ಅನಿರ್ದಿಷ್ಟ ಕಾಲಾವಧಿ ಮುಷ್ಕರದ ಹಿನ್ನೆಲೆ: ಸೇವೆಯಲ್ಲಿ ವ್ಯತ್ಯಯ
Team Udayavani, Jun 1, 2018, 1:12 PM IST
ಬಜಪೆ : ಕೆಲಸ ಖಾಯಂ ಮಾಡಬೇಕು, ಪಿಂಚಣಿ ವ್ಯವಸ್ಥೆ , ಕೆಲಸದ ಭದ್ರತೆ ನೀಡಬೇಕು ಮತ್ತು 7ನೇ ವೇತನ ಆಯೋಗ ಜಾರಿ ಮಾಡಬೇಕು ಎಂದು ಗ್ರಾಮೀಣ ಅಂಚೆ ನೌಕರರು ರಾಷ್ಟ್ರವ್ಯಾಪಿ ನಡೆಸುತ್ತಿರುವ ಅನಿರ್ದಿಷ್ಟ ಕಾಲಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಗ್ರಾಮೀಣ ಅಂಚೆ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಸದಾ ಜನಜಂಗುಳಿಯಿಂದ ತುಂಬಿರುತ್ತಿ ದ್ದ ಬಜಪೆ ಅಂಚೆ ಕಚೇರಿ ಗುರುವಾರವೂ ಜನರಿಲ್ಲದೇ ಖಾಲಿ ಖಾಲಿಯಾಗಿತ್ತು. ಅಂಚೆ ಕಚೇರಿ ತೆರೆದಿದ್ದರೂ ಗ್ರಾಮೀಣ ಅಂಚೆ ಸೇವೆಯನ್ನು ಬಿಟ್ಟು ಉಳಿದೆಲ್ಲ ಸೇವೆಗಳು ಚಾಲ್ತಿಯಿತ್ತು.
ಒಂದೆಡೆ ಬ್ಯಾಂಕ್‌ನೌಕರರ ಮುಷ್ಕರ, ಮತ್ತೊಂದೆಡೆ ಅಂಚೆ ನೌಕರರ ಮುಷ್ಕರವಿದ್ದರೂ ಹಣಕಾಸು ವವ್ಯವಹಾರ ಕಡಿಮೆ ಯಾಗಿತ್ತು. ಕೆಲವೆಡೆ ಅಂಚೆ ಬಟವಾಡೆಯಾಗದೇ ಜನರು ತೊಂದರೆಯನ್ನೂ ಅನುಭವಿಸಿರುವುದು ತಿಳಿದು ಬಂದಿದೆ. ಬಜಪೆ ಅಂಚೆ ಕಚೇರಿಯ ವ್ಯಾಪ್ತಿಯಲ್ಲಿ 6 ಉಪಅಂಚೆ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದು, ಪಡುಪೆರಾರ, ಕೊಳಂಬೆ, ಅದ್ಯಪಾಡಿ, ಪೇಜಾವರ, ಕಳವಾರು, ಕೆಂಜಾರು ಇದರಲ್ಲಿ ಈಗಾಗಲೇ ಮೂರು ಉಪಅಂಚೆ ಕಚೇರಿ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಒಟ್ಟು 21 ಉದ್ಯೋಗಿಯಲ್ಲಿ 5 ಮಂದಿ ಮಾತ್ರ ಖಾಯಂ ನೌಕರರಾಗಿದ್ದಾರೆ.
ಕಿನ್ನಿಗೋಳಿಯಲ್ಲೂ ಅಂಚೆ ಸೇವೆ ಸ್ಥಗಿತ
ಕಿನ್ನಿಗೋಳಿ ಹಾಗೂ ಐಕಳ ಕೇಂದ್ರ ಕಚೇರಿಯ ವ್ಯಾಪ್ತಿಯಲ್ಲಿನ ಪುನರೂರು, ನಡುಗೋಡು, ಎಳತ್ತೂರು, ಏಳಿಂಜೆ, ಕೊಲ್ಲೂರು ಗ್ರಾಮೀಣ ಅಂಚೆ ಕಚೇರಿಗಳು ಮುಚ್ಚಿದ್ದವು. ಇದ ರಿಂದ ಈ ವ್ಯಾಪ್ತಿಯ ಲ್ಲಿ ಕಾಗದ ಪತ್ರ, ಮನಿಯಾರ್ಡರ್, ಪಾರ್ಸೆಲ್
ಗಳು ಬಟವಾಡೆ ಆಗದೆ ಬಾಕಿ ಉಳಿದಿದೆ. ಒಂದಡೆಯಲ್ಲಿ ಬ್ಯಾಂಕ್ ನೌಕರರ ಮುಷ್ಕರ ಇನ್ನೊಂದಡೆ ಗ್ರಾಮೀಣ ಅಂಚೆ ಕಚೇರಿಗಳು ಮುಷ್ಕರ ನಡೆಸುತ್ತಿರುವುದರಿಂದ ಗ್ರಾಮೀಣ ಭಾಗದ ಜನರು ಪರದಾಡುವಂತಾಗಿದೆ.
ಮೂಲ್ಕಿ: ಅಂಚೆ ಸೇವೆ ನಿರಾಂತಕ
ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಗಾಮೀಣ ಪ್ರದೇಶದ ಅಂಚೆ ಸಿಬಂದಿ ಮುಷ್ಕರ ಬಿಸಿ ಈ ವರೆಗೆ ಮೂಲ್ಕಿಯ ಅಂಚೆ ಉಪ ಕಚೇರಿಯ ವ್ಯಾಪಿಯಲ್ಲಿರುವ ಎಲ್ಲಾ ಬ್ರಾಂಚ್ ಉಪ ಕಚೇರಿಗಳ ಸೇವೆಯಲ್ಲಿ ಯಾವುದೇ ಆತಂಕ ಇಲ್ಲದೆ ಸಾರ್ವಜನಿಕರಿಗೆ ಅಂಚೆ ಸೇವೆ ಲಭ್ಯವಾಗುತ್ತಿದೆ. ಕಾರ್ನಾಡು ಸದಾಶಿವ ನಗರ, ಕಾರ್ನಾಡು,ಪಂಜನಡ್ಕ, ಕರ್ನಿರೆ,ಬಳ್ಕುಂಜೆ , ಅತಿಕಾರಿ ಬೆಟ್ಟು, ಕೆಂಚನಕೆರೆ, ಚಿತ್ರಾಪು,ಕಿಲ್ಪಾಡಿ ಮುಂತಾದೆಡೆಗಳ ಉಪ ಕಚೇರಿಯ ಸೇವೆಗಳು ಎಂದಿನಂತೆ ಯಾವುದೇ ವ್ಯತ್ಯಯ ಇಲ್ಲದೆ ನಡೆಯುತ್ತಿದೆ ಎಂದು ಅಂಚೆ ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.