ಯಕ್ಷರಂಗದ ರಾಜನ ಮನೆಯಲ್ಲೀಗ ಮೌನದ ಒಡ್ಡೋಲಗ

Team Udayavani, Feb 12, 2018, 11:28 AM IST

12-Feb-6.jpg

ಬೆಳ್ತಂಗಡಿ: ಬಪ್ಪನಾಡು ಮೇಳದಲ್ಲಿ ಭರ್ಜರಿ ಪ್ರದರ್ಶನ ಕಂಡ ಬನತ್ತ ಬಬ್ಬರ್ಯ, ಬನತ್ತ ಬಂಗಾರ್‌ ಸಹಿತ ತುಳು ಪ್ರಸಂಗಗಳಲ್ಲಿ ವಿಶಿಷ್ಟ ಛಾಪು ಮೂಡಿಸಿದ ಕಲಾವಿದ ನಾವೂರು ಗಂಗಾಧರ ಶೆಟ್ಟಿ (48) ರಂಗದಿಂದ ಶಾಶ್ವತವಾಗಿ ಮರೆಗೆ ಸರಿದಿದ್ದಾರೆ. 

ರಂಗದಲ್ಲಿ ರಾಜನಾಗಿ ಒಡ್ಡೋಲಗದಲ್ಲಿ ಮೆರೆದ ಅವರ ಮನೆಯಲ್ಲೀಗ ಮೌನದ ಒಡ್ಡೋಲಗ ನಡೆಯುತ್ತಿದೆ. ಕಲಿಯಬೇಕೆಂಬ ಹಂಬಲದ ಮಗಳು ಉದ್ಯೋಗ ಹುಡುಕಾಟದಲ್ಲಿದ್ದಾರೆ. ಮನೆಗಾಗಿ ಮಾಡಿದ ಸಾಲದ ಕಂತು ಮನೆಯಷ್ಟೇ ದೊಡ್ಡ ಗಾತ್ರದಲ್ಲಿದೆ.

ನೂತನ ಮನೆ
ಕಳೆದ ವರ್ಷ ಜು.31ರಂದು ವಾಮದಪದವು ಸಮೀಪ ಚಿಕ್ಕಮೇಳದಲ್ಲಿ ವಿಶ್ರಾಂತಿಯಲ್ಲಿದ್ದ ಶೆಟ್ಟರು ಚಿರವಿಶ್ರಾಂತಿಗೆ
ಜಾರಿದ್ದರು. ಅನಿರೀಕ್ಷಿತ ಆಘಾತದಿಂದ ಅವರ ಕುಟುಂಬ ಕಂಗಾಲಾಗಿದೆ. ಬೆಳ್ತಂಗಡಿ ಯಿಂದ ಕಿಲ್ಲೂರಿಗೆ ಹೋಗುವ
ರಸ್ತೆಯಲ್ಲಿ ಸಿಗುವ ನಾವೂರು ಎಂಬಲ್ಲಿನ ಶೆಟ್ಟರ ಮನೆಗೆ ಉದಯವಾಣಿ ಪ್ರತಿನಿಧಿ ತೆರಳಿದಾಗ ಅವರ ಕನಸಿನ ಮನೆಯಲ್ಲಿ ನೀರವ ಆವರಿಸಿತ್ತು. ಪತ್ನಿ ಯಶೋದಾ ಶೆಟ್ಟಿ, ಇಲ್ಲಿನ ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ವರ್ಷದ ಬಿಕಾಂ ವಿದ್ಯಾರ್ಥಿನಿ ಪುತ್ರಿ ಶ್ರೀರಕ್ಷಾ ಅವರ ಕಣ್ಣಾಲಿಗಳಲ್ಲಿ ಶೆಟ್ಟರ ನೆನಪುಗಳ ಮೆಲುಕು ಹಾಕಿದಾಗ ಕಣ್ಣುಗಳಲ್ಲಿ ನೀರು ಬಸಿದು ಮೌನದ ಕಟ್ಟೆಯೊಡೆದಿತ್ತು.

