ಪಾಲಿಕೆ ವ್ಯಾಪ್ತಿಯಲ್ಲಿ ಇಂದ್ರಧನುಷ್ ನಗರ ಲಸಿಕಾ ಅಭಿಯಾನ
Team Udayavani, Jul 14, 2018, 2:40 AM IST
ಮಹಾನಗರ: ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ಇಂದ್ರಧನುಷ್-ನಗರ ಲಸಿಕಾ ಅಭಿಯಾನ ಜು. 16, 17, 18, 20, ಆ. 13, 14, 17 ಹಾಗೂ 18 ಮತ್ತು ಸೆ. 10, 11, 14, 15ರಂದು ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ರಾವ್ ತಿಳಿಸಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಈ ಕುರಿತು ಮಾಹಿತಿ ನೀಡಿದ ಅವರು, ಅಂದಾಜು 318 ಗರ್ಭಿಣಿಯರು, 815 ಮಂದಿ ಎರಡು ವರ್ಷದೊಳಗಿನ ಮಕ್ಕಳು ಹಾಗೂ 22 ಮಂದಿ 5ರಿಂದ 6 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಹೊರ ಜಿಲ್ಲೆಯವರು ಲಸಿಕಾ ಕೇಂದ್ರಕ್ಕೆ ಬಂದರೆ ಅವರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಈಗ ಲಸಿಕೆ ಪಡೆಯಬೇಕಾದ ಗರ್ಭಿಣಿಯರು, ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಪ್ರಸ್ತುತ ಲಸಿಕೆ/ಚುಚ್ಚುಮದ್ದು ಪಡೆಯಬೇಕಾಗಿರುವ ಎರಡು ವರ್ಷದೊಳಗಿನ ಮಕ್ಕಳು, ಈ ಹಿಂದೆ ಲಸಿಕೆ/ಚುಚ್ಚುಮದ್ದು ಪಡೆಯಲು ಬಾಕಿ ಇರುವ ಮತ್ತು ಈಗ ಲಸಿಕೆ ಪಡೆಯಬೇಕಾಗಿರುವ 5ರಿಂದ 6 ವರ್ಷದ ಶಾಲೆ ಬಿಟ್ಟ ಮಕ್ಕಳು ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಈ ಅಭಿಯಾನದಡಿ ಗರ್ಭಿಣಿಯರಿಗೆ ಟಿಟಿ ಲಸಿಕೆ, ಎರಡು ವರ್ಷದೊಳಗಿನ ಮಕ್ಕಳಿಗೆ ಬಿಸಿಜಿ, ಪೋಲಿಯೋ, ದಡಾರ ಮತ್ತು ರುಬೆಲ್ಲಾ ಪ್ರತ್ಯೇಕ ಲಸಿಕೆ ಹಾಗೂ ಡಿಪಿಟಿ ಮುಂತಾದವು ಮತ್ತು 5-6 ವರ್ಷದೊಳಗಿನ ಮಕ್ಕಳಿಗೆ ಡಿಪಿಟಿ ಬೂಸ್ಟರ್‌ನ್ನು ಹಾಕಲಾಗುವುದು ಎಂದು ಅವರು ವಿವರಿಸಿದರು. ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ| ಅಶೋಕ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ರಾಜೇಶ್, ಡಾ| ಸಿಕಂದರ್ ಪಾಶಾ ಮತ್ತಿತರರು ಉಪಸ್ಥಿತರಿದ್ದರು.
ಲಸಿಕೆ ಹಾಕುವ ಕೇಂದ್ರಗಳ ವಿವರ
ಜು. 16ರಂದು ಬೆಳಗ್ಗೆ 10 ಗಂಟೆಗೆ ಜೆಪ್ಪು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಭಿಯಾನ ಉದ್ಘಾಟನೆಗೊಳ್ಳಲಿದೆ. ಜೆಪ್ಪು, ಪಡೀಲ್ (ಮರೋಳಿ), ಶಕ್ತಿನಗರ, ಬಂದರು, ಕಸಬಾ ಬೆಂಗ್ರೆ, ಕುಳಾಯಿ (ಹೊನ್ನಕಟ್ಟೆ), ಸುರತ್ಕಲ್, ಎಕ್ಕೂರು, ಕೂಳೂರು-ಕುಂಜತ್ತಬೈಲ್, ಲೇಡಿಹಿಲ್‌ಗಳಲ್ಲಿ ಉಚಿತವಾಗಿ ಲಸಿಕೆ/ ಚುಚ್ಚುಮದ್ದು ದೊರೆಯಲಿದೆ. ಇದಲ್ಲದೆ 83 ಲಸಿಕಾ ಬೂತ್‌ಗಳಲ್ಲಿಯೂ ಲಸಿಕೆ ಹಾಕಲಾಗುವುದು. ಗರ್ಭಿಣಿಯರು ಮತ್ತು ನಿರ್ಧರಿತ ವಯೋಮಾನದ ಮಕ್ಕಳು ಸಂಪೂರ್ಣವಾಗಿ ಲಸಿಕೆ ಪಡೆದಿದ್ದಾರೆಯೇ ಎಂದು ಸನಿಹದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಅಥವಾ ಕ್ಷೇತ್ರದ ಆರೋಗ್ಯ ಕಾರ್ಯಕರ್ತೆ, ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಕಾರ್ಯಕರ್ತೆಯರಲ್ಲಿ ಖಾತರಿಪಡಿಸಿಕೊಳ್ಳಬೇಕು. ಬಾಕಿ ಇದ್ದಲ್ಲಿ ಲಸಿಕೆ ಹಾಕಿಸಬೇಕು ಎಂದು ಡಾ| ರಾಮಕೃಷ್ಣ ರಾವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.