ಅಂಗವಿಕಲ, ಹಿರಿಯ ನಾಗರಿಕರಿಗೆ ಸಲಕರಣೆ ವಿತರಿಸಲು ತಪಾಸಣೆ
Team Udayavani, Jul 21, 2017, 4:05 AM IST
ನಗರ: ಸರಕಾರದಿಂದ ಸಿಗುವ ಸವಲತ್ತುಗಳು ಅರ್ಹರಿಗೆ ತಲುಪುವ ವ್ಯವಸ್ಥೆಯಲ್ಲಿ ಸಂಘ ಸಂಸ್ಥೆಗಳು ತೊಡಗಿಸಿ ಕೊಳ್ಳುವುದು ಉತ್ತಮ ಬೆಳವಣಿಗೆ. ಅರ್ಹರು ತಮಗಿರುವ ಸವಲತ್ತುಗಳನ್ನು ಪಡೆಯುವಂತಾಗಬೇಕು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು.
ನಗರದ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ವಿಕಲಚೇತನರ ಪುನರ್‌ವಸತಿ ಕೇಂದ್ರ ಮಂಗಳೂರು, ಎಂ.ಆರ್.ಡಬ್ಲ್ಯು, ವಿ.ಆರ್. ಡಬ್ಲ್ಯು ತಾಲೂಕು ಒಕ್ಕೂಟದ ಸಹಯೋಗದಲ್ಲಿ ಹಿರಿಯ ನಾಗರಿಕರ ಸಂಘ ಪುತ್ತೂರು, ತಾ.ಪಂ., ಅಸಹಾಯಕರ ಸೇವಾ ಟ್ರಸ್ಟ್ ಸಹಕಾರದೊಂದಿಗೆ ಬಡತನ ರೇಖೆಗಿಂತ ಕೆಳಗಿರುವ ಅಂಗವಿಕಲ, ಹಿರಿಯ ನಾಗರಿಕರಿಗೆ ಸರಕಾರದಿಂದ ನೀಡಲಾಗುವ ವಿವಿಧ ಸಲಕರಣೆಗಳಿಗೆ ಫಲಾನುಭವಿಗಳ ಆಯ್ಕೆಗೆ ಲಯನ್ಸ್ ಸಭಾಂಗಣದಲ್ಲಿ ಗುರುವಾರ ಆಯೋಜಿ ಸಲಾದ ತಪಾಸಣೆ ಶಿಬಿರವನ್ನು ಅವರು ಉದ್ಘಾಟಿಸಿದರು.
ಅರಿವಿಲ್ಲದವರಿಗೆ ತಿಳಿಸಿ
ಮುಖ್ಯ ಅತಿಥಿಯಾಗಿದ್ದ ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ಅನೇಕ ಅಂಗವಿಕಲ, ಹಿರಿಯರಿಗೆ ತಮಗಿರುವ ಸೌಲಭ್ಯಗಳ ಕುರಿತು ಅರಿವಿರುವುದಿಲ್ಲ. ಅಂಥವರನ್ನು ಸಂಪರ್ಕಿಸಿ ತಿಳಿಸುವ ಕೆಲಸವನ್ನು ನಾವು ಮಾಡುವ ಮೂಲಕ ಸಹಕರಿಸಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಇಲಾಖೆಯ ಯೋಜನಾಧಿಕಾರಿ ಟಿ. ಶಾಂತಿ ಹೆಗ್ಡೆ, ಅಸಹಾಯಕರ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ನಯನಾ ರೈ, ಎಂ.ಆರ್.ಡಬ್ಲ್ಯು/ ವಿ.ಆರ್.ಡಬ್ಲ್ಯು ತಾಲೂಕು ಒಕ್ಕೂಟದ ನವೀನ್ ಕುಮಾರ್, ತಾಲೂಕು ಹಿರಿಯ ನಾಗರಿಕರ ಸಂಘದ ಕಾರ್ಯದರ್ಶಿ ಪೆಟ್ರಿಕ್ ಲೋಬೊ ಶುಭಹಾರೈಸಿದರು.
ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷ ಸುಂದರ ಗೌಡ, ಮಾಜಿ ಅಧ್ಯಕ್ಷರಾದ ಹರಿನಾರಾಯಣ ಹೊಳ್ಳ, ಗಣೇಶ್ ಶೆಟ್ಟಿ, ಕೃಷ್ಣ ಪ್ರಶಾಂತ್, ಲಯನೆಸ್ ನಿಕಟಪೂರ್ವ ಅಧ್ಯಕ್ಷ ಅನ್ನಪೂರ್ಣ ಎಸ್.ಕೆ. ರಾವ್, ಲಯನ್ ಹಿರಿಯ ನಾಗರೀಕರಾದ ಸುಬ್ರಹ್ಮಣ್ಯ ಕೊಳತ್ತಾಯ, ಚಿದಾನಂದ ಕಾಮತ್ ಕಾಸರಗೋಡು, ವತ್ಸಲಾ ರಾಜಿn, ಪ್ರೇಮಲತಾ ಟಿ. ರಾವ್, ಸವಿತಾ ಆರ್. ಭಟ್, ತಾಲೂಕು ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಜನಾರ್ದನ ಉಪಸ್ಥಿತರಿದ್ದರು.
ಜಿಲ್ಲಾ ವಿಕಲಚೇತನ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿ ಪಿ.ವಿ. ಸುಬ್ರಹ್ಮಣ್ಯ ಪ್ರಸ್ತಾವನೆಗೈದರು. ಲಯನ್ಸ್ ಅಧ್ಯಕ್ಷ ಆನಂದ ರೈ ಸ್ವಾಗತಿಸಿ, ಲಯನೆಸ್ ಅಧ್ಯಕ್ಷೆ ವಾಣಿಕೃಷ್ಣ ವಂದಿಸಿದರು. ಲಯನ್ಸ್ ಕಾರ್ಯದರ್ಶಿ ಗಣೇಶ್ ಶೆಟ್ಟಿ ಪಿ. ಮತ್ತು ಶಾರದಾ ಅರಸ್ ನಿರೂಪಿಸಿದರು.
ತಪಾಸಣಾ ಶಿಬಿರದಲ್ಲಿ ವೆನಾÉಕ್ ಆಸ್ಪತ್ರೆಯ ಪಿಸಿಯೋಥೆರಪಿ ಡಾ| ಶಬ್ನಮ್, ಕೆಎಂಸಿ ಆಸ್ಪತ್ರೆಯ ಡಾ| ಸುಶ್ಮಿತಾ ಹಾಗೂ ಡಾ| ಸಂಚಿತಾ ತಪಾಸಣೆ ನಡೆಸಿದರು. ಡಿ.ಡಿ. ಆರ್.ಸಿ.ಯ ಶ್ರವಣ ತಜ್ಞರಾದ ಶೋಭಿತಾ, ಮೃದುಲಾ, ವಿಶೇಷ ಶಿಕ್ಷಕ ಡಿ.ಎಸ್. ನಾಗರಾಳ, ಎಂ.ಆರ್. ಡಬ್ಲ್ಯು/ ವಿ.ಆರ್.ಡಬ್ಲ್ಯು ತಾಲೂಕು ಒಕ್ಕೂಟದ ಕಾರ್ಯಕರ್ತರು ಸಹಕರಿಸಿದರು. ಶಿಬಿರ ದಲ್ಲಿ 100ಕ್ಕೂ ಮಿಕ್ಕಿ ಫಲಾನುಭವಿಗಳು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.