ಅಸಮರ್ಪಕ ಹೆದ್ದಾರಿ ನಿರ್ವಹಣೆ; ಸುಂಕ ವಸೂಲಿಗೆ ಮಾತ್ರ ಆದ್ಯತೆ
Team Udayavani, Jul 18, 2019, 5:22 AM IST
ಸುರತ್ಕಲ್: ರಾಜ್ಯದ ಆರ್ಥಿಕ ಹೆಬ್ಟಾಗಿಲು, ಕೋಟ್ಯಂತರ ಆದಾಯ ತರುವ ಏಕೈಕ ಬಂದರು ಹೊಂದಿರುವ ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ವಹಣೆ ಮಾಡುವ ಕಂಪೆನಿ ಸರಿಯಾದ ನಿರ್ವಹಣೆ ಮಾಡದೆ ಸುಂಕ ವಸೂಲಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ.
2004ರಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಹಾಗೂ ಮಂಗಳೂರು ಮತ್ತು ಬೆಂಗಳೂರು ಹೆದ್ದಾರಿಯ ಬಿ.ಸಿ. ರೋಡ್‌ನಮಧ್ಯದಲ್ಲಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆಗಾಗಿ ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪೆನಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು.
ಈ ಭಾಗದಲ್ಲಿ 35 ಕಿ.ಮೀ. ಉದ್ದದ ನಾಲ್ಕು ಲೇನ್‌ನ ಚತುಷ್ಪಥ ರಸ್ತೆ ನಿರ್ಮಾಣದ ಹೊಣೆಯನ್ನು ಈ ಕಂಪೆನಿ ವಹಿಸಿಕೊಂಡಿತ್ತು.
ಈ ಹೆದ್ದಾರಿ ನಿರ್ಮಾಣಕ್ಕೆ ಈ ಕಂಪೆನಿ ಬ್ಯಾಂಕ್‌ನಿಂದ 363 ಕೋಟಿ ರೂ. ಸಾಲ ಪಡೆದಿತ್ತು.
ಇರ್ಕಾನ್ ಕಂಪೆನಿಗೆ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಕೂಡ ನೀಡಿತ್ತು. ಈ ಸಾಲ ಮರುಪಾವತಿಗಾಗಿ ಎನ್‌ಎಚ್ 66 ಸುರತ್ಕಲ್ ಮತ್ತು ಅಂದಿನ ಎನ್‌ಎಚ್75ರ ಬ್ರಹ್ಮರಕೂಟ್ಲು ಟೋಲ್ ಗೇಟ್‌ಗಳನ್ನು ನಿರ್ಮಾಣ ಮಾಡಿ ಟೋಲ್ ಸಂಗ್ರಹಿಸುತ್ತಿತ್ತು.
ಹಣದ ಕೊರತೆ
ಇದೀಗ ಸುರತ್ಕಲ್ನಿಂದ ನಂತೂರು ಬಿ.ಸಿ. ರೋಡ್ ಜಂಕ್ಷನ್‌ವರೆಗಿನ 35 ಕಿ.ಮೀ. ರಸ್ತೆ ಎರಡು ವರ್ಷಗಳಿಂದ ಹಣದ ಕೊರತೆಯಿಂದ ನಿರ್ವಹಣೆ ಇಲ್ಲದೆ ನಲುಗುತ್ತಿದೆ.
