ಇಂದಿರಾ ಸಾಧನೆಯೇ ಮಹಿಳೆಯರಿಗೆ ಪ್ರೇರಣೆ
Team Udayavani, Nov 20, 2017, 10:48 AM IST
ಸಸಿಹಿತ್ಲು : ಭಾರತೀಯ ಮಹಿಳೆಯರಿಗೆ ಇಂದಿಗೂ ಇಂದಿರಾಗಾಂಧಿ ಅವರ ಸಾಧನೆ ಹಾಗೂ ನಾಯಕತ್ವವೇ ಪ್ರೇರಣೆ ಆಗಿದೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.
ಸಸಿಹಿತ್ಲಿನಲ್ಲಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿದ್ದ ದಿ| ಉದಯ ಶ್ರೀಯಾನ್ ಮನೆಯಲ್ಲಿ ಮೂಲ್ಕಿ ಮತ್ತು ಮೂಡಬಿದಿರೆ ಬ್ಲಾಕ್ ಮಹಿಳಾ ಕಾಂಗ್ರೆಸ್‌ನ ನೇತೃತ್ವದಲ್ಲಿ ನಡೆದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಆತ್ಮಾಭಿಮಾನ ಮೂಡಿಸುವ ಪ್ರಯತ್ನ
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾತನಾಡಿ, ಮಹಿಳೆಯರಲ್ಲಿ ಮಹಿಳೆಯರಿಂದಲೇ ಅತ್ಮಾಭಿಮಾನವನ್ನು ಮೂಡಿಸಬೇಕು ಎಂಬ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಬಗ್ಗೆಯೂ ಅಭಿಮಾನದ ಜತೆಗೆ ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ತ್ಯಾಗ ಮನೋಭಾವದ ಪರಿಚಯವಾಗಲಿದೆ ಎಂದರು.
ಕೆಪಿಸಿಸಿ ಸದಸ್ಯ ಎಚ್.ವಸಂತ ಬೆರ್ನಾಡ್, ಜಿಲ್ಲಾ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಲ್ಲಿ, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು, ಪ್ರಧಾನ ಕಾರ್ಯದರ್ಶಿ ಬಿ.ಎಂ. ಆಸಿಫ್, ಮೂಲ್ಕಿ ನಗರ ಪಂಚಾಯತ್ ಸದಸ್ಯ ಅಶೋಕ್ ಪೂಜಾರ್, ಹಳೆಯಂಗಡಿ ಗ್ರಾ.ಪಂ. ಸದಸ್ಯರಾದ ಮಾಲತಿ ಕೋಟ್ಯಾನ್, ಅಬ್ದುಲ್ ಅಜೀಜ್, ಚಂದ್ರ ಕುಮಾರ್, ಗುಣವತಿ, ಅನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ಮೂಲ್ಕಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ ಸ್ವಾಗತಿಸಿ, ಮೂಡಬಿದಿರೆ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.