ರೇಡಿಯೋ ಸಾರಂಗ್‌ನಲ್ಲಿ ನಿರೂಪಕಿಯಾದ ಮಂಗಳಮುಖಿ ಕಾಜಲ್
Team Udayavani, Nov 15, 2017, 12:37 PM IST
ಮಹಾನಗರ: ಸಾಧಿಸುವ ಛಲವೊಂದಿದ್ದರೆ ಯಾವುದೇ ಕ್ಷೇತ್ರದಲ್ಲಿಯೂ ಗುರುತಿಸಿಕೊಳ್ಳಬಹುದು ಎನ್ನುವುದಕ್ಕೆ ಇವರು ಉದಾಹರಣೆ. ಸಮಾಜದಲ್ಲಿ ಲಿಂಗತ್ವ ಅಲ್ಪಸಂಖ್ಯಾಕರಿಗೆ ಅವಕಾಶ ಸಿಗುವುದೇ ಕಡಿಮೆ. ಅವಕಾಶವಿದ್ದರೂ, ಗುರುತಿಸಿಕೊಳ್ಳುವವರು ವಿರಳ. ಆದರೆ ಇಲ್ಲೊಬ್ಬರು ಸಾಧನೆಯ ಮೂಲಕವೇ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ಉಡುಪಿಯಲ್ಲಿ ವಾಸವಾಗಿರುವ ಕಾಜಲ್ ಮೂಲತಃ ಮಂಡ್ಯ ಮೂಲದವರು. ಇವರಿಗೆ ಬಾಲ್ಯದಲ್ಲಿಯೇ ನಿರೂಪಕಿಯಾಗುವ ಆಸೆ ಇತ್ತು. ಇವರ ಆಸೆಗೆ ಕರಾವಳಿಯ ಪ್ರಸಿದ್ಧ ಸಮುದಾಯ ಬಾನುಲಿಯಾದ ‘ರೇಡಿಯೋ ಸಾರಂಗ್ 107.8’ ನೀರೆರೆದಿದೆ. ಮಂಗಳಮುಖಿಯೊಬ್ಬರು ನಿರೂಪಕಿಯಾಗಲು ಅವಕಾಶ ಕಲ್ಪಿಸಿದೆ.
ಕಾಜಲ್ ಅವರದ್ದು ಬಹುಮುಖ ವ್ಯಕ್ತಿತ್ವ. ನೃತ್ಯ, ಬ್ಯೂಟೀಷಿಯನ್, ರಂಗಭೂಮಿ ಕ್ಷೇತ್ರಗಳಲ್ಲಿ ಇವರಿಗೆ ಅತೀವ ಆಸಕ್ತಿ. ಪಿಯುಸಿವರೆಗೆ ಶಿಕ್ಷಣ ಪೂರೈಸಿರುವ ಕಾಜಲ್, ಈಗ ದೂರ ಶಿಕ್ಷಣದ ಮೂಲಕ ಪದವಿ ಶಿಕ್ಷಣ ಪಡೆಯುತ್ತಿದ್ದಾರೆ. ಉಡುಪಿಯ ಸ್ಥಳೀಯ ವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಇವರು, ರಂಗಭೂಮಿ ಕ್ಷೇತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗುವ ಆಸೆಯನ್ನು ಕಾಜಲ್ ವ್ಯಕ್ತಪಡಿಸಿದ್ದರು. ರೇಡಿಯೋ ಸಾರಂಗ್ ಮುಖ್ಯಸ್ಥರು ಇವರಿಗೆ ಅವಕಾಶ ಒದಗಿಸಿದ್ದಾರೆ.
ಶುಭಮಂಗಳ ಕಾರ್ಯಕ್ರಮ
ಕಾಜಲ್ ಅವರಿಗೆ ನಿರೂಪಣೆಯ ತರಬೇತಿ ನೀಡಲಾಗಿದ್ದು, ನ. 21ರಿಂದ ಪ್ರತೀ ಮಂಗಳವಾರ ಸಂಜೆ 5ರಿಂದ 6ರ ನಡುವೆ ‘ಶುಭಮಂಗಳ’ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಈಕಾರ್ಯಕ್ರಮ ಲೈಂಗಿಕ ಅಲ್ಪಸಂಖ್ಯಾತರ ಜತೆ ಮಾತುಕತೆ, ಸಾಧಕರ ಪರಿಚಯ ಮುಂತಾದ ವಿಚಾರಗಳು ಒಳಗೊಳ್ಳಲಿವೆ.
ಪ್ರತಿಭೆಯನ್ನುಗುರುತಿಸಿದ್ದೇವೆ
ಮಂಗಳಮುಖಿಯರಿಗೂ ಸಮಾಜದಲ್ಲಿ ಗುರುತಿಸಿಕೊಳ್ಳುವ ಆಸೆ ಇರುತ್ತದೆ. ಇವರಲ್ಲಿಯೂ ಪ್ರತಿಭಾವಂತರಿದ್ದಾರೆ. ಆದರೆ ಸೂಕ್ತ ವೇದಿಕೆಯ ಕೊರತೆ ಇದೆ. ಕಾಜಲ್ ಅವರ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡಿದ್ದೇವೆ.
– ಡಾ| ಫಾ| ಮೆಲ್ವಿನ್
ಪಿಂಟೋ, ಸಹಾಯಕ ನಿರ್ದೇಶಕರು, ರೇಡಿಯೋ ಸಾರಂಗ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ
Updated: ಕೆನಡಾ ಮುಂದಿನ ಪ್ರಧಾನಿ ರೇಸ್ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!
UP: ಪತಿ, ಆರು ಮಕ್ಕಳನ್ನು ಬಿಟ್ಟು ಭಿಕ್ಷುಕನ ಜತೆ ಓಡಿಹೋದ ಮಹಿಳೆ
Mangaluru: ಆಕಸ್ಮಿಕ ಗುಂಡು ತಗುಲಿ ವ್ಯಕ್ತಿಗೆ ಗಾಯ… ವಾಮಂಜೂರಿನಲ್ಲಿ ಘಟನೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.