ಸಾಂಪ್ರದಾಯಿಕ ಮಣ್ಣಿನ ಮಡಕೆಗೆ ಹೆಚ್ಚಿದ ಬೇಡಿಕೆ


Team Udayavani, Apr 26, 2019, 5:50 AM IST

32

ಸವಣೂರು: ಈ ಬಾರಿಯ ಬೇಸಗೆಯಲ್ಲಿ ಬಿರು ಬಿಸಿಲು ಹೆಚ್ಚಿ, ಅರೆಗಳಿಗೆ ನಡೆಯುವಷ್ಟರಲ್ಲೇ ಮೈಯೆಲ್ಲಾ ಬೆವರುಮಯವಾಗುತ್ತಿದೆ. ಈ ನಡುವೆ ಜನರನ್ನು ದಾಹ ಕಾಡುತ್ತಿದೆ. ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಈಗ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಸಾಂಪ್ರದಾಯಿಕ ಮಡಕೆಗಳಿಗೆ ಬೇಡಿಕೆ ಹೆಚ್ಚಿದ್ದು, ವ್ಯಾಪಾರವೂ ವೃದ್ಧಿಸಿದೆ.

ತಾಲೂಕಿನ ವಿವಿಧೆಡೆ ಮಡಕೆ ಮಾರಾಟ ಮಾಡುವ ಅಂಗಡಿಗಳಲ್ಲಿ ಮಡಕೆ ಖರೀದಿಸುವ ದೃಶ್ಯಗಳು ಕಾಣಸಿಗುತ್ತವೆ. ಬೇಸಗೆಯಲ್ಲಿ ಮುಖ್ಯ ವ್ಯಾಪಾರಗಳಲ್ಲಿ ಒಂದಾಗಿರುವ ಮಡಕೆ ವ್ಯಾಪಾರವೂ ಜನವರಿಯಿಂದಲೇ ಶುರುವಾಗಿದೆ. ನಾನಾ ಬಗೆಯ ಆಕೃತಿಯ ಮಡಕೆಗಳು ಗ್ರಾಹಕರನ್ನು ಸೆಳೆಯುತ್ತಿವೆ. ಮಡಕೆಯ ವಿನ್ಯಾಸ, ಅದರ ಗಾತ್ರದ ಆಧಾರದ ಮೇಲೆ ದರ ನಿಗದಿಪಡಿಸಿದ್ದಾರೆ.

ನೀರು ಕೂಲ್‌
ಬೇಸಗೆಯಲ್ಲಿ ಕೆಲವರು ತಣ್ಣನೆಯ ನೀರಿಗಾಗಿ ಫ್ರಿಜ್‌ ಬಳಸುತ್ತಾರೆ. ದುಬಾರಿ ರೆಫ್ರಿಜಿರೇಟರ್‌ ಖರೀದಿಸಲಾಗದವರು ಮಡಕೆಯ ಮೊರೆ ಹೋಗುತ್ತಾರೆ. ಎಂಥಾ ಸುಡುಬೇಸಗೆಯಲ್ಲೂ ವಿದ್ಯುತ್‌ ಅಗತ್ಯವಿಲ್ಲದೇ ತಂಪಾದ ನೀರು ಕೊಡುವ ಮಣ್ಣಿನ ಮಡಕೆ ಬಡವರ ಫ್ರಿಜ್‌ ಎಂದೇ ಜನಜನಿತವಾಗಿದೆ. ಫ್ರಿಜ್‌ನಲ್ಲಿನ ನೀರು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾಹಿತಿಯಿಂದ ಮಣ್ಣಿನ ಮಡಕೆಗೆ ಬೇಡಿಕೆ ವ್ಯಕ್ತವಾಗಿದೆ. ಮಡಕೆಯಲ್ಲಿನ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಉಪಕಾರಿ. ಬೇಸಗೆಯಲ್ಲಿ ಮಡಕೆ ಖರೀದಿ ಜಾಸ್ತಿ. ಫ್ರಿಜ್‌ಗಿಂತಲೂ ಬಹಳಷ್ಟು ಜನರು ಮಡಕೆ ಖರೀದಿಸಿ ನೀರು ಕುಡಿಯುತ್ತಾರೆ.

