ಇಂದಿರಾ ಕ್ಯಾಂಟೀನ್ ಕಾಮಗಾರಿ ನಿಲುಗಡೆ
Team Udayavani, Apr 29, 2018, 12:24 PM IST
ಬಂಟ್ವಾಳ:ಆಡಳಿತ ವ್ಯವಸ್ಥೆಯ ದುರುಪಯೋಗ ದೂರಿನಂತೆ ಬಿ.ಸಿ. ರೋಡ್‌ನಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಕಾಮಗಾರಿಯನ್ನು ಚುನಾವಣಾಧಿಕಾರಿ ನಿಲುಗಡೆ ಮಾಡಿದ್ದಾರೆ. ಬಂಟ್ವಾಳ ಪುರಸಭೆಯ ಜೆಸಿಬಿ ಬಳಸಿ ಕ್ಯಾಂಟೀನ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದುದನ್ನು ಆಕ್ಷೇಪಿಸಿ ಪುರಸಭಾ ಸದಸ್ಯ ಎ. ಗೋವಿಂದ ಪ್ರಭು ನೀಡಿದ ದೂರಿನ ಬಳಿಕ ನೀತಿ ಸಂಹಿತೆ ಉಲ್ಲಂಘನೆ ಆರೋಪದಂತೆ ಚುನಾವಣಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಕ್ಯಾಂಟೀನ್ ನಿರ್ಮಾಣ ಕಾಮಗಾರಿಗೆ ಗುತ್ತಿಗೆ ವಹಿಸಿದ ವ್ಯಕ್ತಿ ಬಳಕೆ ಮಾಡಿದ ಯಂತ್ರ ಕೆಎ 19 ಜಿ 0735 ಪುರಸಭೆಯದ್ದಾಗಿದ್ದು, ಇಲ್ಲಿ ಯಾಕೆ ಬಳಸಿದ್ದು ಎಂಬುದಾಗಿ ಪ್ರಶ್ನಿಸಲಾಗಿತ್ತು. ತ್ವರಿತ ಕಾಮಗಾರಿ ಉದ್ದೇಶದಿಂದ ಚುನಾವಣೆ ಸಂದರ್ಭ ಕಾಮಗಾರಿ ಮಾಡಿದ್ದನ್ನು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ದೂರಲಾಗಿತ್ತು. ಕ್ಯಾಂಟೀನ್ ನಿರ್ಮಾಣ ಕಾಮಗಾರಿ ಕಳೆದ ಒಂದು ತಿಂಗಳಿಂದ ನಡೆಯುತ್ತಿತ್ತು
ಮುಖ್ಯಾಧಿಕಾರಿ ವರ್ಗಾವಣೆ
ಸಹಾಯಕ ಚುನಾವಣಾಧಿಕಾರಿ ವೈ. ರವಿ ಮಾಹಿತಿ ನೀಡಿ, ಗುತ್ತಿಗೆಯ ಶರ್ತದಂತೆ ಬಂಟ್ವಾಳ ಪುರಸಭೆಯು ಇಂದಿರಾ ಕ್ಯಾಂಟೀನ್‌ಗೆ ನೀರಿನ ವ್ಯವಸ್ಥೆ ಮಾಡಬೇಕಾಗಿತ್ತು. ಅದರ ಕಾಮಗಾರಿ ನಿರ್ವಹಿಸಲು ಸೂಚಿಸಿದಂತೆ ಪುರಸಭೆಯ ಜೆಸಿಬಿ ಬಳಸಿ ಕೆಲಸ ಮಾಡುತ್ತಿದ್ದರು. ದೂರು ಬಂದ ಬಳಿಕ ಕಾಮಗಾರಿ ನಿಲುಗಡೆ ಮಾಡಿದ್ದು, ಸಂಬಂಧಪಟ್ಟವರಿಗೆ ನೋಟಿಸು ನೀಡಿದ್ದಾಗಿ ತಿಳಿಸಿದ್ದಾರೆ. ಇದರ ಅನಂತರದ ಬೆಳವಣಿಗೆಯಲ್ಲಿ ಬಂಟ್ವಾಳ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ ಅವರನ್ನು ಮೂಡಬಿದಿರೆಗೆ ಸ್ಥಳಾಂತರ ಮಾಡಿದ್ದು, ಅಲ್ಲಿನ ಮುಖ್ಯಾಧಿಕಾರಿ ರಾಜಪ್ಪ ಅವರನ್ನು ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ನಿಯುಕ್ತಿ ಕ್ರಮಗಳು ಆಗಲಿವೆ ಎಂದು ತಿಳಿಸಿದ್ದಾರೆ.
ಉಲ್ಲಂಘನೆ
ಚುನಾವಣೆ ಘೋಷಣೆ ಬಳಿಕ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಸರಕಾರಕ್ಕೆ ಸಂಬಂಧಿಸಿದ ಯಾವುದೇ ಕಾಮಗಾರಿ ನಡೆಸುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಕ್ಯಾಂಟೀನ್ ನಿರ್ಮಾಣಕ್ಕೆ ಪುರಸಭೆ ಜೆಸಿಬಿ ನೀಡುವ ಅಗತ್ಯವಿಲ್ಲ. ಅದಕ್ಕೆ ನೀರು ಒದಗಿಸುವ ಕೆಲಸದ ಕಾಮಗಾರಿ ಕೂಡಾ ಪುರಸಭೆ ಮಾಡುವುದಕ್ಕಿಲ್ಲ.
-ಎ. ಗೋವಿಂದ ಪ್ರಭು
ಪುರಸಭೆ ಬಿಜೆಪಿ ವಿಪಕ್ಷ ಸದಸ್ಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.