ಗೃಹಪ್ರವೇಶಕ್ಕೆ ಮುನ್ನ
ಸುಣ್ಣ ಬಳಿದ, ಬಣ್ಣವಿನ್ನೂ ಬಳಿಯ ಬೇಕಿದ್ದ ಈ ಮನೆಯ ಗೃಹಪ್ರವೇಶ ಇನ್ನೆರಡು ತಿಂಗಳಲ್ಲಿ ನಡೆಯಬೇಕಿತ್ತು. ಉದ್ಯೋಗಕ್ಕೆಂದು ಮೂರು ತಿಂಗಳ ಹಿಂದೆ ವಿದೇಶಕ್ಕೆ ಹೋಗಿದ್ದ ಪುತ್ರ ಶ್ರೀಜಿತ್‌ ಶೆಟ್ಟಿ (21) ಅವರ ಅನುಕೂಲವಾಗುವ ದಿನಕ್ಕಾಗಿ ಹುಡುಕಾಟದಲ್ಲಿದ್ದರು. ರಂಗಸ್ಥಳವೇ ಅನ್ನದ ಬಟ್ಟಲು, ಹೆಜ್ಜೆಗಾರಿಕೆಯೇ ಅನ್ನದ ಅಗಳು, ಮಾತುಗಾರಿಕೆಯೇ ಮೇಲೋಗರವಾಗಿದ್ದ ಅವರಿಗೆ ಯಕ್ಷಗಾನ ಬಿಟ್ಟರೆ ಬೇರೆ ಜೀವನೋಪಾಯ ಇರಲಿಲ್ಲ. 32
ವರ್ಷಗಳ ಯಕ್ಷ ತಿರುಗಾಟದಲ್ಲಿ ಅಷ್ಟೋ ಇಷ್ಟೋ ದುಡಿದುದರ ಜತೆಗೆ ಬ್ಯಾಂಕ್‌ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದರು. ಮಕ್ಕಳನ್ನು ಓದಿಸಿದ್ದರು. ಮಗ ಉದ್ಯೋಗ ನಿಮಿತ್ತ ಸೌದಿಗೆ ಹೋದ ಕಾರಣ ಈ ವರ್ಷದಿಂದ ಮೇಳದ ತಿರುಗಾಟಕ್ಕೆ
ವಿಶ್ರಾಂತಿ ಬಯಸಿದ್ದರು. ಮಳೆಗಾಲದಲ್ಲಿ ಚಿಕ್ಕಮೇಳದ ತಿರುಗಾಟ ನಡೆಸುತ್ತಿದ್ದಾಗ ವಿಧಿ ತನ್ನ ಕರಾಳ ಹಸ್ತವನ್ನು ಹಣೆಬರಹದ ಮೇಲೆ ಆಡಿಸಿಬಿಟ್ಟಿತು.

ಮೇಳಗಳ ತಿರುಗಾಟ
ನಾವೂರಿನ ಪೆಲತ್ತಕಟ್ಟೆ ಎಂಬಲ್ಲಿ ದಿ| ಕೃಷ್ಣಶೆಟ್ಟಿ – ಲಕ್ಷ್ಮೀ  ಶೆಡ್ತಿ ದಂಪತಿಯ ಮೂವರು ಮಕ್ಕಳ ಪೈಕಿ ಹಿರಿಯವನಾಗಿ
ಜನಿಸಿದ ಗಂಗಾಧರ ಅವರು ನಾವೂರು ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸದ ಬಳಿಕ ಯಕ್ಷಗಾನದೆಡೆಗೆ ಆಕರ್ಷಿತರಾಗಿ ಧರ್ಮಸ್ಥಳ ಯಕ್ಷಗಾನ ಲಲಿತಕಲಾ ಕೇಂದ್ರದಲ್ಲಿ ಕೆ. ಗೋವಿಂದ ಭಟ್‌ ಹಾಗೂ ಕರ್ಗಲ್ಲು ವಿಶ್ವೇಶ್ವರ ಭಟ್ಟರಲ್ಲಿ ಯಕ್ಷಗಾನದ ನಾಟ್ಯ ಕಲಿತರು. ತನ್ನ ಸೋದರ ಸಂಬಂಧಿ ಕಲಾವಿದ ಬೆಳ್ಳಾರೆ ವಿಶ್ವನಾಥ ರೈಯವರ ಒತ್ತಾಸೆಯಿಂದ ಮೇಳದ ತಿರುಗಾಟ ಆರಂಭಿಸಿ ಕದ್ರಿ (3), ಬಪ್ಪನಾಡು (3), ಅರುವ (2), ಕುಂಬ್ಳೆ (3), ಕುಂಟಾರು (1), ಮಂಗಳಾದೇವಿ (4), ಬಾಚಕೆರೆ (ಅತಿಥಿ ಕಲಾವಿದರಾಗಿ) ಮೊದಲಾದ ಮೇಳಗಳಲ್ಲಿ ಸೇವೆ ಸಲ್ಲಿಸಿ, ಬಳಿಕ ಬಪ್ಪನಾಡು ಮೇಳದ ತಿರುಗಾಟದಲ್ಲಿದ್ದರು.

