ನಮ್ಮ ರಂಗಭೂಮಿ ಒಳಗೊಂದು ಪಯಣ…!


Team Udayavani, Mar 27, 2018, 7:07 PM IST

Rangabhoomi-27-3.jpg

ಮಂಗಳೂರು ಸ್ಮಾರ್ಟ್‌ ಆಗುತ್ತಿದೆ. ಅತ್ಯಾಧುನಿಕ ಊರಿಗೆ ರಂಗಭೂಮಿಯ ಬೆಳಕು ಬೇಕೋ ಬೇಡವೋ ಎಂಬ ಜಿಜ್ಞಾಸೆ ಇರಬಹುದು. ನಗರದೊಳಗಿನ ಬಿಸಿಯ ಬೇಗೆಯಿಂದ ಹೊರಬಂದವರಿಗೆ ತಂಪಿನ ಅನುಭವ ನೀಡಲು ರಂಗಭೂಮಿ ಬೇಕು.

ಇಂದು ‘ವಿಶ್ವ ರಂಗಭೂಮಿ ದಿನ’. ಬೇರೆ ಬೇರೆ ಭಾಷೆಯ ರಂಗಭೂಮಿಗಳು ದೇಶದ ಸಾಂಸ್ಕೃತಿಕ ಲೋಕದಲ್ಲೊಂದು ಹೊಸ ಅಲೆಯನ್ನು ಸೃಷ್ಟಿಸಲು  ಕಾರಣವಾಯಿತು. ಈ ನೆಲೆಯಲ್ಲಿ ಕರಾವಳಿಯ ರಂಗಭೂಮಿಯ ಪಯಣವನ್ನು ಪರಿಗಣಿಸಿದಾಗ ಹಲವು ಕುತೂಹಲ ಹಾಗೂ ವಿಸ್ಮಯಗಳು ಎದುರುಗೊಳ್ಳುತ್ತವೆ. ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯಲ್ಲಿ ಮೂಡಿಬಂದಿರುವ ಇಲ್ಲಿನ ರಂಗಭೂಮಿಯು ಸಾಕಷ್ಟು ಕೃಷಿ ಮಾಡಲು ಸಾಧ್ಯವಾಯಿತು. ಅದರಲ್ಲೂ ತುಳುರಂಗಭೂಮಿ ನಿರೀಕ್ಷೆಗೂ ಮೀರಿ ಸಾಧನೆಯ ಮನ್ವಂತರವನ್ನೇ ದಾಖಲಿಸಿತು. ಪರಿಣಾಮವಾಗಿ ನೂರಾರು ನಾಟಕ ತಂಡಗಳು ಹುಟ್ಟಿ-ಬೆಳೆದು ತಮ್ಮ ಸಾಧನೆ ತೋರಿದೆ. ತುಳು ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಮಾ. 24ರಿಂದ ಮಾ. 31ರ ವರೆಗೆ ನಗರದ ಪುರಭವನದಲ್ಲಿ ಸಂಜೆ 6ರಿಂದ ತುಳು ನಾಟಕ ಪರ್ಬ ಕೂಡ ಆಯೋಜನೆಗೊಂಡಿದೆ. 


