ಇಂದು ಎರಡನೇ ಹೆಚ್ಚುವರಿ ಸಿವಿಲ್ ಜಡ್ಜ್, ಜೆಎಂಎಫ್‌ಸಿ ಕೋರ್ಟ್ ಆರಂಭ
Team Udayavani, May 27, 2019, 12:13 PM IST
ನಗರ: ಪುತ್ತೂರಿಗೆ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಮಂಜೂರುಗೊಂಡಿದ್ದು, ಮೇ 27ರಂದು ಉದ್ಘಾಟನೆಗೊಳ್ಳಲಿದೆ. ಕಾರ್ಯದೊತ್ತಡದ ಹಿನ್ನೆಲೆಯಲ್ಲಿ ಎರಡನೇ ಸಿವಿಲ್ ಜಡ್ಜ್ ಕೋರ್ಟ್ ಬೇಕೆಂಬ ಹಲವು ಸಮಯದ ಬೇಡಿಕೆ ಈ ಮೂಲಕ ಈಡೇರಿದೆ.
6 ಕೋರ್ಟ್
ಪುತ್ತೂರಿನಲ್ಲಿ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿವೆ. ಈಗ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ವಿಭಾಗ ಮಂಜೂರುಗೊಂಡಿದೆ.
ಎಲ್ಲಿ?
ಮಿನಿ ವಿಧಾನ ಸೌಧದ ಬಳಿ ಇರುವ ಹಿಂದಿನ ಜೆಎಂಎಫ್‌ಸಿ ನ್ಯಾಯಾಲಯ ಮತ್ತು ಪ್ರಸ್ತುತ ಮಧ್ಯಸ್ಥಿಕಾ ಕೇಂದ್ರವಿರುವ ಕಟ್ಟಡದಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಕಾರ್ಯ ಕಲಾಪಗಳನ್ನು ನಡೆಸಲಿದೆ.
ಇಂದು ಉದ್ಘಾಟನೆ
ನೂತನ ನ್ಯಾಯಾಲಯ ವ್ಯವಸ್ಥೆಯ ಉದ್ಘಾಟನ ಕಾರ್ಯಕ್ರಮ ಮೇ 27ರಂದು ಪೂರ್ವಾಹ್ನ 10.30ಕ್ಕೆ ನಡೆಯಲಿದೆ. ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಉದ್ಘಾಟನೆ ನೆರವೇರಿಸಲಿದ್ದಾರೆ. ನೂತನ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಪ್ರಥಮ ನ್ಯಾಯಾಧೀಶರಾಗಿ ಕೋಲಾರದ ವೆಂಕಟೇಶ್ ನೇಮಕಗೊಂಡು ಕರ್ತವ್ಯ ನಿರ್ವಹಿಸಲಿದ್ದಾರೆ.
ಪ್ರಧಾನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ 2018 -19ರ ವಿಲೇವಾರಿಗೆ ಬಾಕಿ ಇರುವ ಸಿವಿಲ್ ಕೇಸುಗಳು ಮತ್ತು 2018ನೇ ಸಾಲಿನ ಸಿಸಿ ಪ್ರಕರಣಗಳ ವಿಚಾರಣೆ ನೂತನ ನ್ಯಾಯಾಲಯದಲ್ಲಿ ನಡೆಯಲಿದೆ.
ಕಲಾಪವೂ ಆರಂಭ
ಪುತ್ತೂರಿಗೆ ಮಂಜೂರುಗೊಂಡಿರುವ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಉದ್ಘಾಟನ ಕಾರ್ಯಕ್ರಮ ನಡೆದು ನಿಯಮದಂತೆ 11 ಗಂಟೆಗೆ ನ್ಯಾಯಾಲಯದ ಕಾರ್ಯಕಲಾಪಗಳು ಆರಂಭಗೊಳ್ಳಲಿವೆ. 12 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ.
ಭಾಸ್ಕರ ಕೋಡಿಂಬಾಳ, ನಿಕಟಪೂರ್ವ ಅಧ್ಯಕ್ಷರು, ಪುತ್ತೂರು ವಕೀಲರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.