ಅಂದುಕೇಂದ್ರ ಎಂದವರು ಇಂದು ರಾಜ್ಯ;ಇಂದು ರಾಜ್ಯ ಎನ್ನುವವರುಅಂದು ಕೇಂದ್ರ
Team Udayavani, Mar 31, 2018, 11:24 AM IST
ಬಜಪೆ: 2013ರ ವಿಧಾನಸಭಾ ಚುನಾವಣಾ ವೇಳೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ ಇದ್ದರೆ, ರಾಜ್ಯದಲ್ಲಿ ಬಿಜೆಪಿ ಸರಕಾರ ಇತ್ತು. ಈಗ ಅದೇ ಉಲ್ಟಾ ಹೊಡೆದಿದೆ. 2018ರ ಚುನಾವಣಾ ವೇಳೆ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಇದ್ದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ.
ಅಂದು ಜನಪರ ಯೋಜನೆಗಳೆಲ್ಲ ಕೇಂದ್ರದವು ಎಂದು ಹೇಳಿದವರು ಇಂದು ಅವೆಲ್ಲ ರಾಜ್ಯದವು ಎನ್ನುತ್ತಿದ್ದಾರೆ. ಅಂದು ರಾಜ್ಯದ ಯೋಜನೆಗಳು ಎಂದವರು ಈಗ ಅವೆಲ್ಲ ಕೇಂದ್ರದವು ಎನ್ನುತ್ತಿದ್ದಾರೆ. ಜನಪರ, ಅಭಿವೃದ್ಧಿ ಎಂಬ ಪದಗಳನ್ನು ಎತ್ತಿಕೊಂಡರೆ ಈ ಹೊಗಳಿಕೆಗಳು ಆರಂಭವಾಗುತ್ತವೆ. ಯಾವುದೇ ಕಾರ್ಯಕ್ರಮವಿರಲಿ, 2013ರಲ್ಲಿ ಕಾಂಗ್ರೆಸ್ ಪಕ್ಷದವರು ಅವೆಲ್ಲ ಪ್ರಧಾನಿ ಮನಮೋಹನ್ ಸಿಂಗ್ ಅವರ ಯೋಜನೆಗಳು ಎಂದು ಹೇಳುತ್ತಿದ್ದರು. ಇದಕ್ಕೆ ಪ್ರತಿಯಾಗಿ ಆಗ ಬಿಜೆಪಿಯವರು ಅವೆಲ್ಲ ರಾಜ್ಯದಲ್ಲಿ ಮಾತ್ರ ಇವೆ, ಇವೆಲ್ಲ ರಾಜ್ಯ ಬಿಜೆಪಿ ಸರಕಾರದ ಯೋಜನೆಗಳು ಎಂದು ಹೇಳುತ್ತಿದ್ದರು.
2018ರಲ್ಲಿ ಇದು ಉಲ್ಟಾ ಆಗಿದೆ. ಈಗ ಅಭಿವೃದ್ಧಿ ಯೋಜನೆಗಳೆಲ್ಲ ಕೇಂದ್ರದವು ಎಂಬುದಾಗಿ ಬಿಜೆಪಿಯವರು ಹೇಳಿಕೊಂಡರೆ, ಇಲ್ಲ ಅವೆಲ್ಲ ರಾಜ್ಯ ಕಾಂಗ್ರೆಸ್ ಸರಕಾರದವು ಎಂಬುದು ಕಾಂಗ್ರೆಸಿಗರ ವಾದ.
ಕೇಂದ್ರದ ಈಗಿನ ಹೊಸ ಯೋಜನೆಗಳೆಲ್ಲ ಈ ಹಿಂದೆ ಯುಪಿಎ ಅಧಿಕಾರದಲ್ಲಿ ಇದ್ದಾಗ ಆರಂಭಿಸಿದಂಥವು, ಈಗ ಅನುಷ್ಠಾನಗೊಳ್ಳುತ್ತಿವೆ, ಹೆಸರು ಮಾತ್ರ ಬೇರೆ ಎಂಬುದು ಕಾಂಗ್ರೆಸ್ ವಾದ. ಇದಕ್ಕೆ ಪ್ರತಿಯಾಗಿ ಬಿಜೆಪಿ ಹೇಳುವುದೇನೆಂದರೆ, ಕೇಂದ್ರ ಸರಕಾರದ ಯೋಜನೆಗಳನ್ನೇ ರಾಜ್ಯದಲ್ಲಿ ಹೆಸರು ಬದಲಿಸಿ ಕಾಂಗ್ರೆಸ್‌ನವರು ತಮ್ಮದು ಎಂದು ಹೇಳಿಕೊಳ್ಳುತ್ತಿದ್ದಾರೆ. ಇದಕ್ಕೆ ಅನುದಾನವೆಲ್ಲ ಕೇಂದ್ರ ಸರಕಾರದ್ದು. ಎರಡೂ ಪಕ್ಷಗಳ ಈ ಅಭಿವೃದ್ಧಿ ವಿವಾದದಿಂದ ಗಲಿಬಿಲಿಗೊಳ್ಳುವ ಸರದಿ ಜನಸಾಮಾನ್ಯರದು.
ಜನಸಾಮಾನ್ಯರಿಗೆ ಯಾವುದು ಕೇಂದ್ರದ ಯೋಜನೆ, ಯಾವುದು ರಾಜ್ಯ ಸರಕಾರದ ಯೋಜನೆ, ಯಾವುದಕ್ಕೆ ಕೇಂದ್ರದ ಅನುದಾನ ಎಷ್ಟು, ರಾಜ್ಯದ ಅನುದಾನ ಎಷ್ಟು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಠಿನ. ಅದೇನೇ ಇದ್ದರೂ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡು ಅವುಗಳ ಅನುಕೂಲ ಅರ್ಹ ಫಲಾನುಭವಿಗಳಿಗೆ ಸಿಕ್ಕಿದೆಯೇ ಎನ್ನುವುದು ಮುಖ್ಯ. ಯೋಜನೆ ಯಾರದ್ದೇ ಇರಲಿ; ಅದರಿಂದ ಎಷ್ಟು ಜನರು ಪ್ರಯೋಜನ ಪಡೆದಿದ್ದಾರೆ ಎಂಬುದೇ ಮುಖ್ಯ.
ಸುಬ್ರಾಯ ನಾಯಕ್ ಎಕ್ಕಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bantwala: ನಾವೂರು: ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಬಂಧನ
Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್. ಸಂತೋಷ್ ಹೆಗ್ಡೆ
Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್
Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ
Kota: ಸಾಸ್ತಾನ ಟೋಲ್: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.