‘ಪಳಕಳ ಸೀತಾರಾಮ ಭಟ್ಟ ರಸ್ತೆ’ ಫಲಕ ಕೆಡವಿದ ಪುಂಡರು
Team Udayavani, Sep 1, 2021, 11:45 PM IST
ಮೂಡುಬಿದಿರೆ: ಶಿಕ್ಷಕರ ದಿನಾಚರಣೆ ಹತ್ತಿರವಾಗುತ್ತಿದ್ದಂತೆ ಒಂದಕ್ಷರ ಕಲಿತ, ಕಲಿಸಿದವರಿಗೆ, ಸಾಹಿತಿಗಳಿಗೆ, ಸಾಹಿತ್ಯಾಭಿಮಾನಿ ಸಜ್ಜನ ನಾಗರಿಕರಿಗೆ ಆಘಾತಕಾರಿಯಾದ ಘಟನೆಯೊಂದು ಮೂಡುಬಿದಿರೆ ಪಕ್ಕದ ಪುತ್ತಿಗೆ ಗ್ರಾಮ ಪಂಚಾಯತ್‌ನ ವ್ಯಾಪ್ತಿಯಲ್ಲಿ ನಡೆದಿದೆ.
ಪುತ್ತಿಗೆ ಗ್ರಾಮದಲ್ಲಿ ಪಳಕಳ ಸೀತಾರಾಮ ಭಟ್ಟರ ಮನೆಯತ್ತ ಸಾಗುವ ರಸ್ತೆಗೆ ಇರಿಸಲಾಗಿದ್ದ `ಪಳಕಳ ಸೀತಾರಾಮ ಭಟ್ಟ ರಸ್ತೆ ‘ ನಾಮಫಲಕವನ್ನು ಬುಧವಾರ ಯಾರೋ ಕೆಡವಿ ಹಾಕಿದ್ದಾರೆ!
ಶಿಕ್ಷಕರಾಗಿ ಮಕ್ಕಳ ಮನಗೆದ್ದ ಪಳಕಳ ಸೀತಾರಾಮ ಭಟ್ಟರ ಪದ್ಯಗಳು 1956ರ ಕಾಲಕ್ಕೇ ಕನ್ನಡ ಪಠ್ಯಪುಸ್ತಕಗಳಲ್ಲಿ ಪ್ರಕಟವಾಗಿದ್ದು ಇಂದಿಗೂ ಮಕ್ಕಳ ಸಾಹಿತ್ಯ ರಂಗದಲ್ಲಿ ಅವರೊಂದು ಲೆಜೆಂಡ್ ಆಗಿ ಉಳಿದವರು.
ರಾಷ್ಟ್ರಮಟ್ಟದ ಬಾಲಸಾಹಿತ್ಯ ಪುರಸ್ಕಾರ, ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಯುಗಪುರುಷ ದಿಂದ `ಬಾಲ ಮನೋ ವಿಜ್ಞಾನಿ ‘ ಬಿರುದು ಸಹಿತ ಸಮ್ಮಾನ, ಕೋ. ಅ. ಉಡುಪ ಸಂಸ್ಮರಣ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವಾರು ಪ್ರಶಸ್ತಿ, ಗೌರವಗಳಿಗೆ ಪಾತ್ರರಾದ , ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸಿರುವ, ಸರಳ ಸಜ್ಜನ ಮಗು ಮನಸ್ಸಿನ ಪಳಕಳರ ನೂರಕ್ಕೂ ಅಧಿಕ ಪುಸ್ತಕಗಳು ಕಿನ್ನಿಗೋಳಿಯ ಯುಗಪುರುಷದಿಂದಲೇ ಪ್ರಕಟವಾಗಿದ್ದು ಇಷ್ಟೇ ಸಂಖ್ಯೆಯ ಇತರ ಅಂದರೆ, ಮಕ್ಕಳ ಕತೆ, ಕವನ, ನಾಟಕ, ರೂಪಕ, ಪ್ರಹಸನ, ಜೀವನಚರಿತ್ರೆ, ಪ್ರಬಂಧ, ಪತ್ರಲೇಖನ ಅಲ್ಲದೆ, ಕಿರು ಕಾದಂಬರಿ ಮತ್ತಿತರ ಸಾಹಿತ್ಯ ಕೃತಿಗಳು ಅನ್ಯ ಪ್ರಕಾಶಕರಿಂದ ಪ್ರಕಟವಾಗಿವೆ. ಪಳಕಳರ ಕುರಿತು ಡಾ| ಕಾರ್ತ್ಯಾಯಿನಿ ಕುಂಜಿಬೆಟ್ಟು ಡಾಕ್ಟರೇಟ್ ಗಳಿಸಿದ್ದಾರೆ.
