ತರಕಾರಿ ಗ್ರಾಮದಲ್ಲೂ: ಫಸಲು ಕೊರತೆ

Team Udayavani, Aug 13, 2017, 6:55 AM IST

13-PUT-5.jpg

ತರಕಾರಿ ಬೆಳೆಯುವ ಗ್ರಾಮಗಳ ಪೈಕಿ ಚಾರ್ವಾಕ ಗ್ರಾಮ ಜಿಲ್ಲೆಯಲ್ಲಿ ಅಗ್ರಸ್ಥಾನಿ. ಕೃಷಿಕರೇ ಸಣ್ಣ ತಂಡ ರಚಿಸಿಕೊಂಡು, ತರಕಾರಿ ಮಾರಾಟ ಮಾಡುವ ಮೂಲಕ ಗಮನ ಸೆಳೆದ ಗ್ರಾಮವಿದು. ಆದರೆ ಈ ಬಾರಿ ಇಳುವರಿ ಕುಸಿತದ ಚಿಂತೆಯಲ್ಲಿದ್ದಾರೆ.

ಯಾವುದೇ ಬಗೆಯ ತರಕಾರಿಯಾದರೂ ಈ ಗ್ರಾಮದಲ್ಲಿ ಲಭ್ಯ. ಇಲ್ಲಿನ ಹೆಚ್ಚಿನ ಕುಟುಂಬಗಳು ತರಕಾರಿಯನ್ನೇ ಜೀವನಾಧಾರವಾಗಿ ಅವಲಂಬಿಸಿವೆ. ಕೆಲವರು ಉಪ ಉತ್ಪನ್ನವಾಗಿ, ಇನ್ನು ಕೆಲವರು ತರಕಾರಿಯನ್ನೇ ಕಸುಬಾಗಿ ಮಾಡಿಕೊಂಡವರಿದ್ದಾರೆ. ಜಾಗ ಕಡಿಮೆ ಇದ್ದವರೂ ಬೇರೆಲ್ಲಿಯೋ ಜಾಗವನ್ನು ಗೇಣಿಗೆ ಪಡೆದುಕೊಂಡು ತರಕಾರಿ ಬೆಳೆಸಿದವರಿದ್ದಾರೆ. 

ಪ್ರತಿದಿನ ಒಂದೆರಡು ಪಿಕಪ್‌ನಲ್ಲಿ ಮಂಗಳೂರು ಮಾರುಕಟ್ಟೆಗೆ ತರಕಾರಿ ಸರಬರಾಜು ಮಾಡುತ್ತಾರೆ. ತಂಡವಾಗಿ ರಚಿಸಿಕೊಂಡು, ಅಂದರೆ ಎರಡು ದಿನಕ್ಕೊಂದು ತಂಡ ತೆರಳುತ್ತದೆ. ಸುಮಾರು 10 ಕೃಷಿಕರ ತರಕಾರಿ ಇಲ್ಲಿ ಜಮೆಯಾಗುತ್ತದೆ. ಕೆ.ಜಿ. ಲೆಕ್ಕದಲ್ಲಿ ತರಕಾರಿ ತಂದುಕೊಡುವ ಕೃಷಿಕರ ತರಕಾರಿಯನ್ನು ಉಪೇಕ್ಷಿಸುವುದಿಲ್ಲ. ಮರುದಿನ ಇನ್ನೊಂದು 10 ಜನ ಕೃಷಿಕರ ತರಕಾರಿ ಸಿದ್ಧವಾಗಿರುತ್ತದೆ. ತರಕಾರಿ ಬೆಳೆದ ಕೃಷಿಕರೆಲ್ಲರೂ ಮಾರಾಟಕ್ಕೆ ಹೋಗುವುದಿಲ್ಲ. ಒಂದಿಬ್ಬರು ಮಾತ್ರ ತೆರಳುತ್ತಾರೆ. ಸಂಜೆ ಬಂದು ಹಣವನ್ನು ಕೃಷಿಕರಿಗೆ ಮರಳಿಸುತ್ತಾರೆ. 

