ ಹೆಚ್ಚಿಸಬಹುದು.

ಸರಕಾರದ ಅಭಿವೃದ್ಧಿ ಇಲಾಖೆ, ವಿ.ವಿ., ಸರಕಾರೇತರ ಸಂಸ್ಥೆಗಳು, ಸಾರ್ವಜನಿಕ-ಖಾಸಗಿ ಪಾಲುದಾರರೊಂದಿಗೆ ಸಂಬಂಧ ವೃದ್ಧಿಸುವ ಮೂಲಕ ಉತ್ಪಾದಕ ಸಂಸ್ಥೆಗಳ ಪ್ರಭಾವ ಹೆಚ್ಚಿಸಬಹುದು. ನವೀನ ಕಲಿಕೆಯನ್ನು ರಾಜ್ಯಕ್ಕೆ ಹಾಗೂ ಸಹಭಾಗಿ ಸಂಸ್ಥೆಗಳಿಗೆ ನೀಡಲು ಪ್ರಖ್ಯಾತ ಸಂಸ್ಥೆಗಳೊಂದಿಗೆ ಸಹಯೋಗ ಬೆಳೆಸಬಹುದಾಗಿದೆ.

750 ವಿವಿಧ ಉತ್ಪಾದಕ ಸಂಸ್ಥೆ
ರೈತರು, ಮೀನುಗಾರರು, ನೇಕಾರರ ಉತ್ಪನ್ನಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ರಾಜ್ಯದಲ್ಲಿ 750 ಉತ್ಪಾದಕರ ಸಂಸ್ಥೆಗಳನ್ನು ಸ್ಥಾಪಿಸಲು ಸರಕಾರ ಈಗಾಗಲೇ ಅನುಮೋದನೆ ನೀಡಿದೆ. ಈ ಪೈಕಿ ಉತ್ಪಾದಕ ಸಂಸ್ಥೆಗಳ ಇಲಾಖಾವಾರು ಹಾಗೂ ವರ್ಷವಾರು ಗುರಿ ನಿಗದಿ ಮಾಡಲಾಗಿದೆ. ಈ ಪೈಕಿ ಮೀನುಗಾರಿಕೆ ಇಲಾಖೆಗೆ ಒಟ್ಟು 93 ಸಂಸ್ಥೆಯ ವಾರ್ಷಿಕ ಗುರಿ ನಿಗದಿ ಮಾಡಲಾಗಿದೆ. ಈಗಾಗಲೇ ವಿವಿಧ ಜಿಲ್ಲೆಗಳಿಂದ 15 ಎಫ್‌ಎಫ್‌ಪಿಒಗಳನ್ನು ನೋಂದಣಿ ಮಾಡಲಾಗಿದೆ.

ಸಂಸ್ಥೆಯಲ್ಲಿ 100 ಮಂದಿ
ಕನಿಷ್ಠ 100 ಮಂದಿಯ ಸೇರುವಿಕೆಯಿಂದ ಮೀನು ಕೃಷಿಕರ ಉತ್ಪಾದಕ ಸಂಸ್ಥೆ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ಮೀನು ಕೃಷಿಯ ಉತ್ಪಾದನೆ ಹಾಗೂ ಮಾರಾಟಕ್ಕೆ ಈ ಸಂಸ್ಥೆಯಿಂದ ಲಾಭವಾಗಲಿದೆ. ಮುಂಬರುವ ದಿನಗಳಲ್ಲಿ ವಿವಿಧ ಕಡೆಗಳಲ್ಲಿ ಇಂತಹ ಸಂಸ್ಥೆ ರಚಿಸಲು ಕ್ರಮ ಕೈಗೊಳ್ಳಲಾಗುವುದು.
-ದಿಲೀಪ್‌ ಕುಮಾರ್‌,
ಸಹಾಯಕ ನಿರ್ದೇಶಕರು,
ಮೀನುಗಾರಿಕಾ ಇಲಾಖೆ

-ದಿನೇಶ್‌ ಇರಾ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vamanjoor Thiruvailuguthu Sankupoonja – Devupoonja Jodukare Kambala Result

Kambala Result: ವಾಮಂಜೂರು ತಿರುವೈಲುಗುತ್ತು ಸಂಕುಪೂಂಜ -ದೇವುಪೂಂಜ ಜೋಡುಕರೆ ಕಂಬಳ ಫಲಿತಾಂಶ

Congress: ದಲಿತ ಸಮಾವೇಶ ಯಾವ ರೀತಿ ಎಂಬ ಬಗ್ಗೆಯಷ್ಟೇ ಚರ್ಚೆ: ದಿನೇಶ್‌ ಗುಂಡೂರಾವ್‌

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Mangaluru: ಬಾಲಕಿಗೆ ಕಿರುಕುಳ: ಅಂಗಡಿ ಮಾಲಕನಿಗೆ 5 ವರ್ಷ ಸಜೆ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

Arrested: ಜೂಜಾಟದ ಅಡ್ಡೆಗೆ ದಾಳಿ 20 ಮಂದಿಯ ಬಂಧನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.