ಇಂದಿರಾ ಕ್ಯಾಂಟೀನ್‌ ಬಹುತೇಕ ಪೂರ್ಣ; ಮಾ.1ರೊಳಗೆ ಕಾರ್ಯಾರಂಭ 


Team Udayavani, Feb 9, 2018, 10:54 AM IST

9-Feb-5.jpg

ಮಹಾನಗರ: ರಾಜ್ಯ ಸರಕಾರದ ಪ್ರತಿಷ್ಠಿತ ಯೋಜನೆ ‘ಇಂದಿರಾ ಕ್ಯಾಂಟೀನ್‌’ ನಗರದ ಐದು ಕಡೆಗಳಲ್ಲಿ ಮಾ. 1ರ ಒಳಗೆ ಕಾರ್ಯಾರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.

ಕ್ಯಾಂಟೀನ್‌ಗಳ ನಿರ್ಮಾಣ ಕಾಮಗಾರಿಯನ್ನು ಕೆಇಎಫ್‌ ಸಂಸ್ಥೆ ಬಹುತೇಕ ಪೂರ್ಣಗೊಳಿಸಿದೆ. ಅಡುಗೆ ಪಾತ್ರೆ ಸಹಿತ ಇತರ ಪರಿಕರಗಳನ್ನು ಪೂರೈಸಲು ಉಡುಪಿ ಮೂಲದ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಆಹಾರ ತಯಾರಿ, ಸರಬರಾಜು, ವಿತರಣೆಯನ್ನು ಮಂಗಳೂರಿನ ಕ್ಯಾಟರಿಂಗ್‌ ಸಂಸ್ಥೆ ವಹಿಸಲಿದೆ. ಇಲ್ಲಿ ಬೆಳಗಿನ ಉಪಾಹಾರ 5 ರೂ. ಹಾಗೂ ಮಧ್ಯಾಹ್ನ- ರಾತ್ರಿಯ ಊಟ 10 ರೂ. ಗಳಲ್ಲಿ ಲಭ್ಯವಾಗಲಿದೆ.

ಮಹಾನಗರ ಪಾಲಿಕೆಯ 5.93 ಲಕ್ಷ ಜನಸಂಖ್ಯೆಯ ಆಧಾರದಲ್ಲಿ 6 ಕ್ಯಾಂಟೀನ್‌ ಹಾಗೂ ಅಡುಗೆ ಕೋಣೆಯನ್ನು
ಆರಂಭಿಸಲು ನಿರ್ಧರಿಸಲಾಗಿತ್ತು. ಈ ಪೈಕಿ ಒಂದು ಉಳ್ಳಾಲ ನಗರ ಸಭೆಯ ವ್ಯಾಪ್ತಿಯಲ್ಲಿ ಆರಂಭವಾಗುತ್ತಿದೆ.

ಒಬ್ಬ ವ್ಯಕ್ತಿಗೆ ಬೆಳಗ್ಗೆ ತಿಂಡಿ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸಹಿತ ಒಟ್ಟು 60 ರೂ.ಗಳ ಲೆಕ್ಕಾಚಾರದಲ್ಲಿ ಸರಕಾರ ಕ್ಯಾಟರಿಂಗ್‌ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. ಇದರಂತೆ ಬೆಳಗಿನ ತಿಂಡಿಗೆ 5 ರೂ. ಹಾಗೂ ಮಧ್ಯಾಹ್ನ, ರಾತ್ರಿ ಊಟಕ್ಕೆ ತಲಾ 10 ರೂ.ಗಳಂತೆ 25 ರೂ. ಗಳನ್ನು ಫಲಾನುಭವಿ ಪಾವತಿಸಬೇಕು. ಉಳಿದ 35 ರೂ. ಗಳನ್ನು ಸಬ್ಸಿಡಿ ಮೊತ್ತವಾಗಿ ಸರಕಾರ ಪಾವತಿಸಲಿದೆ.