2ನೇ ಹಂತದ ಕೃಷಿ
ವರ್ಷಕ್ಕೆ ಎರಡು ಬಾರಿ ಇಳುವರಿ ತೆಗೆಯಲಾಗುತ್ತದೆ. ಮೇ- ಜೂನ್‌ನಲ್ಲಿ ಬೀಜ ಹಾಕಿದರೆ ಸೆಪ್ಟಂಬರ್‌ನಲ್ಲಿ  ಕೊಯ್ಲು ನಡೆಯುತ್ತದೆ. ನವೆಂಬರ್‌- ಡಿಸೆಂಬರ್‌ನಲ್ಲಿ ಮತ್ತೂಮ್ಮೆ ಬೀಜ ಬಿತ್ತಿದರೆ, ಮಾರ್ಚ್‌- ಎಪ್ರಿಲ್‌ ವೇಳೆಗೆ ಮತ್ತೂಂದು ಹಂತದ ಫಸಲು ಸಿದ್ಧ. ವರ್ಷದ ಒಂಬತ್ತು ತಿಂಗಳು ಇಲ್ಲಿನ ಕೃಷಿಕರು ತರಕಾರಿ ಮಾರಾಟದಲ್ಲಿ ತೊಡಗಿಕೊಂಡಿರುತ್ತಾರೆ. ಮೇ, ಜೂನ್‌, ಜುಲೈ ತಿಂಗಳಲ್ಲಿ ತರಕಾರಿ ಮಾರಾಟ ಕಡಿಮೆ. ಸದ್ಯ ಮೊದಲ ಹಂತದ ಕೊಯ್ಲಿಗೆ ಸಿದ್ಧತೆ ನಡೆಯುತ್ತಿದೆ. ತರಕಾರಿ ಪ್ರಮಾಣ ಗಮನಿಸಿದಾಗ ವರ್ಷದಿಂದ ವರ್ಷಕ್ಕೆ ಇಳುವರಿ ಕುಸಿಯುತ್ತಿರುವುದರ ಬಗ್ಗೆ ಸ್ಥಳೀಯ ಕೃಷಿಕರು ಆತಂಕ ವ್ಯಕ್ತಪಡಿಸುತ್ತಾರೆ.

ಫಸಲು ಕಡಿಮೆ
ಎರಡು ವರ್ಷಗಳ ಹಿಂದೆ ದಿನಕ್ಕೆ ಎರಡು ಪಿಕಪ್‌ಗಿಂತ ಹೆಚ್ಚು ತರಕಾರಿ ಮಂಗಳೂರಿಗೆ ಕೊಂಡೊಯ್ಯಲಾಗುತ್ತಿತ್ತು. ಈಗ ತರಕಾರಿ ಕಡಿಮೆಯಾಗುತ್ತಾ ಬಂದಿದ್ದು, ಒಂದು ಪಿಕಪ್‌ ಮಾತ್ರ ಮಂಗಳೂರಿಗೆ ಹೋಗುತ್ತಿದೆ. ಇದರಲ್ಲಿ ಸುಮಾರು 22 ಕ್ವಿಂಟಾಲ್‌ ತರಕಾರಿ ಹಿಡಿಯುತ್ತದೆ. ಆದ್ದರಿಂದ ಸ್ವಂತ ದುಡಿಮೆ ಯೊಂದೇ ಜೀವನಕ್ಕೆ ದಾರಿ ಎಂಬುದನ್ನು ಕಂಡುಕೊಂಡಿದ್ದಾರೆ.

ಘಟ್ಟದ ತರಕಾರಿ ಪೈಪೋಟಿ
ಊರ ಬೆಳೆ ಎಂಬ ಕಾರಣಕ್ಕೆ ದೊಡ್ಡ ಲಾಭವೇನೂ ಕೃಷಿಕರ ಕೈಗೆ ಇನ್ನೂ ಎಟುಕಿಲ್ಲ. ಘಟ್ಟ ಪ್ರದೇಶದಿಂದ ಬರುವ ತರಕಾರಿ ಮುಂದೆ ಸಿಕ್ಕಿದ ದರಕ್ಕೆ ಊರ ತರಕಾರಿಯನ್ನು ಮಾರಾಟ ಮಾಡಬೇಕು. ಇನ್ನೂ ಕೆಲವು ಸಲ ಹೋಲ್‌ ಸೇಲ್‌ ದರಕ್ಕೆ ಮಾರಾಟ ಮಾಡಿದ್ದು ಇದೆ. ಜನರು ದರವನ್ನು ಮಾತ್ರ ನೋಡುತ್ತಾರೆ. ಗುಣಮಟ್ಟ ಕೇಳುವವರಿಲ್ಲ ಎನ್ನುತ್ತಾರೆ ಕೃಷಿಕರು.  ಹವಾಮಾನ ವೈಪರೀತ್ಯಕ್ಕೆ  ಈ ವರ್ಷ ಫಸಲು ಕಡಿಮೆ ಇದೆ. ಧಾರಣೆ ಎಷ್ಟರಲ್ಲಿ ನಿಲ್ಲುತ್ತದೆ ಎಂಬ ಬಗ್ಗೆಯೂ ಆತಂಕವೂ ಇದೆ.