ವಿಶೇಷವೆಂದರೆ ತುಳು ನಾಟಕಗಳ ಮೂಲಕ ಹತ್ತಾರು ತುಳು ಸಿನೆಮಾಗಳು ಇಂದು ಕೋಸ್ಟಲ್‌ ಲೋಕದಲ್ಲಿ ಸದ್ದುಮಾಡುತ್ತಿದೆ. ಆದರೆ, ಕನ್ನಡ ಹಾಗೂ ಕೊಂಕಣಿ ರಂಗಭೂಮಿಯಲ್ಲಿ ಬೆರಳೆಣಿಕೆ ನಾಟಕಗಳು ಬರುತ್ತಿದೆಯಾದರೂ ನಿರೀಕ್ಷೆಯಷ್ಟು ಇಲ್ಲ ಎಂಬುದು ಸ್ಪಷ್ಟ. ಸ್ಮಾರ್ಟ್‌ಸಿಟಿಯ ಹೊಂಗನಸಿನಲ್ಲಿರುವ ಮಂಗಳೂರಿನಲ್ಲಿ ವಿವಿಧ ಭಾಷೆಯ ರಂಗಭೂಮಿಗೆ ಯಾವ ರೀತಿಯ ಅವಕಾಶ ಹಾಗೂ ಸಾಧ್ಯತೆಗಳು ಇವೆ ಎಂಬುದರ ಬಗ್ಗೆ ರಂಗಭೂಮಿಯ ಮೂವರು ಹಿರಿಯ ಸಾಧಕ ಶ್ರೇಷ್ಠರು ಉದಯವಾಣಿ ‘ಸುದಿನ’ ಜತೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕನ್ನಡ ರಂಗಭೂಮಿ ಕ್ರಿಯಾಶೀಲವಾಗಲಿ: ಸದಾನಂದ ಸುವರ್ಣ

ಸ್ಮಾರ್ಟ್‌ಸಿಟಿಯ ತವಕದಲ್ಲಿರುವ ಮಂಗಳೂರಿನಲ್ಲಿ ಕನ್ನಡ ರಂಗಭೂಮಿಗೆ ಸರಿಯಾದ ಹಾಗೂ ಸೂಕ್ತವೆನಿಸುವ ಬೆಂಬಲ ದೊರೆಯುತ್ತಿಲ್ಲ. ಹೀಗಾಗಿ ಇಲ್ಲಿ ಕನ್ನಡ ರಂಗಭೂಮಿ ದೊಡ್ಡ ಮಟ್ಟದಲ್ಲಿ ಕ್ರಿಯಾಶೀಲವಾಗಿಲ್ಲ ಎಂಬ ಬೇಸರವಿದೆ. ಇದಕ್ಕಾಗಿ ಇನ್ನಷ್ಟು ಸಕ್ರಿಯವಾಗಬೇಕಿದೆೆ. ‘ಮಂಗಳೂರು ವ್ಯಾಪ್ತಿಯಲ್ಲಿ ತುಳುರಂಗಭೂಮಿಗೆ ಮಾತ್ರ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕೇವಲ ನಗುವಿಗಷ್ಟೇ ವಿಶೇಷ ಆದ್ಯತೆ. ಮನೋರಂಜನೆ ರಂಗಭೂಮಿಯ ಆದ್ಯತೆಯಾದರೂ ಮನೋವಿಕಾಸವೂ ಅಗತ್ಯವಿದೆ. ಇದಕ್ಕಾಗಿ ಕನ್ನಡ ಹಾಗೂ ತುಳು ರಂಗಭೂಮಿ ಎಂಬ ಬೇಧಭಾವ ತೋರದೆ ಎಲ್ಲರೂ ಜತೆಯಾಗಿ ಮುನ್ನಡೆಯಬೇಕಿದೆ’. ಇದೆಲ್ಲವನ್ನು ಸಮತೂಕದಿಂದ ನಿರ್ವಹಿಸಲು ಇಲ್ಲಿನ ಕಲಾವಿದರು ಹಾಗೂ ಪ್ರೇಕ್ಷಕ ವರ್ಗ ಹೆಚ್ಚಿನ ಆಸ್ಥೆ ವಹಿಸಬೇಕು. ಕನ್ನಡ ರಂಗಭೂಮಿ ಬೆಳೆಸುವ ಹಾಗೂ  ಪ್ರೇಕ್ಷಕ ವರ್ಗವನ್ನು ಸೃಷ್ಟಿಸುವ ಜವಾಬ್ದಾರಿ ನಿರ್ವಹಿಸಬೇಕಿದೆ.

