“ಡೀಮ್ಡ್ ಫಾರೆಸ್ಟ್ ಪ್ರದೇಶಗಳ ಮಾಹಿತಿ ನೀಡಿ’
Team Udayavani, Jul 6, 2017, 3:45 AM IST
ಸುಳ್ಯ : ಸರಕಾರಿ ಜಾಗದಲ್ಲಿ ಡೀಮ್ಡ್ ಫಾರೆಸ್ಟ್ ಬಗ್ಗೆ ಅರಣ್ಯ ಇಲಾಖೆ ಗೊಂದಲ ಮೂಡಿಸುತ್ತಿದೆ. ಕೂಡಲೇ ಡೀಮ್ಡ್ ಪ್ರದೇಶಗಳ ವರದಿ ನೀಡುವಂತೆ ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಧುಕುಮಾರ್ ಅವರು ಅರಣ್ಯ ಇಲಾಖೆಗೆ ಸೂಚಿಸಿದ್ದಾರೆ.
ಬುಧವಾರ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರ ಅಧ್ಯಕ್ಷತೆಯಲ್ಲಿ ಜರಗಿದ ಕೆಡಿಪಿ ಸಭೆಯಲ್ಲಿ ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಡೀಮ್ಡ್ ಫಾರೆಸ್ಟ್ ವಿಷಯ ಪ್ರಸ್ತಾಪಿಸಿದರು. ಅರಣ್ಯ ಇಲಾಖೆ ತನ್ನೊಳಗಿನ ಗೊಂದಲದಿಂದ ಸಮಸ್ಯೆ ಸೃಷ್ಟಿಸುತ್ತಿದೆ. ಇದರಿಂದ ಸಾಮಾ ಜಿಕ ಸ್ವಾಸ್ಥ್ಯ ಹದಗೆಡುತ್ತಿದೆ ಎಂದು ಚರ್ಚೆಗೆ ಮುಂದಾದರು. ಇದಕ್ಕೆ ತಹಶೀಲ್ದಾರ್ ಕೂಡ ಧ್ವನಿಗೂಡಿಸಿ, ಈ ಬಗ್ಗೆ ಅರಣ್ಯ ಇಲಾಖಾಧಿಕಾರಿಗಳು ಸೂಕ್ತ ದಾಖಲೆಗಳನ್ನು ಕಂದಾಯ ಇಲಾಖೆಗೆ ನೀಡದ ಪರಿಣಾಮ ಹಲವು ಕಡೆ ಜಂಟಿ ಸರ್ವೇ ಕಾರ್ಯ ನಡೆಯುತ್ತಿಲ್ಲ ಎಂದು ಹೇಳಿದರು.
ಮರಗಳು ಹೆಚ್ಚಿರುವ ಸರಕಾರಿ ಜಾಗವನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸಲು ಸರಕಾರ ಕಾನೂನು ಮಾಡಿದೆ. ಆದರೆ ಅರಣ್ಯ ಇಲಾಖಾಧಿಕಾರಿಗಳು ಮರಗಳು ಇಲ್ಲದ ಕಡೆ ಇರುವ ಜಾಗವನ್ನು ಡೀಮ್ಡ್ ಫಾರೆಸ್ಟ್‌ಗೆ ಸೇರಿಸುತ್ತಿ¨ªಾರೆ. ಇದು ಹೇಗೆ ಸಾಧ್ಯ ಎಂದು ರಾಧಾಕೃಷ್ಣ ಬೊಳ್ಳೂರು ಪ್ರಶ್ನಿಸಿದರಲ್ಲದೇ ಅರಣ್ಯ ಇಲಾಖೆ ಕಾನೂನಿನ ವಿರುದ್ಧವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.
