ಉಳ್ಳಾಲ: ನೇತ್ರಾವತಿ ಸೇತುವೆಯಡಿ ಮೃತದೇಹ ಪತ್ತೆ; ವಾಹನ ಸಂಚಾರಕ್ಕೆ ತೊಡಕು
Team Udayavani, Apr 19, 2022, 11:34 AM IST
ಉಳ್ಳಾಲ: ಅಪರಿಚಿತ ಮೃತದೇಹವೊಂದು ನೇತ್ರಾವತಿ ನದಿ ತಟದಲ್ಲಿ ಕೊಳೆತ ಸ್ಥಿತಿಯಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಮೃತದೇಹ ನೋಡಲು ವಾಹನ ಸವಾರರು ಸೇತುವೆ ಮೇಲೆ ಜಮಾಯಿಸಿದ ಹಿನ್ನೆಲೆ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದೆ.
ಸುಮಾರು 30-40 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ನೇತ್ರಾವತಿ ಸೇತುವೆ ಕೆಳಗಿನ ಭಾಗದಲ್ಲಿ ಪತ್ತೆಯಾಗಿದೆ. ವಾಹನ ಸವಾರರೊಬ್ಬರು ಮೃತದೇಹ ಗಮನಿಸಿ, ಬಳಿಕ ಕಂಕನಾಡಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ.
ಬೆಳಗ್ಗಿನ ಸಮಯವಾಗಿದ್ದುದರಿಂದ ಸೇತುವೆಯಲ್ಲಿ ವಾಹನಗಳು ಹೆಚ್ಚಿದ್ದು, ಮೃತದೇಹವನ್ನು ನೋಡಲು ಕೆಲ ವಾಹನಸವಾರರು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿದ ಪರಿಣಾಮವಾಗಿ ವಾಹನಗಳಿಗೆ ರಸ್ತೆ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಸ್ಥಳಕ್ಕೆ ಅಗ್ನಿ ಶಾಮಲ ದಳ ಭೇಟಿ ನೀಡಿ ಮೃತದೇಹ ನೀರಿನಿಂದ ಮೇಲಕ್ಕೆತ್ತಿದೆ. ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ ವಾಹನ ಸವಾರರನ್ನು ಚದುರಿಸಿ ರಾ.ಹೆ ಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.