ಮಳೆಗಾಲದಲ್ಲಿ ಮತ್ತೆ ಅನಾಹುತ ಭೀತಿ
Team Udayavani, Mar 21, 2019, 1:00 AM IST
ಸುಬ್ರಹ್ಮಣ್ಯ: ಕಳೆದ ಮಳೆ ಗಾಲದಲ್ಲಿ ಭಾರೀ ಪ್ರಕೃತಿ ವೈಪರೀತ್ಯ ಘಟಿಸಿದ ಬಿಸಿಲೆ ಘಾಟಿ ಈಗ ಮತ್ತೂಂದು ಆತಂಕ ಎದುರಿಸುತ್ತಿದೆ. ಭೂಕುಸಿತ, ಜಲಪ್ರಳಯದಿಂದ ವಿಶಾಲ ಪ್ರದೇಶದ ಅರಣ್ಯ ನಾಶವಾಗಿ ಮಣ್ಣು ಹಸಿರು ಹೊದಿಕೆ ಕಳೆದುಕೊಂಡಿದ್ದು, ಮುಂದಿನ ಮಳೆಗಾಲದಲ್ಲಿ ಭೂ ಸವೆತ ತೀವ್ರ ಸಮಸ್ಯೆ ಸೃಷ್ಟಿಸುವ ಸಾಧ್ಯತೆಯಿದೆ.
ಭೂಕುಸಿತ, ಜಲಪ್ರಳಯದಿಂದ ಘಟ್ಟದ ಹಲವೆಡೆ ಕಣಿವೆ, ತೋಡುಗಳು ಸೃಷ್ಟಿಯಾಗಿವೆ. ವೀಕ್ಷಣಾ ಗೋಪುರದ ಬಳಿ, ಸಕಲೇಶಪುರ ರಾ.ಹೆ. ಉದ್ದಕ್ಕೂ ದ.ಕ. ಮತ್ತು ಸಕಲೇಶಪುರ ವಿಭಾಗಕ್ಕೆ ಸೇರಿದ ಅನೇಕ ಕಡೆ ರಸ್ತೆ, ಸೇತುವೆಗಳು ಮಾಯವಾಗಿ ಸಂಪರ್ಕ ಕಡಿತವಾಗಿತ್ತು. ನೂರಾರು ಎಕರೆ ಅರಣ್ಯ ನಾಶವಾಗಿತ್ತು.
ಈ ಪ್ರಾಕೃತಿಕ ವಿಕೋಪದ ಭೀಕರತೆಗೆ ಅಲ್ಲಿನ ಅವಶೇಷಗಳು ಸಾಕ್ಷಿ ಹೇಳುತ್ತವೆ.
ಒರತೆ ಮತ್ತು ನೆರೆ ಬಿಟ್ಟರೆ ಚಿತ್ರಣ ಬದಲಾಗಿಲ್ಲ.
ಸವಕಳಿ ಖಚಿತ
ಬಿಸಿಲೆಯಲ್ಲಿ ವಿಶಾಲ ಭೂಭಾಗದ ಹಸಿರು ಹೊದಿಕೆ ನಾಶವಾಗಿದೆ. ಇದರಿಂದ ಮುಂದಿನ ಮಳೆಗಾಲದಲ್ಲಿ ಮಣ್ಣು ಸವೆತ ಹೆಚ್ಚುವ ಸಾಧ್ಯತೆಗಳಿವೆ. ಸವಕಳಿ ತಡೆಯದಿದ್ದರೆ ಸಸ್ಯ ಸಂಕುಲ, ಅರಣ್ಯ ಉಳಿಸಿಕೊಳ್ಳಲಾಗದು. ಹಾಗಾಗದಂತೆ ಕ್ರಮಗಳ ಅಗತ್ಯವಿದೆ.
ಮಣ್ಣು ಸವಕಳಿ ತಡೆಯುವುದಕ್ಕೆ ಸಸ್ಯಸಂಕುಲ, ಅರಣ್ಯ ಅಗತ್ಯ. ಅವುಗಳ ಬೇರುಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳದಿದ್ದಲ್ಲಿ ಭಾರೀ ಪರಿಣಾಮ ಎದುರಿಸಬೇಕಾಗುತ್ತದೆ. ಆದರೆ ಘಾಟಿ ಪ್ರದೇಶ ದಲ್ಲಿ ಕೃತಕ ತೋಡುಗಳಾಗಿರುವುದು, ಸಸ್ಯಸಂಕುಲ ನಾಶ ಮಣ್ಣು ಸವಕಳಿಗೆ ಅನುಕೂಲ ಮಾಡಿಕೊಟ್ಟಿದೆ. ಸವಕಳಿ ತಡೆಗೆ ಕ್ರಮ ಕೈಗೊಳ್ಳದೆ ಇದ್ದರೆ ಘಟ್ಟದ ಮಣ್ಣು ಮಳೆನೀರಿನೊಂದಿಗೆ ಹರಿದು ನದಿಗಳಲ್ಲಿ ಹೂಳು ತುಂಬಬಹುದು.
