ಪುತ್ತೂರಿನಲ್ಲಿ ಇಂದಿರಾ ಕ್ಯಾಂಟೀನ್ ಶೀಘ್ರ ಆರಂಭ
Team Udayavani, Jan 12, 2018, 3:20 PM IST
ಪುತ್ತೂರು: ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಲು ರಾಜ್ಯ ಸರಕಾರ ನಿರ್ಧರಿಸಿದ್ದು, ಕ್ಯಾಂಟೀನ್ ಭಾಗ್ಯ ಪುತ್ತೂರಿಗೂ ಲಭಿಸಿದೆ. ಈ ನಿಟ್ಟಿನಲ್ಲಿ ನಗರದ ಹೃದಯ ಭಾಗದಲ್ಲಿ ಜಾಗ ಹುಡುಕುವ ಕೆಲಸ ಮಾಡಲಾಯಿತಾದರೂ ಕೊನೆಗೆ ಲಯನ್ಸ್ ಸೇವಾ ಮಂದಿರದ ಬಳಿ ಬಹುತೇಕ ಅಂತಿಮಗೊಳಿಸಲಾಗಿದೆ.
ಜಮೀನು ಮಂಜೂರು ಮಾಡುವ ಪ್ರಸ್ತಾಪ ತಾಲೂಕು ಆಡಳಿತದಿಂದ ರವಾನೆಯಾಗಿದೆ. ಇದು ಕೆಲವೇ ದಿನಗಳಲ್ಲಿ ಕಾರ್ಯಗತ ಗೊಂಡರೆ ಮುಂದಿನ ತಿಂಗಳುಗಳಲ್ಲಿ ಕ್ಯಾಂಟೀನ್ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ. ಕ್ಯಾಂಟೀನ್‌ಗೆ ಜಾಗ ಸೂಚಿಸುವಂತೆ ಜಿಲ್ಲಾಧಿಕಾರಿ ಕಚೇರಿಯಿಂದ ಬಂದ ಸೂಚನೆ ಪ್ರಕಾರ ತಾಲೂಕು ಕಂದಾಯ ಇಲಾಖೆ ಪರಿಶೀಲನೆ ನಡೆಸಿತ್ತು.
ಬಸ್ ನಿಲ್ದಾಣದ ಆಸುಪಾಸಿನಲ್ಲಿ ಪರಿಶೀಲಿಸಿದ್ದರೂ ಎಲ್ಲೂ ಕ್ಯಾಂಟೀನ್ ನಿರ್ಮಾಣಕ್ಕೆ ಸ್ಥಳಾವಕಾಶ ಸಿಕ್ಕಿರಲಿಲ್ಲ. ಪ್ರಸ್ತುತ ಸರಕಾರಿ ಆಸ್ಪತ್ರೆಯ ಪಕ್ಕದ ಸೈನಿಕ ಭವನ ರಸ್ತೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪಕ್ಕದಲ್ಲಿ ಜಾಗ ಗುರುತಿಸಿ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗಿದೆ.
8 ಸೆಂಟ್ಸ್ ಜಾಗ
ಇಲ್ಲಿರುವ 8 ಸೆಂಟ್ಸ್ ನಿವೇಶನದಲ್ಲಿ 4 ಸೆಂಟ್ಸ್ ಕಂದಾಯ ಇಲಾಖೆಗೆ ಸೇರಿದ್ದಾಗಿದ್ದು, ಉಳಿದ 4 ಸೆಂಟ್ಸ್ ಖಜಾ
ನೆಗೆ ಸೇರಿದೆ. ಇವೆರಡನ್ನೂ ಸೇರಿಸಿ ಇಂದಿರಾ ಕ್ಯಾಂಟೀನ್‌ಗೆ ಮಂಜೂರು ಮಾಡಬಹುದಾಗಿದೆ ಎಂಬ ಪ್ರಸ್ತಾವನೆ
ಯನ್ನು ಕಂದಾಯ ಇಲಾಖೆ ಕಳುಹಿಸಿದೆ. ಪ್ರಸ್ತಾವನೆ ಮಂಜೂರಾದ ಬಳಿಕ ಜಮೀನನ್ನು ಸರಕಾರದ ನಿಯಮಾವಳಿಯಂತೆ ಇಂದಿರಾ ಕ್ಯಾಂಟೀನ್‌ಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಅನಂತರ ಕಟ್ಟಡ, ಕ್ಯಾಂಟೀನ್ ನಿರ್ವಹಣೆ ಇತ್ಯಾದಿಗಳನ್ನು ಟೆಂಡರ್ ಪಡೆದುಕೊಂಡ ಗುತ್ತಿಗೆದಾರರು ನಿರ್ವಹಿಸಲಿದ್ದಾರೆ.