50ರ ದಶಕದಲ್ಲಿ ನಾನು ರಂಗಭೂಮಿಗೆ ಬಂದಾಗ ಅತ್ಯಂತ ಪ್ರಬುದ್ಧ ಎಂಬ ನೆಲೆಗಟ್ಟಿನಲ್ಲಿ ಕನ್ನಡ ರಂಗಭೂಮಿ ಬೆಳೆದಿತ್ತು. ಸಾಕಷ್ಟು ನಾಟಕಗಳು ಮೂಡಿಬಂದಿದ್ದವು. ಆದರೆ, ಈ ದಿನಗಳಲ್ಲಿ ಆಸಕ್ತಿ ಕಡಿಮೆಗೊಳ್ಳುತ್ತಿರುವುದು ಒಳ್ಳೆಯದಲ್ಲ. ರಂಗಭೂಮಿ ಬೆಳೆದಿದ್ದರೂ, ಒಳ್ಳೆಯ ನಾಟಕ ಬರುತ್ತಿಲ್ಲ ಹಾಗೂ ಪ್ರೇಕ್ಷಕರಿಲ್ಲ ಎಂಬ ಆರೋಪ ನಿವಾರಣೆಯಾಗಬೇಕು. 

ಕೊಂಕಣಿ ರಂಗಭೂಮಿ; ಯುವಜನರು ಆಸಕ್ತರಾಗಲಿ: ಕಾಸರಗೋಡು ಚಿನ್ನಾ

ಕೊಂಕಣಿ ರಂಗಭೂಮಿ ಮಂಗಳೂರು ಆದಿಯಾಗಿ ನಿರೀಕ್ಷಿತ ಮಟ್ಟದಲ್ಲಿ ಬೆಳೆದಿಲ್ಲ ಎಂಬುದು ಸ್ಪಷ್ಟ. ಕೆಲವೇ ನಾಟಕಗಳು ಮೂಡಿಬಂದಿವೆ. ಯುವಜನರು ಇದರತ್ತ ಹೆಚ್ಚು ಒತ್ತು ನೀಡುವುದು ಅಗತ್ಯ. ಈ ನಿಟ್ಟಿನಲ್ಲಿ ಸರಕಾರ-ಪ್ರೇಕ್ಷಕರ ಪ್ರೋತ್ಸಾಹ ಮುಖ್ಯ. ಹಿಂದೆ ರಮಾನಂದ ಅವರು ಕೊಂಕಣಿ ರಂಗಭೂಮಿಗೆ ಹೊಸ ಬದುಕು ಕೊಟ್ಟಿದ್ದರು. ಬಳಿಕ ಮಂಗಳೂರಿನ ಡಾನ್‌ಬಾಸ್ಕೋದಲ್ಲಿ ಕೆಥೊಲಿಕ್‌ ಕ್ರಿಶ್ಚಿಯನ್ನರ ಮೂಲಕ ಹಾಗೂ ಮಾಂಡ್‌ಸೋಭಾಣ್‌ ಮೂಲಕ ನಾಟಕಗಳು ಪ್ರದರ್ಶಿತವಾಗಿವೆ. ಆದರೂ ಬೆರಳೆಣಿಕೆಯಷ್ಟೇ.ಹಲವು ಪ್ರಯೋಗಗಳನ್ನು ಕಾಣುವ ಮೂಲಕ ಹೊಸ ನಾಟಕಗಳು ಬರುವುದೂ ಕಡಿಮೆಯಾಯಿತು. ಹೀಗಾಗಿ ಇನ್ನಷ್ಟು ಕೃಷಿ ಆಗಬೇಕು. ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ವಿವಿಧ ಭಾಷೆಯ ಉತ್ತಮ ನಾಟಕಗಳನ್ನು ಕೊಂಕಣಿಗೆ ಭಾಷಾಂತರಿಸಬೇಕು. 
ಕೊಂಕಣಿ ನಾಟಕ ಮಾಡುವವರಿಗೆ ಎಲ್ಲ ವಿಧದ ಪ್ರೋತ್ಸಾಹ ನೀಡಬೇಕು. ಒಂದೊಂದು ನಾಟಕ ಪ್ರದರ್ಶನಕ್ಕೆ ಸಾವಿರಾರು ರೂ. ಖರ್ಚಾಗಲಿದ್ದು, ಆ ಕ್ಷೇತ್ರದ ಅಭಿವೃದ್ಧಿಯ ನೆಲೆಯಲ್ಲಿ ಸಹಕರಿಸ ಬೇಕಿದೆ. ಮರುಪ್ರದರ್ಶನಕ್ಕೆ ವೇದಿಕೆ ಕಲ್ಪಿಸಬೇಕು. ಹೊಸ ಕೊಂಕಣಿ ನಾಟಕಗಳು ಇನ್ನಷ್ಟು ಮೂಡಿಬರುವ ದೃಷ್ಟಿಯಲ್ಲಿ ಸರ್ವರೂ ಕ್ರಿಯಾಶೀಲವಾಗಬೇಕು.