ಇಳಿಜಾರಿನಲ್ಲಿ ನೀರು ಹರಿಯುವ ವೇಗ ಹೆಚ್ಚಿದ್ದಷ್ಟು ಸವೆತ ಅಧಿಕ. ಬಿಸಿಲೆಯಲ್ಲಿ ಉಂಟಾಗಿರುವ ಕೃತಕ ಕಣಿವೆ, ತೋಡುಗಳಲ್ಲಿ ಬೃಹತ್ ಬಂಡೆಗಲ್ಲು, ಮರದ ದಿಮ್ಮಿಗಳು ತುಂಬಿದ್ದು, ಸ್ಥಳಾಂತರ ಕಷ್ಟ. ಮಣ್ಣು ಸವಕಳಿ ತಡೆಗೆ ಕ್ರಮ ಅನುಸರಿಸುವುದು ಅಗತ್ಯ.
ಸಂಪರ್ಕ ಕಾಮಗಾರಿ ನಡೆಯುತ್ತಿದೆ
ಸಕಲೇಶಪುರ-ಸುಬ್ರಹ್ಮಣ್ಯ ಬಿಸಿಲೆ ಘಾಟಿ ರಸ್ತೆಯಲ್ಲಿ ಜಲಪ್ರಳಯದ ವೇಳೆ ಹಾನಿಗೀಡಾದ ಸೇತುವೆಗಳ ಪುನರ್‌ನಿರ್ಮಾಣ ಕಾರ್ಯ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿದೆ.
ಏನು ಮಾಡಬಹುದು?
ಮಳೆಗಾಲ ಆರಂಭಕ್ಕೆ ಒಂದೆರಡು ತಿಂಗಳು ಮಾತ್ರವೇ ಇವೆ. ಹಸಿರು ಹೊದಿಕೆ ನಾಶವಾಗಿರುವ ಘಾಟಿ ಪ್ರದೇಶದಲ್ಲೆಲ್ಲ ಬೀಜದುಂಡೆಗಳನ್ನು ವ್ಯಾಪಕವಾಗಿ ಚೆಲ್ಲುವ ಮೂಲಕ ಮೊದಲ ಮಳೆಗೆ ಅವು ಮೊಳಕೆಯೊಡೆ
ಯುವಂತೆ ಮಾಡಬಹುದು. ವಿವಿಧ ಜಾತಿಯ ಹುಲ್ಲಿನ ಬೀಜಗಳನ್ನು ಬಿತ್ತಿದರೆ ಉಪಯೋಗವಾಗಬಹುದು. ಇವು ಒಂದೇ ವರ್ಷದಲ್ಲಿ ಪೂರ್ಣ ಫಲ ಕೊಡುವ ಕ್ರಮಗಳಲ್ಲವಾದರೂ ಹಸಿರು ಹೊದಿಕೆಯನ್ನು ಮರುಸ್ಥಾಪಿಸುವ ಪ್ರಯತ್ನ ಎಂಬುದಂತೂ ನಿಜ.
ಸಕಲೇಶಪುರ-ದಕ್ಷಿಣ ಕನ್ನಡ ಇವೆರಡೂ ಭಾಗಗಳಲ್ಲಿ ಜಲಪ್ರಳಯ ದಿಂದ ಅಪಾರ ಅರಣ್ಯ ನಾಶವಾಗಿದೆ. ಬೃಹತ್ ಗಾತ್ರದ ಬಂಡೆಗಳು, ಮರದ ದಿಮ್ಮಿಗಳು ಕೊಚ್ಚಿಕೊಂಡು ಬಂದು ಸಂಗ್ರಹಗೊಂಡಿದ್ದು, ಅವುಗಳ ತೆರವು ಸಾಧ್ಯವಾಗಿಲ್ಲ. ಮಣ್ಣು ಸವೆತ ತಡೆಯಲು ಕ್ರಮಗಳನ್ನು ಅನುಸರಿಸಲು ಸಾಧ್ಯವಿದೆ. ಈ ಕುರಿತು ಉನ್ನತ ಅಧಿಕಾರಿಗಳ ಗಮನಕ್ಕೆ ತರುತ್ತೇವೆ. ಮುಂದಿನ ಮಳೆಗಾಲದಲ್ಲಿ ಮಳೆ ಅಗಾಧವಾಗಿ ಸುರಿದರೆ ಮತ್ತಷ್ಟು ಅರಣ್ಯ ನಾಶವಾಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
– ತ್ಯಾಗರಾಜ್, ರೇಂಜ್ ಆಫೀಸರ್, ಅರಣ್ಯ ಇಲಾಖೆಯ ಸುಬ್ರಹ್ಮಣ್ಯ ವಿಭಾಗ
– ಬಾಲಕೃಷ್ಣ ಭೀಮಗುಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.