2.97 ಕೋ.ರೂ. ವೆಚ್ಚ
ಇಂದಿರಾ ಕ್ಯಾಂಟೀನ್‌ಗೆ ಸಂಬಂಧಿಸಿದ ಕಟ್ಟಡಗಳನ್ನು ಕಂದಾಯ ಇಲಾಖೆ, ನಗರ ಸ್ಥಳೀಯ ಸಂಸ್ಥೆ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ವಿದ್ಯುತ್‌ ಕಂಪೆನಿ, ಪೊಲೀಸ್‌ ಇಲಾಖೆ ಹಾಗೂ ಇತರ ಸರಕಾರಿ ಸಂಸ್ಥೆಗಳಿಗೆ ಸಂಬಂಧಿಸಿದ ಜಾಗದಲ್ಲಿ ಭೂಮಿ ವರ್ಗಾವಣೆ ಪ್ರಕ್ರಿಯೆ ಇಲ್ಲದೆ ನಿರ್ಮಿಸಲು ಅನುಮತಿಸಲಾಗಿತ್ತು.

ಎಲ್ಲ ಕಟ್ಟಡಗಳನ್ನು ಕೆಇಎಫ್‌ ಮೂಲಕ 2.97 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಕ್ಯಾಂಟೀನ್‌ನ ಒಳಗೂ ಹಾಗೂ ಹೊರಗೂ ಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ವ್ಯವಸ್ಥೆ ಇರಲಿದೆ. ಕ್ಯಾಂಟೀನ್‌ ಹಿಂಭಾಗದಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆಯಿದೆ. ಕ್ಯಾಂಟೀನ್‌ ಫೌಂಡೇಶನ್‌ ನಡಿ ನೀರು ಸಂಗ್ರಹಕ್ಕೆ ಸಂಪು ಟ್ಯಾಂಕ್‌ ನಿರ್ಮಿಸಲಾಗಿದೆ.

ಮನಪಾ ಅನುದಾನ
ಕ್ಯಾಂಟೀನ್‌ ಕಟ್ಟಡಕ್ಕೆ ಬೇಕಾಗುವ ಮೂಲ ಸೌಕರ್ಯವನ್ನು ಪಾಲಿಕೆ ನಿರ್ವಹಿಸುತ್ತಿದೆ. ಕ್ಯಾಂಟೀನ್‌ಗಳ ಅನುಷ್ಠಾನ ಹಾಗೂ ಅನಂತರದ ಕಾರ್ಯ ನಿರ್ವಹಣೆ, ಮೇಲ್ವಿಚಾರಣೆ ಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ನಿರ್ವಹಿಸಲಿದೆ.

ಆಹಾರ ಪೂರೈಕೆಗೆ ಪ್ರತಿ ತಿಂಗಳಿಗೆ ತಗಲುವ ಸಹಾಯಧನದಲ್ಲಿ ಸ್ವಲ್ಪ ಭಾಗವನ್ನು ಕಾರ್ಮಿಕ ಇಲಾಖೆಯಿಂದ ಪಡೆದರೆ, ಉಳಿದದ್ದನ್ನು ಪಾಲಿಕೆಯು ತಮ್ಮ ಸ್ವಂತ ಅನುದಾನದಿಂದ ಭರಿಸಲಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಹತ್ತಿರ ನಿರ್ಮಾಣಗೊಳ್ಳುತ್ತಿರುವ ಕ್ಯಾಂಟೀನ್‌ನ ಜತೆಗಿನ ಅಡುಗೆ ಕೋಣೆಯಲ್ಲಿ ಎಲ್ಲ ಕ್ಯಾಂಟೀನ್‌ ಗಳಿಗೆ ಆಹಾರವನ್ನು ತಯಾರಿಸಲಾಗುತ್ತದೆ. ಪ್ರತೀ ಕ್ಯಾಂಟೀನ್‌ಗೆ ಇಲ್ಲಿ ಮೂರು ಹೊತ್ತು ತಲಾ 500 ರಂತೆ 3000 ಜನರಿಗೆ ಆಹಾರ ಸಿದ್ಧವಾಗಲಿದೆ. 