ಅರಣ್ಯ ಇಲಾಖೆ ಸೂಕ್ತ ದಾಖಲೆಗಳನ್ನು ಕೂಡಲೇ ನೀಡಿದ್ದಲ್ಲಿ ಕಂದಾಯ ಇಲಾಖೆ ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆಸಿ ಕೊಡಲಿದೆ. ಆದರೆ ಇಲ್ಲಿವರೆಗೆ ವರದಿ ಬಂದಿಲ್ಲ ಎಂದು ತಹಶೀಲ್ದಾರ್ ಎಂ.ಎಂ. ಗಣೇಶ್ ಹೇಳಿದರು. ಈ ಸಂದರ್ಭ ಡೀಮ್ಡ್ ಫಾರೆಸ್ಟ್ ಸ್ಥಳಗಳ ದಾಖಲೆಗಳನ್ನು ವಾರದೊಳಗಾಗಿ ಸಲ್ಲಿಸಲು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸೂಚಿಸಿದರು.
ಆರೋಗ್ಯ ಇಲಾಖೆ ನಿಗಾ
ತಾಲೂಕು ಆರೋಗ್ಯಾಧಿಕಾರಿ ಡಾ| ಸುಬ್ರಹ್ಮಣ್ಯ ಮಾತನಾಡಿ, ತಾಲೂಕಿನಲ್ಲಿ ವೈರಲ್ ಜ್ವರಗಳಿವೆ. ತಾಲೂಕಿನ ಎಡಮಂಗಲ, ಪಂಜದಲ್ಲಿ ಎಚ್1 ಎನ್1, ಡೆಂಗ್ಯೂ ಜ್ವರದ ಲಕ್ಷಣ ಕಂಡು ಬಂದಿದೆ. ಈ ಬಗ್ಗೆ ಆರೋಗ್ಯ ಇಲಾಖೆಯಿಂದ ಮಾಹಿತಿ, ಫಾಗಿಂಗ್, ಸ್ವತ್ಛತೆ ಕಾಪಾಡುವ ಕೆಲಸವಾಗುತ್ತಿದೆ. ಅಲ್ಲದೇ ಜ್ವರ ಪೀಡಿತ ಪ್ರದೇಶಗಳಿಗೆ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಿಂದ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಡೆಂಗ್ಯೂ, ಚಿಕೂನ್‌ಗುನ್ಯಾ, ಎಚ್1ಎನ್1, ಇಲಿಜ್ವರಗಳ ಬಗ್ಗೆ ನಿಗಾ ಇಟ್ಟಿದ್ದೇವೆ ಎಂದು ವಿವರಿಸಿದರು.
ತಿಂಗಳೊಳಗೆ ಸರ್ವೆ ಪೂರ್ಣ
ತಾ|ನಲ್ಲಿ ಕೆಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಆಗಿಲ್ಲ. ಈ ಮನೆ ಗಳನ್ನು ದೀನ್ ದಯಾಳ್ ವಿದ್ಯುತ್ ಯೋಜನೆಗೆ ಸೇರಿಸಿಕೊಳ್ಳಿ ಎಂದು ತಾ.ಪಂ. ಅಧ್ಯಕ್ಷರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ತಿಂಗಳೊಳಗೆ ಸರ್ವೆ ಕಾರ್ಯ ಪೂರ್ಣ ಗೊಳ್ಳಲಿದೆ. ಇದಕ್ಕಾಗಿ ಗ್ರಾ.ಪಂ.ಮತ್ತು ಪಿಡಿಒ ಅಧಿಕಾರಿಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳ ಮಾಹಿತಿ ಪಡೆಯುತ್ತಿದ್ದೇವೆ ಎಂದು ಮೆಸ್ಕಾಂ ಎಇಇ ದಿವಾಕರ್ ತಿಳಿಸಿದರು.