ತುಳುರಂಗಭೂಮಿ; ಸ್ಪರ್ಧೆ ಇರಲಿ-ಮತ್ಸರ ಬೇಡ: ಡಾ| ಸಂಜೀವ ದಂಡಕೇರಿ

ರಂಗಭೂಮಿಯಲ್ಲೇ ಸಾಕಷ್ಟು ಹೆಸರು ಹಾಗೂ ಗೌರವದ ಜತೆಗೆ ತುಳುರಂಗಭೂಮಿ ಕರಾವಳಿ ಭಾಗದಲ್ಲಿ ಬಹುದೊಡ್ಡ ಮಾನ್ಯತೆ – ಸ್ಥಾನಮಾನ ಪಡೆದಿದೆ. ನಗರ ವ್ಯಾಪ್ತಿಯಲ್ಲಿ ಈ ಕುರಿತ ಆಸಕ್ತಿ ತುಸು ಕಡಿಮೆ ಇದ್ದರೂ ಒಟ್ಟು ಕರಾವಳಿ ಭಾಗದಲ್ಲಿ ಪ್ರಬುದ್ಧ ನೆಲೆಯಲ್ಲಿ ವಿರಾಜಮಾನವಾಗಿದೆ. ಹಲವು ನಾಟಕ ತಂಡಗಳ ಮೂಲಕ ನಾಟಕ ಹಾಗೂ ತುಳು ಚಲನಚಿತ್ರಗಳೂ ಮೂಡಿಬಂದಿವೆ. ನಾಟಕ ತಂಡಗಳ ಜತೆಗೆ ತಮ್ಮ ಕ್ರಿಯಾಶೀಲತೆಗಾಗಿ ಸ್ಪರ್ಧೆ ಇರಬೇಕು. ಆದರೆ ಯಾವುದೇ ಕಾರಣಕ್ಕೂ ಹಗೆತನ ಅಥವಾ ಮತ್ಸರ ಇರಕೂಡದು.


‘ತುಳುರಂಗಭೂಮಿ ಈಗ ಉನ್ನತ ಸಾಧನೆಯ ಮೂಲಕ ಗುರುತಿಸಿಕೊಂಡಿದ್ದು, ಇದರ ಪ್ರತಿಫಲವಾಗಿ ತುಳು ಸಿನೆಮಾ ಕೂಡ ಬಹುದೊಡ್ಡ ಆಯಾಮ ಪಡೆದುಕೊಂಡಿದೆ. ಒಬ್ಬರಿಗಿಂತ ಇನ್ನೊಬ್ಬರು ಉತ್ತಮವಾಗಿ ತುಳುರಂಗಭೂಮಿಯಲ್ಲಿ ಸಾಧನೆ ಬರೆಯಬೇಕು ಎಂಬ ಛಲ, ಹಠ ಬೇಕು. ಇದಕ್ಕಾಗಿ ಪೈಪೋಟಿ ನಡೆಯಬೇಕು. ಇದು ಆರೋಗ್ಯಕರವಾಗಿರಬೇಕು. ಹಾಗಾದಾಗ ಮಾತ್ರ ತುಳು ರಂಗಭೂಮಿ ಮತ್ತಷ್ಟು ಔನ್ನತ್ಯಕ್ಕೇರಲು ಸಾಧ್ಯ. ಇದನ್ನು ರಂಗಭೂಮಿಯ ಎಲ್ಲರೂ ಗಮನಿಸಬೇಕು.