ಸೋಮವಾರ ಬೆಳಗ್ಗೆ ಇಡ್ಲಿ ಅಥವಾ ಪುಳಿಯೋಗರೆ, ಮಧ್ಯಾಹ್ನ ಹಾಗೂ ರಾತ್ರಿಗೆ ಅನ್ನ, ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಟೊಮೇಟೊ ಬಾತ್‌ ಮತ್ತು ಮೊಸರನ್ನ, ಮಂಗಳವಾರ ಇಡ್ಲಿ ಅಥವಾ ಖಾರಾಬಾತ್‌, ಮಧ್ಯಾಹ್ನ-ರಾತ್ರಿ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಚಿತ್ರಾನ್ನ ಮತ್ತು ಮೊಸರನ್ನ, ಬುಧವಾರ ಇಡ್ಲಿ ಅಥವ ಪೊಂಗಲ್‌, ಮಧ್ಯಾಹ್ನ ರಾತ್ರಿ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ವಾಂಗೀಬಾತ್‌ ಮತ್ತು ಮೊಸರನ್ನ ಲಭ್ಯವಿರಲಿದೆ. ಗುರುವಾರ ಇಡ್ಲಿ ಅಥವಾ ರವಾ ಕಿಚಡಿ, ಮಧ್ಯಾಹ್ನ, ರಾತ್ರಿ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಬಿಸಿ ಬೇಳೆಬಾತ್‌ ಮತ್ತು ಮೊಸರನ್ನ, ಶುಕ್ರವಾರ ಇಡ್ಲಿ ಅಥವಾ ಚಿತ್ರಾನ್ನ, ಮಧ್ಯಾಹ್ನ ರಾತ್ರಿ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಮೆಂತ್ಯೆ ಪುಲಾವ್‌ ಮತ್ತು ಮೊಸರನ್ನ, ಶನಿವಾರ ಇಡ್ಲಿ ಅಥವಾ ವಾಂಗೀಬಾತ್‌, ಮಧ್ಯಾಹ್ನ ರಾತ್ರಿ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಪುಳಿಯೊಗರೆ ಮತ್ತು ಮೊಸರನ್ನ, ರವಿವಾರ ಬೆಳಗ್ಗೆ ಇಡ್ಲಿ ಅಥವಾ ಖಾರಾಬಾತ್‌ ಮತ್ತು ಕೇಸರಿಬಾತ್‌, ಮಧ್ಯಾಹ್ನ ಹಾಗೂ ರಾತ್ರಿಗೆ ಅನ್ನ ತರಕಾರಿ ಸಾಂಬಾರ್‌ ಮತ್ತು ಮೊಸರನ್ನ ಅಥವಾ ಪುಲಾವ್‌ ಮತ್ತು ಮೊಸರನ್ನ ಲಭ್ಯವಿದೆ ಎಂದು ಜಿಲ್ಲಾ ನಗರಾಭಿವೃದ್ಧಿ ಇಲಾಖೆಯ ಮೂಲಗಳು ತಿಳಿಸಿವೆ.

ಕ್ಯಾಂಟೀನ್‌ ನಿರ್ಮಾಣವಾಗುತ್ತಿರುವ ಸ್ಥಳ  
.ಸ್ಟೇಟ್‌ಬ್ಯಾಂಕ್‌ ಬೀದಿ ಬದಿ ವ್ಯಾಪಾರಿ ವಲಯದ ಸಮೀಪ (ಲೇಡಿಗೋಶನ್‌ ಮುಂಭಾಗ) 
.ಕಂಕನಾಡಿ ಮಾರುಕಟ್ಟೆ ಸಮೀಪ 
.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸಮೀಪ (ಕ್ಯಾಂಟೀನ್‌ ಹಾಗೂ ಮಾಸ್ಟರ್‌ ಕಿಚನ್‌)  
.ಮಂಗಳೂರು ಮುನಿಸಿಪಾಲಿಟಿ ಶಾಲೆ ಕಾವೂರು ಸಮೀಪ
.ಪ್ರಾಥಮಿಕ ಆರೋಗ್ಯ ಕೇಂದ್ರ ಸುರತ್ಕಲ್‌ ಸಮೀಪ

ಕ್ಯಾಂಟೀನ್‌ಗೆ ಭದ್ರತೆ..!
ಸುರತ್ಕಲ್‌ನಲ್ಲಿ ನಿರ್ಮಾಣ ಹಂತದ ಇಂದಿರಾ ಕ್ಯಾಂಟೀನ್‌ಗೆ ಕಿಡಿಗೇಡಿಗಳು ಇತ್ತೀಚೆಗೆ ಮಸಿ ಬಳಿದ ಕಾರಣ, ಲೇಡಿಗೋಶನ್‌ ಮುಂಭಾಗ ನಡೆಯುತ್ತಿರುವ ಕ್ಯಾಂಟೀನಿನ ಮುಂಭಾಗದಲ್ಲಿರುವ ಇಂದಿರಾ ಗಾಂಧಿಯವರ ಭಾವಚಿತ್ರವನ್ನು ಟರ್ಫಾಲು ಹಾಕಿ ಮುಚ್ಚಲಾಗಿದೆ. ಜತೆಗೆ ಕ್ಯಾಂಟೀನ್‌ನ ಭದ್ರತೆಗೆ ತಲಾ ಓರ್ವರಂತೆ ಭದ್ರತಾ ಕಾವಲುಗಾರರನ್ನು ನಿಯುಕ್ತಿಗೊಳಿಸಲಾಗಿದೆ.

