ಮೂರು ದಿನವಾದರೂ ದಾಖಲಾಗದ ಎಫ್ಐಆರ್ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!
Team Udayavani, Jan 11, 2025, 12:57 AM IST
ಮಂಗಳೂರು: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯೊಬ್ಬ ಕಡತ ಪರಿಶೀಲಿಸಿ ಪೆನ್ನಲ್ಲಿ ತಿದ್ದುವ ವೀಡಿಯೋ ಬಹಿರಂಗಗೊಂಡು ಮೂರು ದಿನಗಳಾಗಿವೆ. ಆದರೆ ಅಚ್ಚರಿ ಎಂದರೆ ಈ ಕುರಿತು ನೀಡಲಾದ ದೂರಿನಲ್ಲಿ ಕಡತ ತಿದ್ದಿರುವ ಬಗ್ಗೆ ಉಲ್ಲೇಖವಿಲ್ಲ!
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಉರ್ವ ಪೊಲೀಸ್ ಠಾಣೆಗೆ ಬರವಣಿಗೆಯಲ್ಲಿ ದೂರು ನೀಡಲಾಗಿದೆಯಾದರೂ ಅದರಲ್ಲಿ “ಕಡತ ತಿದ್ದುಪಡಿ’ ಆಗಿರುವ ವಿಚಾರವನ್ನೇ ಉಲ್ಲೇಖಿಸಿಲ್ಲ. ಯಾರೋ ಒಬ್ಬ ವ್ಯಕ್ತಿ ಮುಡಾ ಕಚೇರಿಯೊಳಗೆ ಅಕ್ರಮವಾಗಿ ಪ್ರವೇಶಿಸಿದ್ದಾನೆ ಎಂದಷ್ಟೇ ದೂರಿನಲ್ಲಿ ತಿಳಿಸಲಾಗಿದೆ. ತಲಪಾಡಿಯ ಗ್ರಾ.ಪಂ. ಮಾಜಿ ಸದಸ್ಯ ಎನ್ನುವ ಅಂಶವೊಂದು ಮಾತ್ರ ಇದೆ.
ಈ ಕಾರಣಕ್ಕಾಗಿ ಇನ್ನೂ ಪೊಲೀಸರು ಇನ್ನೂ ಎಫ್ಐಆರ್ ದಾಖಲಿಸಿಲ್ಲ. ದೂರಿನಲ್ಲಿ ಕ್ರಿಮಿನಲ್ ಅಪರಾಧಕ್ಕೆ ಸಂಬಂಧಿಸಿ ಯಾವುದೇ ಉಲ್ಲೇಖ ಇಲ್ಲದಿರುವುದರಿಂದ ಪೊಲೀಸರು ಕಾನೂನು ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದು, ಈಗಾಗಲೇ ಠಾಣಾಧಿಕಾರಿಯವರು ಈ ಕುರಿತಂತೆ ಕಾನೂನು ತಜ್ಞರಿಗೆ ಪತ್ರ ಬರೆದಿದ್ದಾರೆ. ತಜ್ಞರ ಅಭಿಪ್ರಾಯ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.
ಕಡತದಲ್ಲಿ ತಿದ್ದುಪಡಿ ಮಾಡಿದ್ದ ಮಧ್ಯವರ್ತಿ
ಜ. 7ರಂದು ಮಧ್ಯಾಹ್ನ 1.30ರ ವೇಳೆಗೆ ಮಧ್ಯವರ್ತಿಯೊಬ್ಬ ಮುಡಾ ಕಚೇರಿಯಲ್ಲಿ ಕಡತ ತಿದ್ದು ಪಡಿ ಮಾಡಿದ್ದ. ಇದು ಸಿಸಿ ಟಿವಿಯಲ್ಲಿ ರೆಕಾರ್ಡ್ ಆಗಿದೆ. ಮುಡಾ ಕಟ್ಟಡದ ಮೊದಲ ಮಹಡಿಯ ಕಚೇರಿಗೆ ಬಂದು, ಊಟದ ಸಮಯವಾದ ಕಾರಣ ಯಾರೂ ಇಲ್ಲದ್ದನ್ನು ಕಂಡು ಟೇಬಲ್ ಮೇಲಿನ ಕಡತಗಳಲ್ಲಿ ತನಗೆ ಬೇಕಾದದ್ದನ್ನು ಹುಡುಕಿ, ತನ್ನದೇ ಪೆನ್ನಿಂದ ಅದರಲ್ಲಿ ಬರೆದಿದ್ದಾನೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.