ಊರ ಶಾಲೆಗೆ ಬೆಂಕಿ ಬಿದ್ದಾಗ ಊರವರನ್ನೆಲ್ಲ ಒಗ್ಗೂಡಿಸಿ ಮತ್ತೆ ಶಾಲೆಗೆ ಕಾಯಕಲ್ಪ ನೀಡಿದವರು. ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾದವರು.
ಇಂಥ ರಾಷ್ಟ್ರಮಟ್ಟದ ಮಹಾನುಭಾವರ ನಾಮಫಲಕ ಒಡೆದು ಹಾಕಿರುವ ಘಟನೆ ನಾಡಿನ ಸಜ್ಜನರೆಲ್ಲ ತಲೆತಗ್ಗಿಸುವಂತೆ ಮಾಡಿದೆ.
ಪುತ್ತಿಗೆ ಪಂಚಾಯತ್‌ನ ಈ ಹಿಂದಿನ ಅಭಿವೃದ್ಧಿ ಅಧಿಕಾರಿಯವರ ಆಡಳಿತಾವಧಿಯಲ್ಲಿ ಇರಿಸಲಾಗಿದ್ದ ಕ್ರಿಯಾಯೋಜನೆಯನ್ವಯ ಎಂಟು ತಿಂಗಳ ಹಿಂದೆ ಪಂ. ಮೂರನೇ ವಾರ್ಡ್ (ನೆಲ್ಲಿಗುಡ್ಡೆ-ಕಾಯರ್‌ಪುಂಡು-ಎನಿಕ್ರಿಪಲ್ಲ -ಪಳಕಳ)ನಲ್ಲಿ ಮುಖ್ಯ ರಸ್ತೆಯ ತೀರಾ ಪಕ್ಕದಲ್ಲೇ ಸ್ಥಾಪಿಸಲಾಗಿತ್ತು. ಈ ಸ್ಥಳವು ರಾಜ್ಯಹೆದ್ದಾರಿಯ ಅಂಚಿನಲ್ಲೇ ಇರುವುದು ಹೌದೆಂದು ಈಗಿನ ಪಿಡಿಓ ತಿಳಿಸಿದ್ದು ಗುರುವಾರ ಮುಂದಿನ ಕ್ರಮ ಜರಗಿಸುವುದಾಗಿ ತಿಳಿಸಿದ್ದಾರೆ. ಪಂಚಾಯತ್ ಅಧ್ಯಕ್ಷ ಪ್ರವೀಣ ಶೆಟ್ಟಿಯವರೂ ಈ ಕೃತ್ಯದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Flight; ಮಂಗಳೂರು – ಸಿಂಗಾಪುರ ನೇರ ವಿಮಾನ ಕೆಲ ಕಾಲ ಮುಂದಕ್ಕೆ?
Hassan-Mangaluru ಹಳಿ ದ್ವಿಗುಣ: ಅಂತಿಮ ಸ್ಥಳ ಸರ್ವೇಗೆ ಟೆಂಡರ್
ಕ್ಯುಆರ್ ಕೋಡ್ ಬದಲಿಸಿ ಬಂಕ್‌ಗೆ ಲಕ್ಷಾಂತರ ರೂ. ವಂಚನೆ
Tannirbhavi: ಜ. 11, 12ರ ಬೀಚ್ ಉತ್ಸವ, ಸ್ವಚ್ಛತೆ ಸುರಕ್ಷತೆಗೆ ಗರಿಷ್ಠ ಆದ್ಯತೆ: ಡಿಸಿ
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.