ತಾಲೂಕು ಕೇಂದ್ರಗಳಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವ ಸಂಬಂಧ ತಿಂಗಳ ಹಿಂದೆಯೇ ಸರಕಾರ ಸೂಚನೆ ನೀಡಿತ್ತು. ನವೆಂಬರ್ ಕೊನೆಯ ಒಳಗೆ ಜಮೀನು ಗುರುತಿಸುವಂತೆ ಆಯಾ ತಾಲೂಕು ಕಂದಾಯ ಇಲಾಖೆಗೆ ಸೂಚನೆ ನೀಡಲಾಗಿತ್ತು. ಸೈನಿಕ ಭವನ ರಸ್ತೆಯಲ್ಲಿ 8 ಸೆಂಟ್ಸ್ ಜಾಗವನ್ನು ಇಂದಿರಾ ಕ್ಯಾಂಟಿನ್ ಗಾಗಿ ಕಂದಾಯ ಇಲಾಖೆ ಮಂಜೂರು ಮಾಡಿದೆ. ಆರ್‌ಟಿಸಿ ಮಾಡುವ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಹಶೀಲ್ದಾರ್ ಅನಂತ ಶಂಕರ ತಿಳಿಸಿದ್ದಾರೆ.
ಪ್ರಶಸ್ತ ಜಾಗಕ್ಕೆ ಒಲವು
ಇಂದಿರಾ ಕ್ಯಾಂಟೀನ್ ಜನರಿಗೆ ಸುಲಭವಾಗಿ ಸಿಗುವಂತಿರಬೇಕು ಎಂಬುದು ನಮ್ಮ ನಿಲುವು. ಇದಕ್ಕಾಗಿ
ಪ್ರಶಸ್ತ ಜಾಗ ಹುಡುಕುತ್ತಿದ್ದೆವು. ಮಿನಿ ವಿಧಾನಸೌಧ, ಕೋರ್ಟ್, ತಾ.ಪಂ. ಕಚೇರಿ, ನಗರಸಭಾ ಕಚೇರಿ, ಸರಕಾರಿ
ಆಸ್ಪತ್ರೆ, ಸರಕಾರಿ ಮಹಿಳಾ ಕಾಲೇಜು, ವಾರದ ಸಂತೆ ಎಲ್ಲವೂ ಇರುವ ಕಿಲ್ಲೆ ಮೈದಾನ ಸುತ್ತಲಿನ ಪ್ರದೇಶದಲ್ಲಿ
ಇಂದಿರಾ ಕ್ಯಾಂಟೀನ್ ಇದ್ದರೆ ಉತ್ತಮ ಎಂಬುದೇ ನಮ್ಮ ನಿಲುವು. ಜಾಗವೇ ಸಿಗದಿದ್ದರೆ ಸರಕಾರಿ ಆಸ್ಪತ್ರೆಯ
ಪಕ್ಕದಲ್ಲಾದರೂ ಮಾಡೋಣ ಎಂದು ಯೋಚಿಸಿದ್ದೆ. ಜನರಿಗೆ ಇದು ಪ್ರಯೋಜನ ನೀಡಬೇಕೆಂಬುದು ಆಶಯ.
– ಶಕುಂತಳಾ ಟಿ. ಶೆಟ್ಟಿ
ಶಾಸಕರು, ಪುತ್ತೂರು
ರಾಜೇಶ್ ಪಟ್ಟೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.