ಕಥುವಾದಲ್ಲಿ ಅತ್ಯಾಚಾರ ಹತ್ಯೆ ಪ್ರಕರಣ: ಆರೋಪಿಗಳಿಗೆ ಶಿಕ್ಷೆಗೆ ಆಗ್ರಹ
Team Udayavani, Apr 21, 2018, 12:42 PM IST
ಸುರತ್ಕಲ್ : ಜಮ್ಮುವಿನ ಕಥುವಾದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ಹಾಗೂ ಉತ್ತರ ಪ್ರದೇಶದ
ಉನಾವ ಪ್ರಾಂತ್ಯದಲ್ಲಿ ನಡೆದ ಅತ್ಯಾಚಾರ ಆರೋಪಿಗಳಿಗೆ ಕಠಿನ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಕಾರ್ಯಕರ್ತರು ಸುರತ್ಕಲ್‌ನಲ್ಲಿ ಪ್ರತಿಭಟನೆ ಹಾಗೂ ಶೋಕಾಚರಣೆ ನಡೆಸಿದರು.
ಸಾಮಾಜಿಕ ಕಾರ್ಯಕರ್ತ ಎಂ.ಜಿ. ಹೆಗಡೆ ಮಾತನಾಡಿ, ಈ ಬರ್ಬರ ಕೃತ್ಯದಿಂದ ಭಾರತಕ್ಕೆ ಕಳಂಕ ತಂದಿದ್ದರೂ ಇಂತಹ ಘಟನೆಗಳಾದಾಗ ಪಕ್ಷ , ಜಾತಿ ಜತೆ ಸೇರಿಸಿ ಪ್ರತಿಭಟನೆ ಮಾಡುವುದು ತಪ್ಪು. ಅವುಗಳ ವಿರುದ್ಧ ರಾಜಕೀಯ, ಜಾತಿ ರಹಿತ ಪ್ರತಿಭಟನೆ ಆದಾಗ ಮಾತ್ರ ಹೋರಾಟಗಳಿಗೆ ಅರ್ಥ ಬರುತ್ತದೆ. ಆರೋಪಿಗಳು ಯಾವುದೇ ಸಮಾಜದವರಿರಲಿ ಕಠಿನ ಶಿಕ್ಷೆಯಾಗುವಂತೆ ಆಗಬೇಕು ಎಂದರು.
ಒಗ್ಗಟ್ಟಾಗಿ ಪ್ರತಿಭಟಿಸಿ
ಸಾಮಾಜಿಕ ಹೋರಾಟಗಾರ್ತಿ ನಂದಾ ಬಾಯಿ ಮಾತನಾಡಿ, ಮಹಿಳೆಯರು ಇಂತಹ ದೌರ್ಜನ್ಯಗಳಾದಾಗ ಒಗ್ಗಟ್ಟಾಗಿ ಪ್ರತಿಭಟಿಸಿ ಸರಕಾರಕ್ಕೆ ಒತ್ತಡ ಹಾಕಬೇಕು. ಮಹಿಳೆಯ ಸಬಲೀಕರಣಕ್ಕೆ ಮಹಿಳೆಯರು ಎಚ್ಚೆತ್ತು ಸಂಘಟನೆ ಮೂಲಕ ಶಕ್ತಿ ಪ್ರದರ್ಶಿಸ ಬೇಕು ಮಾತ್ರವಲ್ಲ ಮಹಿಳೆಯರ ಹಕ್ಕೊತ್ತಾಯಗಳನ್ನು ಸರಕಾರ ಪೂರೈಸುವಷ್ಟು ಪ್ರಬಲತೆಯನ್ನು ಪಡೆಯಬೇಕು. ಕೊಲೆ ಕೃತ್ಯ ನಡೆಸಿದ ಆರೋಪಿಗಳಿಗೆ ಶಿಕ್ಷೆಯಾಗುವ ಮೂಲಕ ಬೇರೆ ಯಾರೂ ಇಂತಹ ಕೃತ್ಯಕ್ಕೆ ಇಳಿದಂತೆ ಮಾಡಬೇಕಾಗಿದೆ ಎಂದರು.
ಶೋಕಾಚರಣೆ
ಪ್ರತಿಭಟನೆ ಬಳಿಕ ಕ್ಯಾಂಡಲ್ ಉರಿಸಿ ಶೋಕಾಚರಣೆ ನಡೆಸಲಾಯಿತು. ಹಂಗಾಮಿ ಅಧ್ಯಕ್ಷ ದೀಪಕ್ ಪೂಜಾರಿ,
ಮಹಮ್ಮದ್, ಸದಾಶಿವ ಶೆಟ್ಟಿ, ರಾಜೇಶ್ ಕುಳಾಯಿ, ಪ್ರತಿಭಾ ಕುಳಾಯಿ, ಆನಂದ ಅಮೀನ್, ಬಶೀರ್ ಬೈಕಂಪಾಡಿ, ಬಶೀರ್ ಅಹ್ಮದ್, ಹರೀಶ್ ಸುರತ್ಕಲ್, ವೈ. ರಾಘವೇಂದ್ರ ರಾವ್, ಹುಸೈನ್ ಕಾಟಿಪಳ್ಳ, ಗೋವರ್ಧನ ಶೆಟ್ಟಿಗಾರ್, ಮಮ್ತಾಜ್ ಆಲಿ, ಸಂತೋಷ್ ಶೆಟ್ಟಿ, ಮಲ್ಲಿಕಾರ್ಜುನ್, ಹಂಝ, ರೆಹಮಾನ್ ಖಾನ್ ಕುಂಜತ್ತಬೈಲ್ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
PCB: ಒಂದು ವರ್ಷದಲ್ಲಿ ಐದು ಕೋಚ್; ಪಾಕಿಸ್ತಾನ ವೈಟ್ ಬಾಲ್ ಕೋಚ್ ಆಗಿ ಆಖಿಬ್ ಜಾವೇದ್ ಆಯ್ಕೆ
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.