ವೇಷಗಳು
ಮೂಲತಃ ಪುಂಡುವೇಷಧಾರಿ ಯಾಗಿದ್ದ ಶೆಟ್ಟರು, ಅಭಿಮನ್ಯು, ಕುಶ, ಬಭ್ರುವಾಹನ ಮುಂತಾದ ಪಾತ್ರಗಳಲ್ಲಿ ಪ್ರಸಿದ್ಧಿ
ಗಳಿಸಿದ್ದರು. ಅಯ್ಯಪ್ಪ, ದೇವೇಂದ್ರ, ಅರ್ಜುನ, ಕರ್ಣ, ಹಂಸಧ್ವಜ, ದಾರಿಕಾಸುರ, ವಿಷ್ಣು, ಮಧು ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು. ತುಳು ಯಕ್ಷಗಾನ ರಂಗದಲ್ಲಿ ಪೆರುಮಳೆ ಬಲ್ಲಾಳ, ಮಲ್ಲಯ್ಯ ಬುದ್ಧಿವಂತ, ಕಾಂತಬಾರೆ, ಶಂಕರಾಳ್ವ, ಕೋಟಿ, ದೇವುಪೂಂಜ ಪಾತ್ರಗಳನ್ನು ಭಾವಪ್ರಧಾನವಾಗಿ, ಮನೋಜ್ಞವಾಗಿ
ನಿರ್ವಹಿಸುವುದರಲ್ಲಿ ನಿಷ್ಣಾತರಾಗಿದ್ದರು ಎಂದು ಯಕ್ಷಗಾನ ಕಲಾವಿದ, ಸಂಘಟಕ ಮೂಡಬಿದಿರೆ ಶಾಂತಾರಾಮ ಕುಡ್ವ
ಸ್ಮರಿಸುತ್ತಾರೆ. 

