ಚಿನ್ನಾಭರಣ ಮಳಿಗೆಗಳಲ್ಲಿ ಭರದಿಂದ ಸಾಗಿದ ವ್ಯಾಪಾರ
Team Udayavani, Apr 19, 2018, 10:35 AM IST
ಮಹಾನಗರ: ಅಕ್ಷಯ ತೃತೀಯಾ ದಿನವಾದ ಬುಧವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ವ್ಯಾಪಾರ ಭರದಿಂದ ಸಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ತುಸು ಹೆಚ್ಚೇ ವ್ಯವಹಾರ ನಡೆದಿದೆ.
ಅಕ್ಷಯ ತೃತೀಯಾ ದಿನದಂದು ಚಿನ್ನಾಭರಣ ಖರೀದಿಸಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಭಾರತೀಯರಲ್ಲಿದೆ. ಇದಕ್ಕನುಗುಣವಾಗಿ ತಲೆ ತಲಾಂತರದಿಂದಲೂ ಅಕ್ಷಯ ತೃತೀಯಾದಂದು ಚಿನ್ನ, ವಜ್ರಾಭರಣ ಖರೀದಿ ಮಾಡುವುದು ನಡೆಯುತ್ತಿದೆ. ಅದರಂತೆ ಬುಧವಾರ ನಗರದ ವಿವಿಧ ಚಿನ್ನಾಭರಣ ಮಳಿಗೆಗಳಲ್ಲಿ ಜನಜಂಗುಳಿ ಹೆಚ್ಚಿತ್ತು. ಚಿನ್ನ, ವಜ್ರ, ನವರತ್ನ ಸೇರಿದಂತೆ ವಿವಿಧ ಆಭರಣಗಳನ್ನು ಖರೀದಿಸಿ ಗ್ರಾಹಕರು ಈ ದಿನವನ್ನು ಸಂಭ್ರಮಿಸಿದರು.
ನೀತಿ ಸಂಹಿತೆ ಅಡ್ಡಿಯಾಗಿಲ್ಲ
ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ವ್ಯವಹಾರಕ್ಕೆ ತೊಡಕಾಗ ಬಹುದು ಎಂಬ ಆತಂಕ ಕೆಲವು ಚಿನ್ನಾಭರಣ ಮಳಿಗೆಗಳ ಸಿಬಂದಿಗಿತ್ತು.
ಆದರೆ ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ವ್ಯವಹಾರ ನಡೆದಿದ್ದು, ಚಿನ್ನಾಭರಣ ಖರೀದಿಸುವಿಕೆಗೆ ನೀತಿ ಸಂಹಿತೆಯಿಂದ ಯಾವುದೇ ತೊಡಕಾಗಿಲ್ಲ. ಇದರಿಂದ ಗ್ರಾಹಕರು ನಿರಾಯಾಸವಾಗಿ ಚಿನ್ನಾಭರಣಗಳನ್ನು ಖರೀದಿಸಿದರೆ, ಚಿನ್ನಾಭರಣ ಮಳಿಗೆಗಳ ಮಾಲಕರಿಗೂ ವ್ಯವಹಾರಕ್ಕೆ ಸಮಸ್ಯೆ ಉಂಟಾಗಲಿಲ್ಲ.
ವಿವಿಧ ಚಿನ್ನಾಭರಣ ಮಳಿಗೆಗಳು ನಾನಾ ರೀತಿಯ ದರ ಕಡಿತ, ಉಡುಗೊರೆ, ಉಚಿತ ಚಿನ್ನ-ಬೆಳ್ಳಿಯ ನಾಣ್ಯಗಳನ್ನು ಪ್ರಕಟಿಸಿ ಗ್ರಾಹಕರನ್ನು ಆಕರ್ಷಿಸಿದ್ದವು. ಇದರಿಂದ ಸಹಜವಾಗಿ ಗ್ರಾಹಕರೂ ಆಕರ್ಷಿತರಾಗಿ ಚಿನ್ನ ಖರೀದಿಯಲ್ಲಿ ತೊಡಗಿದ್ದರು.
ಕಳೆದ ವರ್ಷಕ್ಕಿಂತ ಈ ವರ್ಷ ತುಸು ಹೆಚ್ಚೇ ವ್ಯವಹಾರ ನಡೆದಿದೆ. ಗ್ರಾಹಕರಿಂದ ಅಕ್ಷಯ ತೃತೀಯಾ ದಿನಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ ಎಂದು ಎಸ್.ಎಲ್. ಶೇಟ್ ಜುವೆಲರ್, ಜೋಸ್ ಆಲುಕ್ಕಾಸ್, ಜೋಯ್ ಅಲುಕ್ಕಾಸ್ ಮುಂತಾದ ಮಳಿಗೆಗಳ ಸಿಬಂದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Choo Mantar Review: ಬಂಗಲೆಯಲ್ಲೊಂದು ಭಯಾನಕ ಕಥೆ!
Mudhol: ಪ್ರತ್ಯೇಕ ಅಪಘಾತ, ಇಬ್ಬರು ಮೃತ್ಯು..
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.