ವಿದ್ಯಾರ್ಥಿಗಳ ಆತಂಕ ನಿವಾರಣೆಗೆ ‘ಪರೀಕ್ಷಾಹಬ್ಬ’
Team Udayavani, Mar 22, 2019, 5:20 AM IST
ದೇರಳಕಟ್ಟೆ: ಗುರುವಾರದಿಂದ ಆರಂಭಗೊಂಡ ಎಸೆ ಸೆಲ್ಸಿ ಪರೀಕ್ಷೆಗೆ ಉಳ್ಳಾಲ ವ್ಯಾಪ್ತಿಯ ವಿವಿಧ ಶಾಲೆಯ ಪರೀಕ್ಷೆ ಕೇಂದ್ರಗಳಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಬಂಟ್ವಾಳ ತಾ| ಮೊಂಟೆ ಪದವು ಸರಕಾರಿ ಪ್ರೌಢಶಾಲೆ ಮತ್ತು ಮಂಗಳೂರು ತಾಲೂಕಿನ ದೇರಳಕಟ್ಟೆಯ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ‘ಪರೀಕ್ಷಾ ಹಬ್ಬ’ದ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸ್ವಾಗತಿಸಲಾಯಿತು.
ಪ್ರಥಮ ಪರೀಕ್ಷೆ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಮತ್ತು ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಪರೀಕ್ಷೆ ನಡೆದಿದ್ದು, ಮೊದಲ ದಿನದ ಪರೀಕ್ಷೆಯ ಆತಂಕದಲ್ಲಿ ಬಂದ ವಿದ್ಯಾರ್ಥಿಗಳಿಗೆ ಪರೀಕ್ಷೆ ಹಬ್ಬದಿಂದ ವಿದ್ಯಾರ್ಥಿಗಳಿಗೆ ಹೊಸ ಹುಮ್ಮಸು ನೀಡಿದರೆ, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಸ್ಥಳೀಯ ಗಣ್ಯರು ಶುಭ ಹಾರೈಸಿ ಸ್ವಾಗತಿಸಿದರು.
ಪರೀಕ್ಷಾ ಹಬ್ಬ
ಮೊಂಟೆಪದವು ಶಾಲೆಯಲ್ಲಿ ಪರೀಕ್ಷಾ ಹಬ್ಬದ ಅಂಗವಾಗಿ ಶಾಲೆಯನ್ನು ಬಣ್ಣದ ಕಾಗದಗಳಿಂದ ಮತ್ತು ತಳಿರು ತೋರಣ ಕಟ್ಟಿ ಶೃಂಗಾರಿಸಲಾಗಿತ್ತು. ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್. ನೇತೃತ್ವದಲ್ಲಿ ನಡೆದ ಶಾಲಾ ಹಬ್ಬದಲ್ಲಿ ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಉಪಹಾರ ವ್ಯವಸ್ಥೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹನೀಫ್ ಚಂದಹಿತ್ಲು ಮುನ್ನೂರು ಮಕ್ಕಳಿಗೆ ಪರೀಕ್ಷೆ ಬರೆಯಲು ಲೇಖನಿ ಕೊಡುಗೆಯಾಗಿ ನೀಡಿದರು.
ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಪ್ರಧಾನ ಅರ್ಚಕ ಶಂಕರ ಭಟ್ ಮಠ, ಬೋಳ ಸಂತ ಲಾರೆನ್ಸ್ ಚರ್ಚ್ ಧರ್ಮಗುರು ಮೈಕೆಲ್ ಡಿ’ಸೋಜಾ, ಮರಿಕ್ಕಳ ಜುಮ್ಮಾ ಮಸೀದಿ ಧರ್ಮಗುರು ಸಿದ್ದಿಕ್ ಸಅದಿ ಪರೀûಾರ್ಥಿಗಳಿಗೆ ಶುಭಾ ಕೋರಿದರು. ಕಾಲೇಜು ಪ್ರಿನ್ಸಿಪಾಲ್ ವನಿತಾ ದೇವಾಡಿಗ, ಪ್ರೌಢಶಾಲೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುರಳೀಧರ ಶೆಟ್ಟಿ ಮೋರ್ಲ, ಅಬ್ದುಲ್ಲ ಕೆ. ಕೊಡಂಚಿಲ್, ಜೋಸೆಫ್ ಕುಟ್ಟಿನ್ಹ, ಅಬ್ದುಲ್ ರಹಿಮಾನ್ ಚಂದಹಿತ್ಲು, ಉಮ್ಮರ್, ಎಡಂಬಲೆ ಗೋಪಾಲ ಭಟ್, ಸಹ ಶಿಕ್ಷಕ ರಾಜಪ್ಪ ಹಾಗೂ ಲಕ್ಷ್ಮಣ್ ಪಿ.ಎಸ್. ಉಪಸ್ಥಿತರಿದ್ದರು.
