ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ
ಬಸ್ ಮಾಲಕರ ಕ್ರಮಕ್ಕೆ ಪ್ರಯಾಣಿಕರು, ಪೊಲೀಸರ ಶ್ಲಾಘನೆ
Team Udayavani, Jan 25, 2022, 5:38 PM IST
ಮಹಾನಗರ: ಪ್ರಯಾಣಿಕರು ಮತ್ತು ಬಸ್‌ನ ಸುರಕ್ಷೆಯ ಉದ್ದೇಶದಿಂದ ನಗರದಲ್ಲಿ ಓಡಾಡುವ ಕೆಲವು ಸಿಟಿ ಬಸ್‌ಗಳಲ್ಲಿ ಬಸ್ ಮಾಲಕರು ಸಿಸಿ ಕೆಮರಾ ಅಳವಡಿಸಿದ್ದು ಇದು ಪ್ರಯಾಣಿಕರ ಮೆಚ್ಚುಗೆಗೆ ಕಾರಣವಾಗಿದೆ.
ಸ್ಟೇಟ್‌ಬ್ಯಾಂಕ್-ತಲಪಾಡಿ ನಡುವೆ ಸಂಚರಿಸುವ 2 ಹಾಗೂ ಶೇಡಿಗುರಿ-ಸ್ಟೇಟ್‌ಬ್ಯಾಂಕ್ ನಡುವೆ ಸಂಚರಿಸುವ ಒಂದು ಬಸ್‌ಗೆ ಈಗಾಗಲೇ ಸಿಸಿ ಕೆಮರಾ ಅಳವಡಿಸಲಾಗಿದ್ದು, ಇದರಿಂದಾಗಿ ಬಸ್ ಮಾಲಕರು, ನಿರ್ವಾಹಕರು ಮತ್ತು ಪ್ರಯಾಣಿಕರಿಗೂ ಅನುಕೂಲವಾಗಿದೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.
ರಾತ್ರಿ ವೇಳೆ ನಿಲ್ಲಿಸಲಾಗುವ ಬಸ್‌ಗಳ ಬ್ಯಾಟರಿ ಕಳ್ಳತನ ಮಾಡುವುದು, ಬಸ್‌ಗಳಿಗೆ ಹಾನಿ ಮಾಡುವುದು, ಪ್ರಯಾಣಿಕರ ಮೊಬೈಲ್ ಮತ್ತಿತರ ಸೊತ್ತುಗಳ ಕಳ್ಳತನ, ಮಹಿಳೆಯರಿಗೆ ಕಿರುಕುಳ ಮೊದಲಾದ ಸಂದರ್ಭ ಆರೋಪಿಗಳನ್ನು ಪತ್ತೆ ಮಾಡಲು ನೆರವಾಗುತ್ತಿವೆ.
ಒಮ್ಮೆ ಯಾವುದೋ ಒಂದು ಪ್ರಕರಣದ ಆರೋಪಿಯನ್ನು ಬೆನ್ನು ಹತ್ತಿ ಬಂದಿದ್ದ ಪೊಲೀಸರಿಗೆ ಆರೋಪಿ ಒಂದು ಸಿಟಿ ಬಸ್‌ನಲ್ಲಿ ಹೋಗಿರುವ ಮಾಹಿತಿ ದೊರೆಯಿತು. ಅನಂತರ ಆ ಸಿಟಿ ಬಸ್‌ನ ಸಿಸಿ ಕೆಮರಾ ಪರಿಶೀಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದರು. ಇನ್ನೊಂದು ಘಟನೆಯಲ್ಲಿ ಸಿಟಿ ಬಸ್ ನಿರ್ವಾಹಕನೊಂದಿಗೆ ವ್ಯಕ್ತಿಯೋರ್ವ ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದ ದೃಶ್ಯ ಕೂಡ ಸಿಸಿ ಕೆಮರಾದಲ್ಲಿ ದಾಖಲಾಗಿ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಲು ಅನುಕೂಲವಾಗಿದೆ. ಡೀಸೆಲ್ ಪಂಪ್ ರೀಡಿಂಗ್‌ನ ದೃಶ್ಯ ದಾಖಲಾಗುವುದರಿಂದಲೂ ನೆರವಾಗುತ್ತಿದೆ ಎನ್ನುತ್ತಾರೆ ಸಿಸಿ ಕೆಮರಾ ಅಳವಡಿಸಿರುವ ಬಸ್‌ನ ಮಾಲಕರು.
ಎಲ್ಲರಿಗೂ ಪ್ರಯೋಜನ
ನಮ್ಮ ಮಾಲಕರು ಒಂದು ಬಸ್‌ಗೆ ಸಿಸಿ ಕೆಮರಾ ಹಾಕಿಸಿದ್ದಾರೆ. ಇದರಿಂದ ಎಲ್ಲರಿಗೂ ಪ್ರಯೋಜನವಾಗಿದೆ. ಒಂದು ಕೆಮರಾ ಇಡೀ ಬಸ್‌ನ ದೃಶ್ಯ ಸೆರೆ ಹಿಡಿಯುತ್ತದೆ. ಸಿಸಿ ಕೆಮರಾದಲ್ಲಿ ದಾಖಲಾಗುವ ದೃಶ್ಯವನ್ನು ಮಾಲಕರು ಪರಿಶೀಲಿಸುತ್ತಾರೆ.
– ಅಲ್ವಿನ್, ಬಸ್ ಚಾಲಕರು
ಶ್ಲಾಘನೀಯ ನಡೆ
ಬಸ್, ಪ್ರಯಾಣಿಕರ ಸುರಕ್ಷೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿಸಿ ಕೆಮರಾ ಅಳವಡಿಸಿರುವುದು ಶ್ಲಾಘನೀಯ. ಮಹಿಳಾ ಪ್ರಯಾಣಿಕರಿಗೆ ಕಿರುಕುಳ, ಬಸ್‌ಗೆ ಹಾನಿ, ಪಿಕ್‌ಪಾಕೆಟ್ ಮೊದಲಾದ ಸಂದರ್ಭದಲ್ಲಿ ತ್ವರಿತ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗಲಿದೆ. ಇತರ ಬಸ್‌ಗಳ ಮಾಲಕರು ಕೂಡ ಇದೇ ರೀತಿ ಸಿಸಿ ಕೆಮರಾ ಅಳವಡಿಸಿದರೆ ಉತ್ತಮ.
– ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು ಮಂಗಳೂರು
-ಸಂತೋಷ್ ಬೊಳ್ಳೆಟ್ಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.