ಇಂದು ಬೆದ್ರಬೆಟ್ಟುವಿನಲ್ಲಿ ಚರ್ಚ್ ಉದ್ಘಾಟನೆ
Team Udayavani, Apr 14, 2018, 12:46 PM IST
ಬೆಳ್ತಂಗಡಿ: ಬೆದ್ರಬೆಟ್ಟು ಬಂಗಾಡಿಯಲ್ಲಿ ನವೀಕರಣಗೊಂಡ ಚರ್ಚ್‌ನ ಪವಿತ್ರೀಕರಣ ಹಾಗೂ ಉದ್ಘಾಟನ ಕಾರ್ಯಕ್ರಮ ಎ. 14ರಂದು ಸಂಜೆ ನಡೆಯಲಿದೆ. ದೇವಾಲಯದ ಪವಿತ್ರೀಕರಣ ವಿಧಿ, ದೇವಾಲಯ ಪ್ರತಿಷ್ಠಾ ವಿಧಿಗಳು ಹಾಗೂ ವಾರ್ಷಿಕ ಹಬ್ಬಗಳು ಬೆಳ್ತಂಗಡಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿ ನೇತೃತ್ವದಲ್ಲಿ ನೆರವೇರಲಿದೆ.
ವಿಕಾರ್ ಜನರಲ್ ಫಾ| ಜೋಸ್ ವಲಿಯಪರಂಬಿಲ್, ಸಿದ್ಧಾಪುರ ಫೋರೆನ್ ವಿಕಾರ್ ಫಾ| ಮಾಣಿ ವೆಳುತ್ತೆಡತ್ತ್ ಪರಂಬಿಲ್ ಭಾಗವಹಿಸಲಿದ್ದಾರೆ. ರಾತ್ರಿ ಸಾರ್ವಜನಿಕ ಸಮ್ಮೇಳನದಲ್ಲಿ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನವಿದೆ.
ಎ. 15ರಂದು ಸಂಜೆ ವಿಧಾನಪೂರ್ವಕ ರಾಸ, ಬಲಿಪೂಜೆ, ಪ್ರವಚನ, ಹಬ್ಬದ ಮೆರವಣಿಗೆ ನಡೆಯಲಿದ್ದು, ತಲಶ್ಯೇರಿ
ಧರ್ಮಪ್ರಾಂತದ ಫಾ| ಜೋಸೆಫ್ ಮೇಙಕುನ್ನೇಲ್, ಕಂಕನಾಡಿಯ ಫಾ| ಜೋಸೆಫ್ ಕೆಳಂಪರಂಬಿಲ್, ಉಜಿರೆಯ ಫಾ| ಜೋಸೆಫ್ ಮುಕ್ಕಾಟ್ ಭಾಗವಹಿಸಲಿದ್ದಾರೆ.
ಎ. 16ರಂದು ವಿಧಾನಪೂರ್ವಕ ಬಲಿಪೂಜೆ ನಡೆಯಲಿದ್ದು, ಬೆಳ್ತಂಗಡಿ ಬಿಷಪ್ ಹೌಸ್‌ನ ಫಾ| ಅಬ್ರಾಹಂ ಪಟ್ಟೇರಿಲ್, ಫೋರೆನ್ ಏಕಾರ್‌ನ ಫಾ| ಜೋಸೆಫ್ ಕುರಿಯಾಳಶ್ಯೇರಿ, ಗುತ್ತಿಗಾರಿನ ಫಾ| ತೋಮಸ್ ಪನಚಿಕಲ್, ಜ್ಞಾನನಿಲಯದ ಫಾ| ಜೋಸೆಫ್ ಮಟ್ಟಂ ಭಾಗವಹಿಸಲಿದ್ದಾರೆ. ಸಿಮಿತೇರಿ ಸಂದರ್ಶನದಲ್ಲಿ ವಿಕಾರ್ ಜನರಲ್ ಫಾ| ಜೋಸ್ ವಲಿಯ ಪರಂಬಿಲ್ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.