ನಗರದಲ್ಲೇ ಅತೀ ಹೆಚ್ಚು ಡೆಂಗ್ಯೂ, ಮಲೇರಿಯಾ ಪ್ರಕರಣ
Team Udayavani, Sep 21, 2018, 11:14 AM IST
ಮಹಾನಗರ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡೇ ತಿಂಗಳುಗಳಲ್ಲಿ ಮಲೇರಿಯಾ ಬಾಧಿತರ ಸಂಖ್ಯೆ ಗಣನೀಯ ಏರಿಕೆಯಾಗಿದೆ! ಜೂನ್ ತಿಂಗಳವರೆಗೆ 1,519 ಪ್ರಕರಣಗಳಿದ್ದರೆ, ಆಗಸ್ಟ್ ವೇಳೆಗೆ 2,723 ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಆ ಮೂಲಕ ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ 1,204 ಮಂದಿಯಲ್ಲಿ ಮಲೇರಿಯಾ ಕಾಣಿಸಿಕೊಂಡಿದೆ.
ಈ ವರ್ಷವೂ ನಗರದಲ್ಲೇ ಅತ್ಯಧಿಕ ಮಲೇರಿಯಾ ಪ್ರಕರಣಗಳು ಕಂಡು ಬಂದಿವೆ. ಜೂನ್‌ವರೆಗೆ ನಗರದ 1,389 ಮಂದಿಗೆ ಮಲೇರಿಯಾ ದೃಢಪಟ್ಟಿದ್ದರೆ, ಆಗಸ್ಟ್ ವೇಳೆಗೆ ಈ ಸಂಖ್ಯೆ 2,643 ಆಗಿದೆ. ಈ ಪೈಕಿ 2,508 ಪ್ರಕರಣ ಮಹಾನಗರ ಪಾಲಿಕೆ ವ್ಯಾಪ್ತಿಯದ್ದಾಗಿದ್ದರೆ, ಉಳಿದ 135 ಪ್ರಕರಣ ಮಂಗಳೂರು ತಾಲೂಕಿನದ್ದಾಗಿದೆ. ಮಲೇರಿಯಾ ಬಾರದಂತೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ನೀಡುತ್ತಿರುವ ಎಚ್ಚರಿಕೆಯ ಹೊರತಾಗಿಯೂ ನಗರದಲ್ಲಿ ಮಲೇರಿಯಾ ಪ್ರಕರಣ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ.
ಸುಳ್ಯದಲ್ಲಿ ಮಲೇರಿಯಾ ಪ್ರಕರಣ ಶೂನ್ಯ
ಜನವರಿಯಿಂದ ಆಗಸ್ಟ್ 31ರ ವರೆಗೆ ಪಾಲಿಕೆ ವ್ಯಾಪ್ತಿಯಲ್ಲಿ 2,508, ಮಂ. ತಾಲೂಕಿನಲ್ಲಿ 135, ಬಂಟ್ವಾಳದಲ್ಲಿ 25, ಪುತ್ತೂರಿನಲ್ಲಿ 39, ಬೆಳ್ತಂಗಡಿಯಲ್ಲಿ 16 ಮಲೇರಿಯಾ ಪ್ರಕರಣ ಕಂಡು ಬಂದರೆ ಸುಳ್ಯದಲ್ಲಿ ಶೂನ್ಯ ಪ್ರಕರಣ ದಾಖಲಾಗಿದೆ ಎಂದು ಆರೋಗ್ಯ ಇಲಾಖೆ ಸಿಬಂದಿ ಮಾಹಿತಿ ನೀಡಿದ್ದಾರೆ.
ಮಂ.ಗ್ರಾಮೀಣದಲ್ಲಿ ಹೆಚ್ಚು ಡೆಂಗ್ಯೂ
ಜಿಲ್ಲೆಯಲ್ಲಿ ಜನವರಿಯಿಂದ ಸೆ. 6ರ ವರೆಗೆ 476 ಮಂದಿಗೆ ಡೆಂಗ್ಯೂ ಬಾಧಿಸಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 52, ಮಂಗಳೂರು ಗ್ರಾಮೀಣ ಭಾಗದಲ್ಲಿ 96, ಬಂಟ್ವಾಳದಲ್ಲಿ 90, ಪುತ್ತೂರಿನಲ್ಲಿ 85, ಬೆಳ್ತಂಗಡಿಯಲ್ಲಿ 95, ಸುಳ್ಯದಲ್ಲಿ 58 ಮಂದಿಗಳಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜೂನ್ ತಿಂಗಳವರೆಗೆ 360 ಪ್ರಕರಣ ಪತ್ತೆಯಾಗಿದ್ದು, ಎರಡೂವರೆ ತಿಂಗಳುಗಳಲ್ಲಿ 116 ಪ್ರಕರಣಗಳು ಹೆಚ್ಚಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Alur: ವಿದ್ಯುತ್ ಶಾರ್ಟ್ ಸರ್ಕ್ಯೂಟ್- ಆಕಸ್ಮಿಕ ಬೆಂಕಿ; ಗೃಹೋಪಯೋಗಿ ವಸ್ತುಗಳು ಬೆಂಕಿಗಾಹುತಿ
Hunsur: ಖಾಸಗಿ ಪೈನಾನ್ಸ್ ನ ಕಿರುಕುಳಕ್ಕೆ ಗೃಹಿಣಿ ಆತ್ಮಹತ್ಯೆಗೆ ಶರಣು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Sandalwood: ತೆರೆಮೇಲೆ ʼಅನಾಥʼನ ಕನಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.