ಕೂಳೂರಿನಿಂದ ಕೊಟ್ಟಾರ ಚೌಕಿರಸ್ತೆ ಗಮನಿಸಿದರೆ ಪಾದಚಾರಿಗಳು ನಡೆದಾ ಡಲೂ ಜಾಗವಿಲ್ಲದ ಸ್ಥಿತಿಯಿದೆ. ಹೆದ್ದಾರಿ ಬದಿ ಸರ್ವಿಸ್ ರಸ್ತೆ ಮಾಡಿದ್ದರೆ ಇನ್ನೊಂದೆಡೆ ಮಾಡಲು ಭೂಮಿಯ ಕೊರತೆ ಎದುರಾಗಿದೆ. ಭೂಸ್ವಾಧೀನವನ್ನೇ ಮಾಡಲಾಗಿಲ್ಲ. ಇನ್ನು ಕೋಡಿಕಲ್ ತಿರುವಿನಿಂದ ಕೂಳೂರುವರೆಗೆ ಏಕ ಸಂಚಾರದಲ್ಲಿ ಸರ್ವಿಸ್ ರಸ್ತೆ ನಿರ್ಮಿಸಿ ಇಲಾಖೆ ಕೈ ತೊಳೆದುಕೊಂಡಿದೆ. ಕೂಳೂರಿನಿಂದ ಬರುವವರಿಗೆ ಕೋಡಿಕಲ್ ಬಳಿಯೇ ತಿರುಗಿ ಮತ್ತೆ ಚಲಿಸಬೇಕಾಗುತ್ತದೆ. ಇದರಿಂದ ಸಮಯ ವ್ಯರ್ಥ, ಡೀಸೆಲ್ ವ್ಯರ್ಥವಾಗುತ್ತದೆ.
ಮಳೆ ಬಂದರೆ ದ್ವೀಪ!
ಮಳೆ ಏನಾದರೂ ಒಂದೆರಡು ದಿನ ಬಂದರೆ ಕೊಟ್ಟಾರಚೌಕಿ ಪ್ರದೇಶ ಮುಳುಗಡೆಯಾಗುತ್ತದೆ. ರಾಜಕಾಲುವೆ ಸಂಪರ್ಕ ಕೇಂದ್ರವಿರುವುದರಿಂದ ಸುವ್ಯ ವಸ್ಥಿತ ಚರಂಡಿ ಅಗತ್ಯ. ಪ್ರಮುಖ ರಾಜ ಕಾಲುವೆಯೂ ಇಲ್ಲಿ ಸೇರು ವುದರಿಂದ ಮಳೆ ನೀರು ಸರಿಯಾಗಿ ಹರಿಯದೆ ವಿವಿಧ ರೋಗಗಳ ಕೇಂದ್ರ ವಾಗಿಯೂ ಕೊಟ್ಟಾರಚೌಕಿ ಸಮಸ್ಯೆಯನ್ನು ಎದುರಿ ಸುತ್ತಿದೆ.ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲ ಗಳಲ್ಲಿ ಸರ್ವಿಸ್ ರಸ್ತೆ, ಮಳೆ ನೀರು ರಾಜಕಾಲುವೆಗೆ ಸೇರಲು ವ್ಯವಸ್ಥೆ, ಪಾದಚಾರಿಗಳ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಮಾಡಿ ಕೊಡಬೇಕಿದೆ.
ಸ್ಮಾರ್ಟ್ ಸಿಟಿಗೆ ಸಂಪರ್ಕ ಕಲ್ಪಿಸುವ ಇಲ್ಲಿನ ಹೆದ್ದಾರಿಗಳು ಇದುವರೆಗೂ ಸ್ಮಾರ್ಟ್ ಆಗದಿರುವುದು ನಮ್ಮನ್ನಾಳುವ ಮಂದಿಗೆ ಕಣ್ಣಿಗೆ ಕಂಡಂತಿಲ್ಲ. ಇದರ ಪರಿಣಾಮ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಅನೇಕ ಪ್ರಾಣಾಪಾಯಗಳು ಸಂಭವಿಸಿದೆ. ನೂರಾರು ಸವಾರರು ಅಂಗ ವೈಕಲ್ಯವನ್ನು ಹೊಂದಿದ್ದಾರೆ. ಎರಡು ಟೋಲ್ಗಳಿಂದ ಕೋಟಿಗಟ್ಟಲೆ ಟೋಲ್ ಸಂಗ್ರಹ ವಾಗುತ್ತಿದೆ. ಆದರೆ ನಿರ್ವಹಣೆ ಮಾತ್ರ ಆಗುತ್ತಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.