ಆರೋಗ್ಯಕ್ಕೆ ತಂಪು
ನೈಸರ್ಗಿಕವಾಗಿ ನೀರನ್ನು ತಂಪಾಗಿಸುವ ಗುಣ ಹೊಂದಿರುವ ಮಡಕೆ, ಫ್ರಿಜ್‌ಗಿಂತ ಉತ್ತಮ. ಆರೋಗ್ಯದ ದೃಷ್ಟಿಯಿಂದಲೂ ಅನುಕೂಲ. ದಾಹವನ್ನು ಬೇಗ ತಣಿಸಿ ಉಷ್ಣಾಂಶ ಕಡಿಮೆ ಮಾಡುತ್ತದೆ. ಮಣ್ಣಿನಲ್ಲಿರುವ ವಿಶಿಷ್ಟ ಗುಣಗಳು ದೇಹದೊಳಗಿನ ಕೆಲವು ಬ್ಯಾಕ್ಟೀರಿಯಾಗಳ ಮೇಲೆ ಪ್ರಭಾವ ಬೀರುತ್ತವೆ. ಇದು ಆರೋಗ್ಯ ರಕ್ಷಣೆಗೆ ಅನುಕೂಲವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಬಹು ರೀತಿಯ ಲಾಭ ನೀಡುವ ಮಡಕೆಯಿಂದ ಪರಿಸರಕ್ಕೂ ಯಾವುದೇ ಹಾನಿಯಿಲ್ಲ. ಮಣ್ಣಿನ ಮಡಕೆಯೊಳಗೆ ತುಂಬಿಸಿದ ನೀರಿಗೆ ತಾಮ್ರದ ತಗಡನ್ನು ಹಾಕಿದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ. ಕಳೆದ 4 ವರ್ಷಗಳಿಂದ ಮಣ್ಣಿನ ಮಡಕೆಯ ನೀರನ್ನು ಬಳಸುತ್ತಿರುವ ಬೆಳಂದೂರು ಈಡನ್‌ ಗ್ಲೋಬಲ್‌ ಶಿಕ್ಷಣ ಸಂಸ್ಥೆಯ ಶಿಕ್ಷಕ ಶಶಿಕುಮಾರ್‌ ಬಿ.ಎನ್‌ ಅವರು.

ನಾನಾ ಗಾತ್ರದ ಮಡಕೆ ಲಭ್ಯ
ನಮ್ಮಲ್ಲಿ ಒಂದು ಲೀಟರ್‌ನಿಂದ ಹಿಡಿದು 25 ಲೀಟರ್‌ ಸಾಮರ್ಥಯದವರೆಗೆ ತರಹೇವಾರಿ ಮಡಕೆಗಳು ಸಿಗುತ್ತವೆ. ನಳ್ಳಿ ಅಳವಡಿಸಿರುವ ದೊಡ್ಡ ಮಡಕೆಗಳೂ ಇವೆ. ಹೋದ ವರ್ಷವೂ ಬೇಸಗೆಯಲ್ಲಿ ವ್ಯಾಪಾರ ಜೋರಾಗಿತ್ತು. ನಮ್ಮಲ್ಲಿ ಗಾತ್ರ ಹಾಗೂ ವಿನ್ಯಾಸ ಆಧರಿಸಿ 120ರಿಂದ 2,500 ರೂಪಾಯಿವರೆಗೆ ಮಡಕೆ ಮಾರಾಟ ಮಾಡಲಾಗುತ್ತದೆ. ಜನವರಿಯಿಂದ ಮಣ್ಣಿನ ಮಡಕೆ ವ್ಯಾಪಾರ ಆರಂಭವಾಗುತ್ತದೆ. ಮಾರ್ಚ್‌, ಎಪ್ರಿಲ್‌ ಮತ್ತು ಮೇಯಲ್ಲಿ ಮಡಕೆಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇದೀಗ ದಿನಕ್ಕೆ 10 ರಿಂದ 20 ಮಡಕೆಗಳು ಕೌಡಿಚ್ಚಾರು ಕುಂಬಾರರ ಗುಡಿಕೈಗಾರಿಕೆ ಸಂಸ್ಥೆಯಿಂದ ಮಾರಾಟವಾಗುತ್ತಿದೆ. ತಾಲೂಕಿನಲ್ಲಿ ದಿನವೊಂದಕ್ಕೆ 100ಕ್ಕಿಂತ ಹೆಚ್ಚು ಮಣ್ಣಿನ ಮಡಕೆಗಳು ಮಾರಾಟವಾಗುತ್ತದೆ ಎಂದು ಹೇಳುತ್ತಾರೆ ದೀಪಕ್‌ ಕುಲಾಲ್‌ ಕೌಡಿಚ್ಚಾರು.

 ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

1

Sullia: ಬಿಎಸ್ಸೆನ್ನೆಲ್‌ ಟವರ್‌ಗೆ ಸೋಲಾರ್‌ ಪವರ್‌!

5-subrahmanya

Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.