ವಾಹನಗಳ ಮಿತಿ ಮೀರಿದ ವೇಗದಿಂದ ಹೆಚ್ಚುತ್ತಿರುವ ಅಪಘಾತ
ಬಿ.ಸಿ.ರೋಡ್-ಜಕ್ರಿಬೆಟ್ಟು-ಪುಂಜಾಲಕಟ್ಟೆ ಸುಸಜ್ಜಿತ ರಸ್ತೆ
Team Udayavani, Apr 12, 2022, 10:16 AM IST
ಬಂಟ್ವಾಳ: ರಸ್ತೆ, ಹೆದ್ದಾರಿಗಳು ಅಭಿ ವೃದ್ಧಿಗೊಂಡತೆ ಅಲ್ಲಿ ಸಾಗುವ ವಾಹನಗಳ ವೇಗವೂ ಹೆಚ್ಚಾಗುತ್ತಿದ್ದು, ಸಾಕಷ್ಟು ಸಂದ ರ್ಭಗಳಲ್ಲಿ ವೇಗವೇ ಅಪಾಯಕ್ಕೆ ಕಾರಣವಾಗುತ್ತಿದೆ. ಅಭಿವೃದ್ಧಿಗೊಂಡ ಬಿ.ಸಿ. ರೋಡ್-ಜಕ್ರಿಬೆಟ್ಟು- ಪುಂಜಾಲಕಟ್ಟೆ ಹೆದ್ದಾರಿಯಲ್ಲೂ ವಾಹನಗಳ ಮಿತಿ ಮೀರಿದ ವೇಗದಿಂದ ಈಗಾಗಲೇ ಹಲವು ಅಪಘಾತಗಳು ಸಂಭವಿಸಿದ್ದು, ಕ್ರಮಕ್ಕೆ ಆಗಹ್ರ ಕೇಳಿಬಂದಿದೆ.
ಅಭಿವೃದ್ಧಿಗೊಂಡ ಹೆದ್ದಾರಿಯನ್ನು ಅಗಲದ ಜತೆಗೆ ನೇರವಾಗಿ ಮಾಡಲಾಗಿದೆ. ಹೀಗಾಗಿ ವಾಹನಗಳು ವೇಗದಲ್ಲೇ ಸಾಗುತ್ತಿ ರುತ್ತವೆ. ನೇರವಾಗಿರುವ ರಸ್ತೆಯ ವೇಗವನ್ನೇ ತಿರುವಿ ನಲ್ಲೂ ಮುಂದುವರಿಸುತ್ತಿರುವ ಪರಿ ಣಾಮ ಅಪಘಾತಗಳಿಗೆ ಕಾರಣವಾಗುತ್ತಿದೆ.
ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗಿನ 3.85 ಕಿ.ಮೀ. ಹೆದ್ದಾರಿಯು ಕಾಂಕ್ರೀಟ್ ರಸ್ತೆಯಾಗಿ ಚತುಷ್ಪಥಗೊಂಡಿದ್ದು, ಜಕ್ರಿ ಬೆಟ್ಟುನಿಂದ ಪುಂಜಾಲಕಟ್ಟೆವರೆಗಿನ 16 ಕಿ.ಮೀ. ಹೆದ್ದಾರಿ ದ್ವಿಪಥ ರಸ್ತೆಯಾಗಿ ಮೇಲ್ದರ್ಜೆಗೇರಿದೆ. ಪ್ರಸ್ತುತ ಜಕ್ರಿಬೆಟ್ಟುನಿಂದ ಪುಂಜಾಲಕಟ್ಟೆವರೆಗೆ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ ಎಂಬ ದೂರುಗಳಿವೆ.
ಜಕ್ರಿಬೆಟ್ಟುವಿನಲ್ಲಿ ಕಾಂಕ್ರೀಟ್ ರಸ್ತೆ ಮುಗಿದು ಡಾಮಾರು ರಸ್ತೆಯಲ್ಲಿ ಕೊಂಚ ದೂರ ಸಂಚರಿಸುತ್ತಿದ್ದಂತೆ ತಿರುವಿನ ಬಳಿ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿದೆ.
ಕ್ಷಣ ಮಾತ್ರದಲ್ಲಿ ಹತ್ತಿರಕ್ಕೆ ಹೆದ್ದಾರಿ
ಅಭಿವೃದ್ಧಿಗೊಂಡಿರುವ ಜತೆಗೆ ದೂರದಲ್ಲಿ ವಾಹನಗಳು ಬರುವುದು ಕೂಡ ಸ್ಪಷ್ಟವಾಗಿ ಕಾಣುತ್ತದೆ. ವಾಹನ ದೂರ ಇದೆ ಎಂದು ರಸ್ತೆ ಕ್ರಾಸ್ ಮಾಡುವ ವೇಳೆ ರಸ್ತೆಯ ಮಧ್ಯಕ್ಕೆ ತಲುಪುತ್ತಿದ್ದಂತೆ ವಾಹನಗಳು ಕ್ಷಣ ಮಾತ್ರದಲ್ಲಿ ಹತ್ತಿರಕ್ಕೆ ಬಂದಿರುತ್ತದೆ. ಅಂದರೆ ವಾಹನಗಳ ವೇಗ ಅಷ್ಟಿದ್ದು, ಈ ವೇಳೆ ವಾಹನ ಚಾಲಕನ ನಿಯಂತ್ರಣ ತಪ್ಪಿದರೆ ಅಥವಾ ರಸ್ತೆ ದಾಟುವ ವ್ಯಕ್ತಿ ಗೊಂದಲಕ್ಕೆ ಒಳಗಾದರೆ ಅಪಘಾತದ ಸಾಧ್ಯತೆ ಹೆಚ್ಚಿರುತ್ತದೆ. ಇದು ಜೀವಹಾನಿಗೂ ಕಾರಣವಾಗುವ ಸಾಧ್ಯತೆಯೂ ಇದೆ.