ಸಾಲ ಮನ್ನಾ : ವರದಿಗೆ ಕಳುಹಿಸಿ
ರೈತರ ಸಾಲ ಮನ್ನಾ ಯೋಜನೆ 20ನೇ ತಾರೀಕಿನೊಳಗೆ ಸಾಲ ಪಡೆದವರಿಗೆ ಮಾತ್ರ ಅನ್ವಯಿಸುತ್ತದೆ. ಆದರೆ ಸರಕಾರಿ ಬ್ಯಾಂಕ್‌ಗಳು ಹೊರಬಾಕಿ ಸಾಲದ ನೆಪವೊಡ್ಡಿ ರೈತರಿಗೆ ಅನ್ಯಾಯ ಮಾಡುತ್ತಿವೆ. ಈ ನೀತಿಯಿಂದ ಜಿಲ್ಲೆಯ ರೈತರಿಗೆ ಪ್ರಯೋಜನವಿಲ್ಲ. ಈ ಬಗ್ಗೆ ಸಹಕಾರಿ ಸಂಘಗಳು ವರದಿ ಮಾಡಿ ಸರಕಾರಕ್ಕೆ ಕಳುಹಿಸುವ ಕೆಲಸ ಮಾಡಬೇಕು ಎಂದು ಸ್ಥಾಯೀ ಸಮಿತಿ ಅಧ್ಯಕ್ಷರು ಒತ್ತಾಯಿಸಿದರು.
ಅಂಗನವಾಡಿಗಳಿಗೆ ಸಿಂಟೆಕ್ಸ್ ಟ್ಯಾಂಕ್ ಅಗತ್ಯವಿದೆ. ಈ ಬಗ್ಗೆ ಇಲಾಖೆಯಲ್ಲಿ ಅನುದಾನವಿಲ್ಲ. ಆದ್ದರಿಂದ ಅಲ್ಲಿನ ಪಂಚಾಯತ್‌ಗಳಿಗೆ ಪತ್ರ ಬರೆಯಲಾಗಿದೆ ಎಂದು ಪ್ರಭಾರ ಸಿ.ಡಿ.ಪಿ.ಒ. ಶೈಲಜಾ ಹೇಳಿದಾಗ ಪಂಚಾಯತ್‌ನಲ್ಲಿಯೂ ಹಣದ ಕೊರತೆ ಇದೆ. ನೀವು ಬೇರೆ ಮೂಲ ಗಳಿಂದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ರಾಧಾಕೃಷ್ಣ ಬೊಳ್ಳೂರು ಸಲಹೆ ನೀಡಿದರು.
ಇನ್ಮುಂದೆ ಮಕ್ಕಳಿಗೆ 3 ದಿನದ ಬದಲಾಗಿ 5 ದಿನ ಹಾಲು ನೀಡಲು ಸರಕಾರ ಮುಂದಾ ಗಿದೆ ಎಂದರು.
ಪ್ರೌಢಶಾಲಾ ಮಕ್ಕಳಿಗೆ ಸರಕಾರ ನೀಡಿದ ಸಮವಸ್ತ್ರದಲ್ಲಿ ಪ್ಯಾಂಟಿನ ಬಟ್ಟೆಯ ಗುಣಮಟ್ಟ ಕಳಪೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದರು. ಇದಕ್ಕೆ ಅಧ್ಯಕ್ಷರು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ನೀಡುವಂತೆ ಸಲಹೆ ನೀಡಿದರು. ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿಗಳು ಎಲ್ಲ ಶಾಲೆಗಳಿಂದ ವರದಿ ತರಿಸಿ ಇಲಾಖೆಗೆ ಕಳುಹಿಸಿ. ಮುಂದಿನ ಬಾರಿಗೆ ಗುಣಮಟ್ಟ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ ಎಂದು ಸೂಚಿಸಿದರು.
ಹಾಸ್ಟೆಲ್ ಪ್ರವೇಶಾತಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸರಿಯಾದ ದಾಖಲೆಗಳನ್ನು ಅರ್ಜಿ ಭರ್ತಿಮಾಡು ವಾಗ ನೀಡಿ ಎಂದು ಸಮಾಜ ಕಲ್ಯಾಣ ಅಧಿಕಾರಿ ಹೇಳಿದರು. ಸಮಾಜ ಕಲ್ಯಾಣ ಇಲಖೆಯ ಹಾಸ್ಟೆಲ್‌ಗಳಲ್ಲಿನ ವಾರ್ಡ್‌ನ್‌ಗಳ ಸಭೆ ನಡೆಸಬೇಕು ಎಂದು ಮಖ್ಯ ಕಾರ್ಯನಿವಾಹಣಾಧಿಕಾರಿ ಹೇಳಿದರು. ರಸ್ತೆಗಳ ತಾತ್ಕಾಲಿಕ ದುರಸ್ತಿಗೆ ಪ್ರಕೃತಿ ವಿಕೋಪದ ನಿಧಿ ಬಳಸಲು ಅವಕಾಶ ವಿರುವುದಾಗಿ ತಹಶೀಲ್ದಾರ್ ಮಾಹಿತಿ ನೀಡಿದರು.