ಸರಕಾರಿ ಪ್ರೌಢಶಾಲೆ ಮೊಂಟೆಪದವು, ಅಲ್ ಮದೀನಾ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆ ಮಂಜನಾಡಿ ನರಿಂಗಾನ, ಸರಕಾರಿ ಪ್ರೌಢಶಾಲೆ ಕಲ್ಲರಕೋಡಿ ಹಾಗೂ ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರದ ವಿದ್ಯಾರ್ಥಿಗಳು ಸಹಿತ ಒಟ್ಟು ಮುನ್ನೂರು ಪರೀಕ್ಷಾರ್ಥಿಗಳನ್ನು ಬ್ಯಾಂಡ್ ಬಾರಿಸುವ ಮೂಲಕ ಸ್ವಾಗತಿಸಲಾಯಿತು.
ದೇರಳಕಟ್ಟೆ: ವಿಶೇಷ ದ್ವಾರ
ಮಂಗಳೂರು ತಾ| ದೇರಳಕಟ್ಟೆಯ ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿ ಸಲು ವಿಶೇಷವಾಗಿ ಕಲ್ಲಡ್ಕದ ಬೊಂಬೆಗಳು ಪರೀಕ್ಷೆಗೆ ಆಗಮಿಸುವ ವಿದ್ಯಾರ್ಥಿ ಗಳನ್ನು ಸ್ವಾಗತಿ ಸಿತು. ಶಾಲೆಯ ಮುಂಭಾ ಗದಲ್ಲಿ ವಿಶೇಷ ದ್ವಾರವನ್ನು ರಚಿಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿಹಾಬುದ್ಧೀನ್ ಮತ್ತು ಕಾರ್ಯದರ್ಶಿ ಸಂದೀಪ್ ಲೇಖನಿಯನ್ನು ನೀಡಿ ಶುಭಾ ಹಾರೈಸಿದರು.
ವಿನೂತನ ಪರೀಕ್ಷಾ ಹಬ್ಬ
ವಿದ್ಯಾರ್ಥಿಗಳಲ್ಲಿರುವ ಭಯದ ವಾತಾವರಣ ದೂರ ಮಾಡಿ ಅವರಲ್ಲಿ ಪರೀಕ್ಷಗೆ ಸ್ಫೂರ್ತಿ ತುಂಬುವ ನಿಟ್ಟಿನಲ್ಲಿ ಪರೀಕ್ಷಾ ಹಬ್ಬ ಸಹಕಾರಿಯಾಗಿದ್ದು, ಎಲ್ಲ ಧರ್ಮದ ಗಣ್ಯರ ಸಮ್ಮುಖದಲ್ಲಿ ವಿದ್ಯಾರ್ಥಿಗಳನ್ನು ಬರ ಮಾಡಿಕೊಳ್ಳುವ ಮೂಲಕ ವಿನೂತನವಾಗಿ ಪರೀಕ್ಷಾ ಹಬ್ಬವನ್ನು ಆಚರಿಸಲಾಯಿತು.
– ಸಂತೋಷ್ ಕುಮಾರ್ ಟಿ.ಎನ್.,
ಮುಖ್ಯ ಶಿಕ್ಷಕರು, ಸ.ಪ್ರೌ. ಶಾಲೆ ಮೊಂಟೆಪದವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.