ಕಲಿಕೆಗೆ ಬೇಕಿದೆ ನೆರವು
ಸ್ವಸಹಾಯ ಸಂಘಗಳ ಮೂಲಕ ಮನೆ ಕಟ್ಟಲು ಸಾಲ ತೆಗೆದ ಶೆಟ್ಟರು ವಾರಕ್ಕೆ 2,000 ರೂ. ಪಾವತಿಗೆ ಕಷ್ಟ ಎಂದು ನಾವೂರು ಸಿಎ ಬ್ಯಾಂಕಿನಲ್ಲಿ ಸಾಲ ಪಡೆದು ಮನೆ ಕಟ್ಟಿಸಿದ್ದರು. ಈಗ ಮೂರು ತಿಂಗಳಿಗೆ 35 ಸಾವಿರ ರೂ. ಸಾಲದ ಕಂತು ಬರುತ್ತಿದೆ. ಪುತ್ರಿಯ ಬಿಕಾಂ ಪದವಿ ಅಂತಿಮ ಹಂತದಲ್ಲಿದ್ದು, ಎಂಕಾಂ ಅಥವಾ ಸಿಎ ಮಾಡುವ ಉತ್ಸಾಹದಲ್ಲಿದ್ದಾರೆ. ಮಗನಿಗೂ ಊರಿಗೆ ಕಳುಹಿಸುವಷ್ಟು ದೊಡ್ಡ ಸಂಬಳದ ಕೆಲಸ ಇಲ್ಲ. ಐಟಿಐ ಮಾಡಿ ವಿದೇಶಕ್ಕೆ ಹೋಗಿ ಪೈಂಟ್‌ ಕಂಪೆನಿಯಲ್ಲಿ ಕೆಲಸಕ್ಕಿದ್ದಾನೆ. ನಾನು ಸ್ಥಳೀಯ ಶಾಲೆಯಲ್ಲಿ 2,100 ರೂ. ಸಂಬಳಕ್ಕೆ ಬಿಸಿಯೂಟ ಕಾರ್ಯಕರ್ತೆ ಯಾಗಿದ್ದೇನೆ. ಮನೆಗಾಗಿ ಸಾಲ ಮಾಡಬಾರದು ಎಂದೇ ಚಿಕ್ಕಮೇಳದ ತಿರುಗಾಟ ಮಾಡಿದರು. ರಾತ್ರಿ, ಹಗಲು ಯಕ್ಷಗಾನವೆಂದೇ ಜೀವನ ತೇಯ್ದರು ವಿನಾ ಕನಸಿನ ಮನೆಯಲ್ಲಿ ಬಾಳುವ ಯೋಗ ಅವರಿಗಿಲ್ಲವಾಯ್ತು ಎಂದು ಯಶೋದಾ ಹೇಳುತ್ತಿದ್ದರೆ ಒತ್ತರಿಸಿ ಬರುತ್ತಿದ್ದ ಕಣ್ಣೀರಿಗೆ ಆಸರೆಯಾದುದು ಮಗಳ ಕೈ ಬೆರಳುಗಳು. ಶ್ರೀರಕ್ಷಾ ಅವರ ಶಿಕ್ಷಣದ ಕನಸಿಗೆ ಆಸರೆಯಾಗುವವರಿಗೆ: ಯಶೋದಾ, ಸಿಂಡಿಕೇಟ್‌ ಬ್ಯಾಂಕ್‌, ಬಂಗಾಡಿ ಶಾಖೆ, ಅಕೌಂಟ್‌ ನಂಬರ್‌: 01982200048918. ಐಎಫ್‌ಎಸ್‌ಸಿ : ಎಸ್‌ವೈಎನ್‌ಬಿ0000198. ಮೊ: 9902593707.

 ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Ramanagara: ಸಾಲಗಾರರಿಗೆ ಕಿರುಕುಳ: ಮೈಕ್ರೋ ಫೈನಾನ್ಸ್ ವ್ಯವಸ್ಥಾಪಕನ ಬಂಧನ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

Bharat Mobility Expo: 2 ಐಷಾರಾಮಿ ಇವಿ ಬಿಡುಗಡೆ ಮಾಡಿದ ಜೆಎಸ್‌ಡಬ್ಲ್ಯೂ ಎಂಜಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

POlice

Puttur: ಅನಾಥ ಸ್ಥಿತಿಯಲ್ಲಿ ಎರಡು ಬೈಕ್‌; ವಶಕ್ಕೆ ಪಡೆದುಕೊಂಡ ಪೊಲೀಸರು

2

Bantwal: ಬೀದಿ ಬದಿ ವ್ಯಾಪಾರ ಸ್ಥಳಾಂತರ

Dharmasthala: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಛಲವಾದಿ ನಾರಾಯಣಸ್ವಾಮಿ ಕುಟುಂಬ ಭೇಟಿ

Uppinangady:ಪ್ರಿ ವೆಡ್ಡಿಂಗ್‌ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ

Uppinangady:ಪ್ರಿ ವೆಡ್ಡಿಂಗ್‌ ಶೂಟಿಂಗ್‌ಗೆ ತೆರಳುತ್ತಿದ್ದಾಗ ಅಪಘಾತ:ಭಾವಿ ವಧು-ವರರಿಗೆ ಗಾಯ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.