ಭಾರತೀಯ ಗೋ ತಳಿ ಸರ್ವಶ್ರೇಷ್ಠ : ವಿದ್ಯಾಲಕ್ಷ್ಮೀ
Team Udayavani, Oct 4, 2017, 11:05 AM IST
ಮಹಾನಗರ: ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಭಾರತೀಯ ಗೋ ತಳಿಗಳೇ ಸರ್ವಶ್ರೇಷ್ಠ ಎಂದು ವಿದ್ಯಾಲಕ್ಷ್ಮೀ ಅರವಿಂದ್ ಭಟ್ ಹೇಳಿದರು.
ವಿಪ್ರ ವೇದಿಕೆ ಕೋಡಿಕಲ್ ಇತ್ತೀಚೆಗೆ ಆಯೋಜಿಸಿದ ‘ನಾವು ಮತ್ತು ಗೋವು’ ಎಂಬ ವಿಚಾರದ ಕುರಿತು ಮಾತನಾಡಿದ ಅವರು, ಔಷಧೀಯ ಗುಣಗಳನ್ನು ಹೊಂದಿರುವ ಈ ತಳಿಗಳಿಂದ ಸಮೃದ್ಧವಾದ ಎ-2 ಮಾದರಿಯ ಹಾಲು ಲಭಿಸುವುದಲ್ಲದೆ, ಅವುಗಳ ಉಸಿರಿನಿಂದ ಆಮ್ಲಜನಕವು ಹೇರಳವಾಗಿ ಸಿಗುತ್ತದೆ ಎಂದರು.
ಸುಮಾರು ಎಪ್ಪತ್ತಕ್ಕಿಂತಲೂ ಹೆಚ್ಚು ಸ್ವದೇಶಿ ಗೋ ತಳಿಗಳಿದ್ದು, ಇಂದು ಅವುಗಳ ಸಂಖ್ಯೆ ಕ್ಷೀಣಿಸುತ್ತ ಮೂವತ್ತಕ್ಕಿಳಿದಿದೆ. ಅವುಗಳನ್ನು ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಪೇಟೆ ಜೀವನದಲ್ಲಿ ಗೋವುಗಳನ್ನು ಸಾಕುವುದು ಕಷ್ಟವಾದರೂ ಅವುಗಳನ್ನು ಸಾಕುತ್ತಿರುವ ಕೃಷಿಕರು, ಸೇವಾ ಸಂಸ್ಥೆಗಳು ಮತ್ತು ಮಠಗಳಿಗೆ ನಾವು ಕೈಲಾದಷ್ಟು ಸಹಾಯ ಮಾಡಿ ಪ್ರೋತ್ಸಾಹ ನೀಡಿದಾಗ ಅದು ಗೋಮಾತೆಗೆ ಕೊಡುವ ದೊಡ್ಡ ಗೌರವವಾಗುತ್ತದೆ ಎಂದರು.
ವಿಪ್ರ ವೇದಿಕೆಯ ಅಧ್ಯಕ್ಷ ಜಯರಾಮ ಪದಕಣ್ಣಾಯ ಸ್ವಾಗತಿಸಿ, ಸ್ಥಾಪಕ ಸದಸ್ಯ ಶ್ರೀಧರ ಹೊಳ್ಳ ಅವರು ವಿದ್ಯಾಲಕ್ಷ್ಮೀ ಅರವಿಂದ್ ಅವರನ್ನು ಪರಿಚಯಿಸಿದರು. ಕಾರ್ಯದರ್ಶಿ ದುರ್ಗಾದಾಸ್ ಕೋಡಿಕಲ್ ವಂದಿಸಿದರು. ಸ್ಥಾಪಕ ಕಾರ್ಯದರ್ಶಿ ರವಿ ಅಲೆ ವೂರಾಯ, ಉಪಾಧ್ಯಕ್ಷ ರಾಜಾರಾಮ ಮಡಿ, ಕೋಶಾಧಿಕಾರಿ ಲಕ್ಷ್ಮೀನಾರಾಯಣ ನಿಡುವಣ್ಣಾಯ, ಸದಸ್ಯೆ ವಿದ್ಯಾ ಗಣೇಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.