ತಾ.ಪಂ. ಉಪಾಧ್ಯಕ್ಷೆ ಶುಭದಾ ಎಸ್. ರೈ, ತಹಶೀಲ್ದಾರ್ ಎಂ.ಎಂ. ಗಣೇಶ್ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ಕಾಂತಮಂಗಲ
ಸೇತುವೆ ಶಿಥಿಲ
ಕಾಂತಮಂಗಲ ಸೇತುವೆ ಶಿಥಿಲಗೊಂಡಿದೆ. ಅದು ವಾಹನಗಳ ಓಡಾಟ ಸಂದರ್ಭ ಕಂಪನ ಗೊಳ್ಳುತ್ತಿದೆ. ಕುಸಿದುಬೀಳುವ ಹಂತದಲ್ಲಿರುವುದಾಗಿ ಮಾಧ್ಯಮ ಗಳು ವರದಿ ಮಾಡುತ್ತಿವೆ. ಕುಸಿತಗೊಂಡರೆ ಸಂಪರ್ಕ ಕಡಿತ ವಾಗಬಹುದು. ಈಗಾಗಲೇ ಅಜ್ಜಾವರ -ಮಂಡೆಕೋಲುರ ಸ್ತೆಗೆ ಸಿಆರ್‌ಪಿಎಫ್ ಅನುದಾನದಲ್ಲಿ 6 ಕೋಟಿ ರೂ. ಬಿಡುಗಡೆಗೊಂಡಿದೆ. ರಸ್ತೆಯೊಂದಿಗೆ ಚರಂಡಿ, ಸೇತುವೆ ಗಳ ನಿರ್ಮಾಣದ ಅಗತ್ಯವೂ ನಡೆ ಯಬೇಕು. ದುರಸ್ತಿ ಬದಲು ಹೊಸ ಸೇತುವೆ ಅಗತ್ಯವಾಗಿದೆ. ಹೀಗಾಗಿ ತಾ.ಪಂ. ಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕಳುಹಿಸುವಂತೆ
ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಮಹೇಶ್ ಸಭೆಯಲ್ಲಿ ಪ್ರಸ್ತಾವಿಸಿ ಗಮನ ಸೆಳೆದರು. ಈ ಬಗ್ಗೆ ಅಧ್ಯಕ್ಷರು, ಸ್ಥಾಯೀ ಸಮಿತಿ ಅಧ್ಯಕ್ಷರಾದಿಯಾಗಿ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡರು. ಈಗಾಗಲೇ ಕೆವಿಜಿ ಶಿಕ್ಷಣ ಸಂಸ್ಥೆಯ ಪ್ರಮುಖ ತಾಂತ್ರಿಕ ಪರಿಣತರಿಂದ ತಾಂತ್ರಿಕ ಸ್ಥಿತಿಗತಿಯ ಅಧ್ಯಯನ ನಡೆಸಲಾಗಿತ್ತು. ಸಭೆಯಲ್ಲಿ ನಿರ್ಣಯ ಕೈಗೊಂಡರೆ ಒಳಿತು ಎಂದರು. ಈ ಬಗ್ಗೆ ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಬಜೆಟ್‌ನಲ್ಲಿ ಅನುದಾನ ಕಲ್ಪಿಸುವಂತೆ ತಾನು ಶಾಸಕರ ಗಮನ ಸೆಳೆದಿದ್ದೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.