ತೂಕ ಮಾಡಿ ನೋಡಿ
ಆಹಾರ ವಿತರಣಾ ಪ್ರಮಾಣದ ಬಗ್ಗೆ ಸಂಶಯವಿದ್ದರೆ ದಯವಿಟ್ಟು ಕ್ಯಾಂಟೀನ್‌ನಲ್ಲಿ ಸ್ಥಾಪಿಸಿರುವ ಡಿಜಿಟಲ್‌ ತೂಕ ಯಂತ್ರದಲ್ಲಿ ಪರೀಕ್ಷಿಸಲು ಅವಕಾಶವಿದೆ. ಕ್ಯಾಂಟೀನ್‌ ಸೇವೆ ಉತ್ತಮಪಡಿಸಲು ನಾಗರಿಕರು ತಮ್ಮ ಅನಿಸಿಕೆಗಳನ್ನು ಇ-ಮೇಲ್‌ ಮಾಡಬಹುದು’ ಎಂಬ ಸೂಚನಾ ಫ‌ಲಕವನ್ನು ಕ್ಯಾಂಟೀನ್‌ ಗಳಲ್ಲಿ ಅಳವಡಿಸಲಾಗುತ್ತಿದೆ.

500 ಮಂದಿಗೆ ಕೂಪನ್‌
ಬೆಳಗ್ಗೆ 7.30ರಿಂದ ಇಂದಿರಾ ಕ್ಯಾಂಟೀನ್‌ ತೆರೆದುಕೊಳ್ಳುತ್ತದೆ. ಒಟ್ಟು 500 ಜನರಿಗೆ ಕೂಪನ್‌ ಇಲ್ಲಿ ನೀಡಲಾಗುತ್ತದೆ. ಯಾವುದಾದರು ಒಂದು ತಿಂಡಿಗೆ 5 ರೂ. ಪಾವತಿಸಬೇಕು. 500 ಜನರಿಗೆ ನೀಡಿದ ಅನಂತರ ಬೆಳಗ್ಗಿನ ಕಾರ್ಯಚಟುವಟಿಕೆಯನ್ನು ನಿಲ್ಲಿಸಲಾಗುತ್ತದೆ. ಬಳಿಕ ಮಧ್ಯಾಹ್ನ 12ರಿಂದ ಊಟದ ಚಟುವಟಿಕೆ ಆರಂಭವಾಗುತ್ತದೆ. 10 ರೂ. ಪಾವತಿಸಿ ಟೋಕನ್‌ ಪಡೆದು 500 ಜನರಿಗೆ ಊಟ ಸ್ವೀಕರಿಸಲು ವ್ಯವಸ್ಥೆ ಇದೆ. ರಾತ್ರಿ ಕೂಡ ಇದೇ ರೀತಿ
ಮುಂದುವರಿಯಲಿದೆ.
ಪ್ರಸನ್ನ,
  ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನ
  ನಿರ್ದೇಶಕರು.

 ದಿನೇಶ್‌ ಇರಾ

ಟಾಪ್ ನ್ಯೂಸ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್

Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

4

ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್‌

3

Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ

Kambala

Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

9

Udupi: ಬಿಎಸ್ಸೆನ್ನೆಲ್‌ ಟವರ್‌ ನಿರ್ವಹಣೆ ಹೊಣೆ ಪಂಚಾಯತ್‌ ಹೆಗಲಿಗೆ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

8

Hampankatte: ಸಿಟಿ ಮಾರ್ಕೆಟ್‌ ರಸ್ತೆಗೆ ಬೇಕಿದೆ ಕಾಯಕಲ್ಪ

7

Mangaluru: ಪಿ.ಎಂ. ರಾವ್‌ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.