ನೆಚ್ಚಿ ಕೊಂಡಿದ್ದೇನೆ 
ಸುಮಾರು 5 ಎಕರೆ ಜಾಗದಲ್ಲಿ ತರಕಾರಿ ಬೆಳೆಯುತ್ತಿದ್ದೇನೆ. ಹಲವು ಬಗೆಯ ತರಕಾರಿಗಳಿವೆ. ನೀರಿಗಾಗಿ ಬಳಿಯಲ್ಲೇ ಹರಿಯುವ ಕುಮಾರಧಾರಾ ನದಿಯಿದೆ. ವರ್ಷಪೂರ್ತಿ ಶ್ರಮ ಪಟ್ಟು  ದುಡಿದರೆ, ಜೀವನ ನಿರ್ವಹಣೆಗೆ ಸಮಸ್ಯೆಯಿಲ್ಲ. ಇದರ ಜತೆಗೆ ಅಡಿಕೆಯೂ ಇರುವುದರಿಂದ, ಅಲ್ಪಾವಧಿ ಬೆಳೆಯಾಗಿ ತರಕಾರಿಯನ್ನು ನೆಚ್ಚಿಕೊಂಡಿದ್ದೇನೆ. ಅಡಿಕೆ ವರ್ಷಕ್ಕೆ ಒಂದು ಬಾರಿ ಮಾತ್ರ ಆದಾಯ ನೀಡುತ್ತದೆ. ಆದರೆ ತರಕಾರಿ ದಿನನಿತ್ಯದ ಖರ್ಚಿಗೂ ಹಣ ಒದಗಿಸುತ್ತದೆ.
ಗಂಗಾಧರ ಜತ್ತೋಡಿ, ಕೃಷಿಕ ಚಾರ್ವಾಕ

ಗಣೇಶ್‌ ಎನ್‌. ಕಲ್ಲರ್ಪೆ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

Women’s ODI: ಹರ್ಲೀನ್ ಶತಕ; ವಿಂಡೀಸ್‌ ವಿರುದ್ಧ ಭಾರತಕ್ಕೆ 2-0 ಸರಣಿ ಜಯ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

Police-logo

CEN Police Station: ದಕ್ಷಿಣ ಕನ್ನಡ ಜಿಲ್ಲಾ ಸೆನ್‌ ಪೊಲೀಸ್‌ ಠಾಣೆ ಬಂಟ್ವಾಳಕ್ಕೆ

aane

Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

Udupi: ಗೀತಾರ್ಥ ಚಿಂತನೆ 135: ಮಕ್ಕಳಿಗೆ ಬಹುಮಾನ ಬಂದರೆ ಯಾವುದಕ್ಕೆ ಖುಷಿ?

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

ಕ್ರಿಕೆಟಿಗ ಅಕ್ಷರ್‌ ಪಟೇಲ್‌ಗೆ ಗಂಡು ಮಗು, ಹೆಸರು ಹಕ್ಷ್

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Swiss ಸ್ನೋಬೋರ್ಡ್‌ ಸ್ಪರ್ಧಿ ಹಿಮಕುಸಿತದಲ್ಲಿ ದುರ್ಮರಣ

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

Pro Kabaddi: ಬೆಂಗಳೂರು ಬುಲ್ಸ್‌ಗೆ 19ನೋ ಸೋಲು

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

World Rapid Chess: ಕಡೆಗೂ ಅರ್ಜುನ್‌ ಎರಿಗೈಸಿಗೆ ಅಮೆರಿಕ ವೀಸಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.