![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 16, 2017, 11:37 AM IST
ಕೊಡಿಯಾಲ್‌ಬೈಲ್ : ವಿಜ್ಞಾನ ವಿಭಾಗದಲ್ಲಿ ನ್ಯಾನೋ ತಂತ್ರಜ್ಞಾನದ ಕುರಿತು ಅಧ್ಯಯನ ನಡೆಯುತ್ತಿದೆ. ಎಂಜಿನಿಯರಿಂಗ್ ವಿದ್ಯಾಭ್ಯಾಸದಲ್ಲಿಯೂ ಇದನ್ನು ಕಲಿಸುವ ಬಗ್ಗೆ ಆಸಕ್ತಿ ತಾಳಬೇಕು ಎಂದು ಬೆಂಗಳೂರಿನ ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್‌ನ ವಿಜ್ಞಾನಿ ಪ್ರೊ| ಶಿವಪ್ರಸಾದ್ ಹೇಳಿದರು.
ಅಲೋಶಿಯಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದಿಂದ ಮಂಗಳೂರು ವಿವಿ ಭೌತಶಾಸ್ತ್ರ ಉಪನ್ಯಾಸಕರ ಸಂಘದ ಸಹಯೋಗದಲ್ಲಿ ಜರಗಿದ ‘ನ್ಯಾನೋ, ಕ್ರಯೋಜನಿಕ್ಸ್ ಮತ್ತು ಬಾಹ್ಯಾಕಾಶ ಭೌತಶಾಸ್ತ್ರ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ‘ಎನ್ ಸಿಎಸ್‌ಪಿ- 2017’ನ್ನು ಅ ಉದ್ಘಾಟಿಸಿದರು. ಪ್ರಸ್ತುತ ನ್ಯಾನೋ ತಂತ್ರಜ್ಞಾನದಿಂದ ಅನೇಕ ಪ್ರಯೋಜನಗಳಿವೆ. ಭವಿಷ್ಯದಲ್ಲಿ ಈ ನಿಟ್ಟಿನಲ್ಲಿ ಮೇಲ್ಮಟ್ಟದ ಸಂಶೋಧನೆಗಳೂ ನಡೆಯಲಿವೆ. ಭವಿಷ್ಯದ ಈ ಕುರಿತ ಸಂಶೋಧನೆಗಳು ನಡೆಯಲಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ನ್ಯಾನೋ ತಂತ್ರಜ್ಞಾನ ಮುಂದಿನ ದಿನಗಳಲ್ಲಿ ಹೆಚ್ಚು ಉಪಯುಕ್ತವಾಗಲಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಈಗಿಂದಲೇ ಇದರ ಬಗ್ಗೆ ಉತ್ಸುಕರಾಗಬೇಕು ಎಂದರು. ಬೆಂಗಳೂರಿನ ಐಐಎಸ್‌ಸಿ ವಿಜ್ಞಾನಿ ಡಾ| ದುರ್ಗೇಶ್ ನಾಡಿಗ್, ಇಸ್ರೋ ವಿಜ್ಞಾನಿ ಬಿ. ಆರ್. ಗುರುಪ್ರಸಾದ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ರೆಕ್ಟರ್ ಡಯೊನೀಶಿಯಸ್ ವಾಸ್, ರಿಜಿಸ್ಟ್ರಾರ್ ಡಾ| ಎ. ಎಂ. ನರಹರಿ, ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಲಾರೆನ್ಸ್ ಪಿಂಟೋ, ಸಂಚಾಲಕ ಡಾ| ಈಶ್ವರ್ ಭಟ್ ಎಸ್., ಡಾ| ರೋನಾಲ್ಡ್ ನಝರತ್, ಫಿಸಿಕಲ್ ಸೈನ್ಸ್ ವಿಭಾಗದ ಡೀನ್ ಡಾ| ಪ್ರಕಾಶ್ ಕಾಮತ್ ಉಪಸ್ಥಿತರಿದ್ದರು. ಸಂಘಟನ ಕಾರ್ಯದರ್ಶಿ ನೀಲಕಂಠನ್ ವಿ. ಕೆ. ವಂದಿಸಿದರು.
You seem to have an Ad Blocker on.
To continue reading, please turn it off or whitelist Udayavani.