ವಾಹನ ಚಾಲನೆಯ ನಿಯಂತ್ರಣಕ್ಕೆ ಫೈಬರ್‌ ಕೋನ್‌ಗಳ ಅಳವಡಿಕೆ 

Team Udayavani, May 21, 2018, 10:09 AM IST

21-may-3jpg.jpg

ಮಹಾನಗರ: ನಗರದಲ್ಲಿ ಸಂಚಾರ ದಟ್ಟಣೆಗೆ ವಾಹನ ಸಂಖ್ಯೆ ಏರಿಕೆಯ ಜತೆಗೆ ವಾಹನ ಚಾಲಕರು/ ಸವಾರರ ಅಡ್ಡಾದಿಡ್ಡಿ ಚಲನೆಯೂ ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ವಾಹನ ಗಳ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರವಿವಾರ ನಗರ ಸಂಚಾರಿ ಪೊಲೀ ಸರು ಅಗತ್ಯ ಸ್ಥಳಗಳಲ್ಲಿ ಫೈಬರ್‌ ಕೋನ್‌ ಗಳನ್ನು ಅಳವಡಿಸಿದರು.

ಮೇ 18ರಂದು ನಡೆದ ಪೊಲೀಸ್‌ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ವಾಹನಗಳಿಗೆ ನಿಯಂತ್ರಣ ಹೇರುವ ನಿಟ್ಟಿನಲ್ಲಿ ಕೋನ್‌ಗಳನ್ನು ಅಳವಡಿಸುವ ಸಾರ್ವಜನಿಕರಿಂದ ಬೇಡಿಕೆಗಳು ಕೇಳಿಬಂದಿ ದ್ದವು. ಮುಖ್ಯವಾಗಿ ನಗರದ ಪಾಂಡೇಶ್ವರ ರೈಲ್ವೇಗೇಟ್‌ ಹಾಗೂ ಬಾವುಟಗುಡ್ಡೆ ಬಸ್‌ಬೇಗಳಲ್ಲಿ ಕೋನ್‌ಗಳ ಅಳವಡಿಕೆಗೆ ಒತ್ತಾಯಿಸಿದ್ದರು.

ರಿಫ್ಲೆಕ್ಟರ್‌ಗಳ ಬಳಕೆ
ಕೆಲವೊಂದು ಪ್ರದೇಶಗಳಲ್ಲಿ ಕೋನ್‌ ಗಳಿದ್ದರೂ ಅವುಗಳು ಹಳತಾಗಿದ್ದವು. ಇನ್ನು ಕೆಲವು ಪ್ರದೇಶಗಳಲ್ಲಿ ಹೊಸದಾಗಿ ಕೋನ್‌ ಗಳನ್ನು ಅಳವಡಿಸಲಾಗಿದೆ. ಹೊಸದಾಗಿ ಕಾಮಗಾರಿ ನಡೆದ ಪ್ರದೇಶಗಳಲ್ಲೂ ಕೋನ್‌ಗಳ ಅಳವಡಿಕೆಯಾಗಿದೆ. ರಾತ್ರಿ ವೇಳೆಯೂ ವಾಹನ ಚಾಲಕರು ಕೋನ್‌ ಗಳನ್ನು ಗುರುತಿಸುವ ನಿಟ್ಟಿನಲ್ಲಿ ರಿಫ್ಲೆಕ್ಟರ್‌ ಗಳೂ ಇವೆ.

ಅಡ್ಡಾದಿಡ್ಡಿ ವಾಹನ ನಿಲುಗಡೆ
ಪಾಂಡೇಶ್ವರ ರೈಲ್ವೇಗೇಟ್‌ ಬಳಿ ಎರಡೂ ಬದಿಗಳಲ್ಲೂ ಕೋನ್‌ಗಳ ಅಳವಡಿಕೆಯಾಗಿದೆ. ಇಲ್ಲಿ ರೈಲು ಸಾಗುವ ಸಂದರ್ಭದಲ್ಲಿ ರೈಲ್ವೇ ಗೇಟ್‌ ಹಾಕಿ ವಾಹನ ಸಂಚಾರ ನಿಲ್ಲಿಸಲಾಗುತ್ತದೆ. ಆಗ ವಾಹನ ಚಾಲಕರು ವಿರುದ್ಧ ದಿಕ್ಕಿನಲ್ಲಿ ವಾಹನ ಸಾಗುವ ರಸ್ತೆಯಲ್ಲೂ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸುತ್ತಾರೆ. ಗೇಟ್‌ ತೆಗೆದ ತತ್‌ಕ್ಷಣ ಎಲ್ಲ ವಾಹನಗಳು ಏಕಕಾಲದಲ್ಲೇ ನುಗ್ಗುವುದರಿಂದ ಅನಗತ್ಯ ಟ್ರಾಫಿಕ್‌ ಜಾಮ್‌ ಕೂಡ ಸಂಭವಿಸುತ್ತದೆ.

