ಹಡಗು ಯಾನಿಗಳ ತಪಾಸಣೆ
Team Udayavani, Feb 5, 2020, 6:15 AM IST
ಸಾಂದರ್ಭಿಕ ಚಿತ್ರ
ಪಣಂಬೂರು: ಕೊರೊನಾ ವೈರಸ್ ಬಗ್ಗೆ ಜಿಲ್ಲೆಯಲ್ಲಿ ಕಟ್ಟೆಚ್ಚರ ಇರುವ ಹಿನ್ನೆಲೆಯಲ್ಲಿ ನವ ಮಂಗಳೂರು ಬಂದರಿಗೆ ಮಂಗಳವಾರ ಮುಂಬಯಿಯಿಂದ ಆಗಮಿಸಿದ ಪ್ರವಾಸಿ ಹಡಗಿನ ಯಾನಿಗಳನ್ನು ತಪಾಸಣೆಗೆ ಒಳಪಡಿಸಲಾಯಿತು. ಇದಕ್ಕಾಗಿ ವಿಶೇಷ ತಪಾಸಣಾ ಘಟಕ ತೆರೆಯಲಾಗಿತ್ತು.
ಕ್ರೂಸ್ ಟರ್ಮಿನಲ್ ಒಳಗೆ ಪ್ರವೇಶಿಸುವ ಸಂದರ್ಭ ಸ್ಕ್ಯಾನಿಂಗ್ ಮಾಡಲಾಯಿತು. ಪ್ರವಾಸಿಗರು ಆಗಮಿಸುವ ಸಂದರ್ಭ ಸಾಮಾನ್ಯ ವೈದ್ಯಕೀಯ ನೆರವು ನೀಡಲಾಗುತ್ತದೆ. ಆದರೆ ಈ ಬಾರಿ ಕೊರೊನಾ ಕಟ್ಟೆಚ್ಚರ ಇರುವುದರಿಂದ ತಪಾಸಣೆ ಬಿಗಿಗೊಳಿಸಲಾಗಿತ್ತು ಎಂದು ಚೇರ್‌ಮನ್ ಎ.ವಿ. ರಮಣ ತಿಳಿಸಿದರು.
12ನೇ ಪ್ರವಾಸಿ ಹಡಗು
ನವಮಂಗಳೂರು ಬಂದರಿಗೆ ಈ ಸಾಲಿನಲ್ಲಿ ಆಗಮಿಸಿದ 12ನೇ ಪ್ರವಾಸಿ ಹಡಗು ಕೋಸ್ಟಾ ವಿಕ್ಟೋರಿಯಾ. 1,800 ವಿದೇಶಿ ಪ್ರವಾಸಿಗರು ಹಾಗೂ 786 ಸಿಬಂದಿ ಅದರಲ್ಲಿದ್ದಾರೆ. ನಗರದ ಶಾಪಿಂಗ್ ಮಾಲ್, ಪ್ರೇಕ್ಷಣೀಯ ಸ್ಥಳಗಳನ್ನು ವಿದೇಶಿ ಪ್ರವಾಸಿಗರು ಸಂದರ್ಶಿಸಿದರು. ಹಡಗು ಬಳಿಕ
ಕೊಚ್ಚಿಗೆ ಪ್ರಯಾಣ ಬೆಳೆಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.