ವೈಜ್ಞಾನಿಕ ಜೇನುಗಾರಿಕೆ ತರಬೇತಿ ಶಿಬಿರ ಉದ್ಘಾಟನೆ
Team Udayavani, Nov 2, 2017, 5:01 PM IST
ಪುತ್ತೂರು : ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ಸಂದರ್ಭದಲ್ಲಿ ದೊರೆಯುವ ಮಾನಸಿಕ, ಆರೋಗ್ಯ ಸುಖ ದೊರೆಯಲು ಸಾಧ್ಯವಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ ಅವರು ಹೇಳಿದರು.
ತೋಟಗಾರಿಕಾ ಇಲಾಖೆ ಹಾಗೂ ದ.ಕ ಜೇನು ವ್ಯವಸಾಯಗಾರರ ಸಹಕಾರ ಸಂಘದ ಆಶ್ರಯದಲ್ಲಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಸಭಾ ಭವನದಲ್ಲಿ ಬುಧವಾರ ನಡೆದ ವೈಜ್ಞಾನಿಕ ಜೇನು ಕೃಷಿ ಮಾಹಿತಿ ಶಿಬಿರ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆಧುನಿಕ ಜಗತ್ತಿನಲ್ಲಿ ಕೃಷಿ ಭೂಮಿಯನ್ನು ಮಾರುವುದು, ಲೀಸ್‌ಗೆ ಕೊಡುವುದೇ ಅಧಿಕ. ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದ ಅವರು ಜೇನು ಕೃಷಿ ಇತ್ತೀಚಿನ ದಿನಗಳಲ್ಲಿ ಪ್ರಸಿದ್ಧಿ ಪಡೆದಿದೆ. ಜೇನು ಪ್ರಾಕೃತಿಕ ಸಂಪತ್ತು. ಕೃಷಿಗೆ ಉತ್ತಮ ತರಬೇತಿಯ ಅಗತ್ಯವಿದೆ ಎಂದರು.
ಜಾಗೃತಿ ಮೂಡಿಸಬೇಕು
ಬೆಂಕಿ ಹಾಕಿ ನೊಣಗಳನ್ನು ಓಡಿಸಿ ಕ್ರೌರ್ಯದಿಂದ ಜೇನು ತೆಗೆಯುವುದು ಕಂಡುಬರುತ್ತದೆ. ಅದು ಸಲ್ಲದು. ಈ ಬಗ್ಗೆ ಜಾಗೃತಿಯ ಜತೆಗೆ ಕೃಷಿ ಬಗ್ಗೆಯೂ ಆಸಕ್ತಿ ಮೂಡಿಸಬೇಕು. ಶಿಬಿರದಲ್ಲಿ ತರಬೇತಿ ಪಡೆದವರು ಇತರರಿಗೆ ಇದರ ಮಹತ್ವ ತಿಳಿಸಿ, ಗ್ರಾಮದಲ್ಲಿ ಕನಿಷ್ಠ 10 ಮಂದಿ ಕೃಷಿಯಲ್ಲಿ
ತೊಡಗಿಸಿಕೊಳ್ಳುವಂತಾಗಬೇಕು ಎಂದರು.
ಸಿಹಿ ಕ್ರಾಂತಿ ನಡೆಯಲಿ
ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಮಾತನಾಡಿ, ಸರಕಾರದ ಯೋಜನೆಗಳಾದ ಮೇಕ್ ಇನ್ ಇಂಡಿಯಾ, ಹಸಿರು ಕ್ರಾಂತಿ ಮಾದರಿಯಲ್ಲಿ ಜೇನು ಕೃಷಿಯ ಮೂಲಕ ಸಿಹಿ ಕ್ರಾಂತಿಯನ್ನು ಪ್ರಾರಂಭಿಸಬೇಕು ಎಂದರು.ರೈತರು ಬೆಳೆದ ಜೇನಿಗೆ ಸಹಕಾರ ಸಂಘದ ಮೂಲಕ ಉತ್ತಮ ಮಾರುಕಟ್ಟೆ ನೀಡುತ್ತಿದ್ದು, ರೈತರು ಕೃಷಿಯಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದರು.
ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಗೌರಿ ಬನ್ನೂರು ಮಾತನಾಡಿ, ಜೇನು ಪ್ರಕೃತಿ ದತ್ತವಾದ ಕೊಡುಗೆ. ಇದು ಆಯುರ್ವೇದ ದಿವ್ಯ ಔಷಧಿಯಾಗಿದೆ. ಉತ್ತಮ ತರಬೇತಿ ಪಡೆದುಕೊಂಡು ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಅಧಿಕ ಲಾಭ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು. ದ.ಕ. ಜೇನು ವ್ಯವಸಾಯಗಾರರ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಕಣಜಾಲು ಉಪಸ್ಥಿತರಿದ್ದರು.
ಪವಿತ್ರಾ ಪ್ರಾರ್ಥಿಸಿದರು. ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ದಿನೇಶ್ ಸ್ವಾಗತಿಸಿದರು. ಇಲಾಖೆಯ ಹೊಳೆ ಬಸಪ್ಪ, ಜೇನು ವ್ಯವಸಾಯಗಾರರ ಸಹಕಾರ ಸಂಘದ ನಿರ್ದೇಶಕರಾದ ಇಂದಿರಾ, ಶಿವಾನಂದ, ಪಾಂಡುರಂಗ ಹೆಗ್ಡೆ, ಕೃಷಿಕ ವಿಜಯ ಕುಮಾರ್ ರೈ ಉಪಸ್ಥಿತರಿದ್ದರು. ತೋಟಗಾರಿಕಾ ಇಲಾಖೆಯ ವೀರಪ್ಪ ಗೌಡ ವಂದಿಸಿ, ರಾಧಾಕೃಷ್ಣ ಕೋಡಿ ನಿರೂಪಿಸಿದರು.
ಕೃಷಿ ಪರಂಪರೆ ಉಳಿಯಲಿ
ಶಿಬಿರ ಉದ್ಘಾಟಿಸಿದ ಜೇನು ವ್ಯವಸಾಯಗಾರರ ಸಹಕಾರ ಸಂಘದ ‘ಮಧು ಪ್ರಪಂಚ’ ಮಾಸಿಕ ಪತ್ರಿಕೆಯ ಸಂಪಾದಕ ನಾರಾಯಣ ರೈ ಕುಕ್ಕುವಳ್ಳಿ ಮಾತನಾಡಿ, ಮಕ್ಕಳಿಗೆ ಅಕ್ಷರ ಪ್ರೀತಿಯ ಜತೆಗೆ, ಮಣ್ಣಿನ ಪ್ರೀತಿಯನ್ನು ನೀಡುವ ಕೃಷಿ ಪರಂಪರೆಯ ಉಳಿವಿಗೆ ಕಾರಣವಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.