ಟ್ರಾನ್ಸ್‌ಫಾರ್ಮರ್ ಕಂಬದ ಸುತ್ತ ತಡೆಬೇಲಿ ಅಳವಡಿಕೆ
Team Udayavani, Jun 16, 2019, 6:07 AM IST
ಗುರುಪುರ: ಗುರುಪುರ ಕೈಕಂಬದ ಮಾರುಕಟ್ಟೆ ಎದುರುಗಡೆಯ ಟ್ರಾನ್ಸ್‌ಫಾರ್ಮರ್ ಕಂಬಕ್ಕೆ ಮೈಉಜ್ಜಿ ಆಕಸ್ಮಿಕ ವಿದ್ಯುತ್ ಆಘಾತಕ್ಕೆ ಹಸು ಬಲಿಯಾದ ಘಟನೆಯ ಅನಂತರ ಎಚ್ಚೆತ್ತುಕೊಂಡ ಮೆಸ್ಕಾಂ ಕೊನೆಗೂ ಟ್ರಾನ್ಸ್‌ಫಾರ್ಮರ್ ಸುತ್ತ ಯಾರೂ ಸುಳಿಯದಂತೆ ತಡೆಬೇಲಿ ನಿರ್ಮಿಸಿದೆ.
ಶುಕ್ರವಾರ ಟ್ರಾನ್ಸ್‌ಫರ್ ಕಂಬಕ್ಕೆ ವೈತಿಕ್ಕಿ ಆಕಸ್ಮಿಕ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಜೆರ್ಸಿ ಹಸು ಬಲಿಯಾಗಿತ್ತು. ಟ್ರಾನ್ಸ್‌ಫಾರ್ಮರ್ ವಯರ್‌ನಿಂದ ವಿದ್ಯುತ್ ಸೋರಿಕೆಯಾಗಿ ಇಡೀ ಕಂಬವನ್ನು ಪ್ರವಹಿಸುತ್ತಿತ್ತು. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಜನ ಸಂಚಾರ ಹೆಚ್ಚಾಗಿರುವ ಇಲ್ಲಿನ ಟ್ರಾನ್ಸ್‌ಫಾರ್ಮರ್‌ಗೆ ಯಾವುದೇ ತಡೆ ಬೇಲಿ ಇರಲಿಲ್ಲ. ಹಸುವಿನ ಸಾವಿನಿಂದ ಎಚ್ಚೆತ್ತುಕೊಂಡ ಮೆಸ್ಕಾಂ ಇದೀಗ ಟ್ರಾನ್ಸ್‌ಫಾರ್ಮರ್ ಸುತ್ತ ಬೇಲಿ ಅಳವಡಿಸಿದೆ. ಇದೀ ರೀತಿ ಹಲವಾರು ಸ್ಥಳಗಳಲ್ಲಿ ಸಾರ್ವಜನಿಕರು-ಜಾನುವಾರುಗಳು ಸಂಚ ರಿಸುವ ಸ್ಥಳಗಳಲ್ಲಿ ಟ್ರಾನ್ಸ್‌ಫಾರ್ಮರ್ ಕಂಬ ಗಳಿದ್ದು, ಇವುಗಳಿಗೂ ಇದೇ ರೀತಿ ತಡೆ ಬೇಲಿ ನಿರ್ಮಿಸಿ ದುರಂತ ನಡೆಯದಂತೆ ನೋಡಿಕೊಳ್ಳಬೇಕೆನ್ನುವ ಆಗ್ರಹ ಕೇಳಿ ಬಂದಿದೆ.