ಪ್ರವೇಶಾತಿ ಏರಿಕೆ; ಮೂಲಸೌಕರ್ಯ ಕೊರತೆ
Team Udayavani, Sep 20, 2021, 3:30 AM IST
ಮೂಡುಬಿದಿರೆ: ಕೆಸರ್‌ಗದ್ದೆಯ ಸರಕಾರಿ ಮಾದರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಬೆಳುವಾಯಿ ಮೈನ್ (ಶಾಸಕರ ಶಾಲೆ) ಇಲ್ಲಿ ಕಳೆದ ಬಾರಿ 305 ಮಂದಿ ವಿದ್ಯಾರ್ಥಿಗಳಿದ್ದರೆ ಈ ಬಾರಿ ಇದುವರೆಗೆ 385 ಮಕ್ಕಳು ಪ್ರವೇಶ ಪಡೆದಿದ್ದಾರೆ.
2013ರಲ್ಲಿ ಶಾಲಾ ಶತಮಾನೋತ್ಸವ ನಡೆದ ಬಳಿಕ ಮಕ್ಕಳ ಸಂಖ್ಯೆಯಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತ ಬಂದಿದೆ. ಇದಕ್ಕೆ ಇಲಾಖೆಯೊಂದಿಗೆ ಕೈ ಜೋಡಿಸಿದ ದಾನಿಗಳೂ ಕಾರಣ. ಈಗ ಏರಿಕೆಯಾಗಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ತಕ್ಕ ಮೂಲ ಸೌಕರ್ಯಗಳಿಗೂ ಇಲಾಖೆ ಮನಸ್ಸು ಮಾಡುತ್ತಿದೆ.
1ರಿಂದ 8ನೇ ವರೆಗೆ ಕನ್ನಡ ಮಾಧ್ಯಮ, ಎಲ್‌ಕೆಜಿ ಯುಕೆಜಿ, 1ರಿಂದ 3ನೇ ತರಗತಿಯವರೆಗೆ ಆಂಗ್ಲ ಮಾಧ್ಯಮ ತರಗತಿಗಳು ಇಲ್ಲಿವೆ. 10 ಮಂದಿ ಶಿಕ್ಷಕರಿದ್ದಾರೆ. 6 ಮಂದಿ ಡಿಎಡ್ ಆದವರು (ಪಿಇಟಿ ಹಿತ), 4 ಮಂದಿ ಬಿಎಡ್ ಆದವರು (ಇವರಲ್ಲಿ ಸ್ನಾತಕೋತ್ತರ ಪದವೀಧರರೂ ಇದ್ದಾರೆ) ಕನಿಷ್ಠ ಮೂವರು ಶಿಕ್ಷಕರ ಕೊರತೆ ಇದೆ. ಈ ಕೊರತೆಯನ್ನು ನೀಗುವ ಬಗ್ಗೆ ಇಲಾಖೆಗೆ ಮನವಿಗೆ ಧನಾತ್ಮಕ ಸ್ಪಂದನೆ ಕಂಡುಬಂದಿರುವುದಾಗಿ ತಿಳಿದುಬಂದಿದೆ.
ರಸ್ತೆ ವಿಸ್ತರಣೆಗೊಂಡಾಗ ಸಮಸ್ಯೆ :
ರಾಷ್ಟ್ರೀಯ ಹೆದ್ದಾರಿ 169 ಶಾಲೆಯನ್ನು ಸವರಿಕೊಂಡೇ ಹೋಗುವುದಾಗಿ ಗುರುತಿಸಲಾಗಿರುವ ಕಾರಣ, ಇಂದಲ್ಲ ನಾಳೆ ಕೆಲವು ಕೊಠಡಿಗಳು, ಶೌಚಾಲಯ ತೆರವಾಗುವುದರಿಂದ ಬದಲಿ ವ್ಯವಸ್ಥೆ ಮಾಡಬೇಕಾಗುತ್ತದೆ. ಎರಡು ವಾಲಿಬಾಲ್ ಕೋರ್ಟ್ ಹಾಕಲು ಅವಕಾಶವಿದ್ದು, ಶಾಲೆಯ ಹಿಂಭಾಗದ ಹೈಸ್ಕೂಲಿನ ಮೈದಾನ ಆಟೋಟಗಳಿಗೆ ಬಳಸಲು ಅನುಮತಿ ಇದೆ.
ದಾನಿಗಳ ಸಹಕಾರದಿಂದ ಇದುವರೆಗೆ ಉತ್ತಮ ಸೌಕರ್ಯಗಳನ್ನು ಕೊಡಿಸಲು ಸಾಧ್ಯವಾಗಿದೆ. ಸರಕಾರ ಇನ್ನಷ್ಟು ಸೌಕರ್ಯಗಳನ್ನು ಒದಗಿಸಬೇಕಾಗಿದೆ. ವಿದ್ಯಾಭಿಮಾನಿಗಳ ಸಹಕಾರವನ್ನೂ ಪಡೆಯಲು ಪ್ರಯತ್ನಿಸುತ್ತಿದ್ದೇವೆ. –ಭಾಸ್ಕರ ಆಚಾರ್ಯ, ಅಧ್ಯಕ್ಷರು, ಎಸ್‌ಡಿಎಂಸಿ
-ಧನಂಜಯ ಮೂಡುಬಿದಿರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.