ಹೀಗಾಗಿ ಕಳೆದ ಹಲವು ಸಮಯಗಳಿಂದ ಇಲ್ಲಿ ಬ್ಯಾರಿಕೇಡ್‌ ಗಳನ್ನು ಇಡುವಂತೆ ಬೇಡಿಕೆಗಳು ಕೇಳಿಬಂದಿತ್ತು. ಆದರೆ ಬ್ಯಾರಿಕೇಡ್‌ ಗಳಿಗೆ ಹೆಚ್ಚಿನ ಸ್ಥಳಾವಕಾಶ ಬೇಕಿದ್ದು, ಅದು ಸಂಚಾರಕ್ಕೂ ತೊಂದರೆಯಾಗುವ ಹಿನ್ನೆಲೆಯಲ್ಲಿ ಪ್ರಸ್ತುತ ಕೋನ್‌ಗಳನ್ನು ಅಳವಡಿಸಲಾಗಿದೆ.

ಇದರ ಜತೆಗೆ ಇತರ ಕಡೆಗಳಲ್ಲಿ ಪ್ರಯಾಣಿಕರನ್ನು ಪಿಕ್‌ಅಪ್‌ ಮಾಡುವ ಬಸ್‌ಗಳು ನಿಗದಿತ ಬಸ್‌ ಬೇನಲ್ಲೇ ನಿಲ್ಲಿಸುವಂತೆಯೂ ಕೋನ್‌ ಗಳ ಅಳವಡಿಕೆಯಾಗಿದೆ. ಡಿವೈಡರ್‌ ಗಳು, ಪಾದಚಾರಿಗಳಿಗೆ ನಡೆದಾಡಲು ಅನುಕೂಲವಾಗುವ ನಿಟ್ಟಿನಲ್ಲೂ ಕೋನ್‌ ಅಳವಡಿಕೆಯಾಗಿದೆ. 

ವಿವಿಧೆಡೆ ಅಳವಡಿಕೆ 
ರವಿವಾರ ಪೊಲೀಸರು ನಗರದ ಹಂಪನಕಟ್ಟೆ, ಆರ್‌ಟಿಒ ಕಚೇರಿ ಬಳಿ, ಪಾಂಡೇಶ್ವರ ರೈಲ್ವೇ ಗೇಟ್‌, ಕಾಶಿಯಾ ರಸ್ತೆ, ಜಿಎಚ್‌ಎಸ್‌ ರಸ್ತೆ, ಕರಾವಳಿ ವೃತ್ತ ಮೊದಲಾದ ಪ್ರದೇಶಗಳಲ್ಲಿ ಫೈಬರ್‌ ಕೋನ್‌ ಗಳನ್ನು ಅಳವಡಿಸಿದ್ದಾರೆ. ರವಿವಾರ ನಗರದಲ್ಲಿ ವಾಹನಗಳ ಸಂಚಾರ ಕಡಿಮೆ ಇರುವ ಹಿನ್ನೆಲೆಯಲ್ಲಿ ಕೋನ್‌ಗಳ ಅಳವಡಿಕೆಗೆ ಅನುಕೂಲವಾಗಿತ್ತು. 

ಟಾಪ್ ನ್ಯೂಸ್

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mine Tragedy: ಇಂದು ಮತ್ತೆ ಮೂರೂ ಮೃತದೇಹಗಳು ಪತ್ತೆ, ಐವರಿಗಾಗಿ ಮುಂದುವರೆದ ಕಾರ್ಯಾಚರಣೆ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Mangaluru Lit Fest: ಯಾವುದೇ ಉತ್ಸವ ಯಾಂತ್ರಿಕವಾದರೆ ಹೊಸತನ ಮೂಡಲ್ಲ: ಎಸ್.ಎಲ್ ಭೈರಪ್ಪ

Belagavi: Siblings clash over marijuana

Belagavi: ಗಾಂಜಾ ವಿಚಾರಕ್ಕೆ ಒಡಹುಟ್ಟಿದವರ ಗಲಾಟೆ; ಓರ್ವ ಸಾವು, ಮತ್ತೋರ್ವ ಗಂಭೀರ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

Mudhol: ಪ್ರಯಾಣಿಕರ ಉಪಯೋಗಕ್ಕೆ ಬಾರದ ತಂಗುದಾಣ… ಅಂಗಡಿ ಮುಂಗಟ್ಟಿನಿಂದ ಕಣ್ಮರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

22-uv-fusion

TEENAGE: ಹುಚ್ಚುಕೋಡಿ ಮನಸ್ಸಿಗೂ ಕಡಿವಾಣ ಬೇಕಿದೆ

21-uv-fusion

Ashram: ಹಿರಿಯ ಜೀವಗಳ ಶುಭಾಶೀರ್ವಾದ -ಸಾರ್ಥಕ ಭಾವ

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

20-uv-fusion

UV Fusion: ಪ್ರತೀ ಕ್ಷಣವೂ ಜೀವಿಸುವುದನ್ನು ಕಲಿ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.