ಒಂದು ಕಾಲದಲ್ಲಿ ತುಳುನಾಟಕಗಳು ನಡೆಯುವುದಾದರೆ, ಗ್ರಾಮಾಂತರ ಭಾಗದಲ್ಲಿ 2ರಿಂದ 3 ಸಾವಿರ ಮಂದಿ ಪ್ರೇಕಕರು ಸೇರುತ್ತಿದ್ದರು. ಒಂದು ಊರಿಗೆ ತುಳು ನಾಟಕ ಬರುವುದೆಂದರೆ ಅದು ಜಾತ್ರೆಯ ಅನುಭವ. ಆದರೆ, ನಗರೀಕರಣ ಬೆಳೆದಂತೆ ನಾಟಕಗಳು ಹಾಲ್‌ಗ‌ಳಿಗೆ ಬಂದು ಸೀಮಿತ ಜನರ ವ್ಯಾಪ್ತಿಗೆ ಸೇರಿತು. ಇಂದು ಕೆಲಸದ ಒತ್ತಡದಿಂದಾಗಿ ಮಂಗಳೂರು ವ್ಯಾಪ್ತಿಯಲ್ಲಿ ನಾಟಕ ನೋಡುವವರು ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ ಎಂದೇ ಹೇಳಬಹುದು.

ದಿನೇಶ್‌ ಇರಾ

ಟಾಪ್ ನ್ಯೂಸ್

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು

Maharashtra: ಕಾಂಗ್ರೆಸ್‌ ಬಂಡಾಯ ಸ್ಪರ್ಧಿಗಳು 6 ವರ್ಷ ಅಮಾನತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Mangalore: ವಂಚನೆ ಪ್ರಕರಣದಲ್ಲಿ ಭಾಗಿ ಆರೋಪಿಸಿ 30.65 ಲಕ್ಷ ರೂ. ಹಣ ವರ್ಗಾಯಿಸಿ ವಂಚನೆ

arest

Mangaluru: ಮಾದಕ ವಸ್ತು ಗಾಂಜಾ ಸೇವನೆ ಪ್ರತ್ಯೇಕ ಪ್ರಕರಣದಲ್ಲಿ ಮೂವರು ವಶಕ್ಕೆ

12

Mangaluru: ಅಕ್ರಮ ಮರಳುಗಾರಿಕೆ; ದೋಣಿಗಳು ವಶಕ್ಕೆ

15

Kinnigoli-ಹೊಸಕಾವೇರಿ: ಆಟೋರಿಕ್ಷಾ-ಲಾರಿ ಢಿಕ್ಕಿ

14

Mangaluru: ದನ ಕಳವು ಪ್ರಕರಣ; ಆರೋಪಿಗಳ ಬಂಧನ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HDK2

By Election: ಯೋಗೇಶ್ವರ್‌ ನಿಂದಿಸಿದ್ದ ಡಿ.ಕೆ.ಸುರೇಶ್‌ ಆಡಿಯೋ ಎಚ್‌ಡಿಕೆ ಬಿಡುಗಡೆ

DVS

By Election: ನಾಗೇಂದ್ರ, ಜಮೀರ್‌, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್‌

Dinesh-gundurao

Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್‌

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.