ಚತುಷ್ಪಥದಲ್ಲೂ ಅಪಾಯ
ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿ ಯಲ್ಲೂ ಅಪಾಯದ ಸ್ಥಿತಿ ಇದೆ. ಅಂದರೆ 2 ದಿಕ್ಕಿನಲ್ಲೂ ಸಾಗುವ ವಾಹನಗಳಿಗೆ ಮಧ್ಯೆ ಡಿವೈಡರ್ ಇದ್ದು ಪ್ರತ್ಯೇಕ ರಸ್ತೆಗಳಿವೆ. ಆದರೆ ಕೆಲವೊಂದು ವಾಹನಗಳು ರಾಂಗ್ ಸೈಡ್ ನಿಂದ ಬರುತ್ತಿರುವುದರಿಂದ ಅಪಾಯಕ್ಕೆ ಕಾರಣವಾಗುತ್ತಿದೆ. ಇನ್ನು ಒಳರಸ್ತೆಗಳು ಹೆದ್ದಾರಿಯನ್ನು ಸೇರುವಲ್ಲಿಯೂ ಅಪಘಾತದ ಸ್ಥಿತಿ ಹೆಚ್ಚಿರುತ್ತದೆ. ಚತುಷ್ಪಥ ಹೆದ್ದಾರಿಯ ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ನಾಲ್ಕು ರಸ್ತೆಗಳು ಸೇರುತ್ತಿ ರುವುದರಿಂದ ಗೊಂದಲ ಗಳಿದ್ದು, ಅಪಘಾತದ ಸಾಧ್ಯತೆ ಇದೆ. ಅಲ್ಲಿ ವೃತ್ತ ಮಾಡಿದ್ದರೆ ವಾಹನಗಳು ಗೊಂದಲಕ್ಕೆ ಒಳಗಾಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ಈ ಎಲ್ಲ ರಸ್ತೆಗಳಲ್ಲೂ ಬರುವ ವಾಹನಗಳು ಒಂದೇ ವೇಗದಲ್ಲಿ ಬರುವುದರಿಂದ ಅಪಾಯ ಹೆಚ್ಚಿರುತ್ತದೆ.
ಮಿತಿ ಮೀರಿದ ವೇಗಕ್ಕೆ ದಂಡ
ಈ ಹೊಸ ರಸ್ತೆಯಲ್ಲಿ ಅಪಘಾತವಾಗುವ ಕುರಿತು ನನ್ನ ಗಮನಕ್ಕೂ ಬಂದಿದೆ. ಈಗಾಗಲೇ ಹತ್ತಾರು ಅಪಘಾತಗಳು ನಡೆದಿರುವ ಮಾಹಿತಿ ಇದೆ. ಹೀಗಾಗಿ ಕೆಲವು ಪ್ರಮುಖ ಸ್ಥಳಗಳಲ್ಲಿ ವಾಹನಗಳು ಮಿತಿ ಮೀರಿದ ವೇಗದಲ್ಲಿ ಸಾಗುವುದಕ್ಕೆ ನಿಯಂತ್ರಣ ಹಾಕುವ ದೃಷ್ಟಿಯಿಂದ ಸಂಚಾರಿ ಪೊಲೀಸರನ್ನು ನಿಯೋಜಿಸಿ ದಂಡ ವಿಧಿಸುವ ಕಾರ್ಯವನ್ನು ಆರಂಭಿಸಲಾಗುವುದು. –ಪ್ರತಾಪ್ ಸಿಂಗ್ ಥೋರಟ್, ಡಿವೈಎಸ್‌ಪಿ, ಬಂಟ್ವಾಳ
ಇಲಾಖೆಗೆ ಮನವಿ
ನಮ್ಮ ಭಾಗದ ಹೆದ್ದಾರಿಯಲ್ಲಿ ವಾಹನಗಳ ವೇಗ ಮಿತಿಮೀರಿದ್ದು, ಅಪಘಾತಗಳು ಕೂಡ ಹೆಚ್ಚುತ್ತಿದೆ. ಕಳೆದ ಜ. 25ರಂದು ನಮಗೂ ಕೂಡ ಅಪಘಾತದ ಅನುಭವವಾಗಿದೆ. ಇಂಡಿಕೇಟರ್ ಹಾಕಿ ನಾನು ಕಾರನ್ನು ಮನೆಗೆ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ಕಾರು ಢಿಕ್ಕಿ ಹೊಡೆದಿದೆ. ಹೆದ್ದಾರಿಯಲ್ಲಿ ವೇಗ ನಿಯಂತ್ರಣ, ಅಪಘಾತಗಳ ಸೂಚನೆಗಳನ್ನು ಹಾಕುವುದಕ್ಕೆ ಹೆದ್ದಾರಿ ಇಲಾಖೆಗೆ ಮನವಿಯನ್ನೂ ಮಾಡಿದ್ದೇವೆ. –ರಾಜೇಂದ್ರ ಕುಮಾರ್ ಮಣ್ಣಾಪು, ಜಕ್ರಿಬೆಟ್ಟು ನಿವಾಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.