Mangaluru ಬೀದಿದೀಪ ಕಂಬಗಳ ಫ್ಯೂಸ್ ಬಾಕ್ಸ್‌ಗಳಿಗೆ ಟ್ರಿಪ್ಪರ್ ಅಳವಡಿಕೆ
Team Udayavani, Jun 29, 2024, 12:35 AM IST
ಮಂಗಳೂರು: ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪ ಕಂಬಗಳ ಫ್ಯೂಸ್ ಬಾಕ್ಸ್‌ಗಳಿಗೆ ಟ್ರಿಪ್ಪರ್ ಅಳವಡಿಸುವ ಕಾರ್ಯವನ್ನು ಪಾಲಿಕೆ ವಿದ್ಯುತ್ ಸರಬರಾಜು ವಿಭಾಗದ ಅಧಿಕಾರಿಗಳು ಮೆಸ್ಕಾಂ ಸಹಕಾರದೊಂದಿಗೆ ಕೈಗೊಂಡಿದ್ದಾರೆ.
ಸ್ಟೇಟ್‌ಬ್ಯಾಂಕ್ ಬಳಿಯ ರೊಸಾರಿಯೋ ಶಾಲೆಯ ಹಿಂಭಾಗದಲ್ಲಿ ರಸ್ತೆಯಲ್ಲಿ ತುಂಡಾಗಿ ಬಿದ್ದ ವಿದ್ಯುತ್ ತಂತಿಯಿಂದ ವಿದ್ಯುತ್ ಪ್ರವಹಿಸಿ ಆಟೋ ಚಾಲಕರಿಬ್ಬರು ಮೃತಪಟ್ಟ ಘಟನೆಯ ಹಿನ್ನೆಲೆಯಲ್ಲಿ ಬೀದಿದೀಪ ಕಂಬಗಳಿಗೂ ಟ್ರಿಪ್ಪರ್ ಅಳವಡಿಸುವಂತೆ ಜಿಲ್ಲಾಧಿಕಾರಿ ಪಾಲಿಕೆ ಅಧಿಕಾರಿಗಳಿಗೆ ಗುರುವಾರವೇ ಸೂಚನೆ ನೀಡಿದ್ದರು.
ಅದರಂತೆ ಮುಂಜಾಗ್ರತಾ ಕ್ರಮವಾಗಿ ಶುಕ್ರವಾರದಿಂದ ನಗರದ ಹಲವೆಡೆ ಸ್ಟ್ರೀಟ್ ಲೈಟ್ ಮೀಟರ್ ಬಾಕ್ಸ್‌ಗಳಲ್ಲಿ ಟ್ರಿಪ್ಪರ್‌ಗಳನ್ನು ಅಳವಡಿಸುವ ಕೆಲಸ ಆರಂಭಿಸಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ 1,600ಕ್ಕೂ ಅಧಿಕ ಫ್ಯೂಸ್‌ಗಳಿರುವ ಮೀಟರ್ ಬಾಕ್ಸ್‌ಗಳಿದ್ದು, ಮುಂದಿನ 3-4 ದಿನದೊಳಗೆ ಎಲ್ಲ ಕಡೆಗಳಲ್ಲಿ ಟ್ರಿಪರ್‌ಗಳನ್ನು ಅಳವಡಿಸಲಾಗುವುದು. ಇದರಿಂದ ವಿದ್ಯುತ್ ತಂತಿ ತುಂಡಾಗಿ ಬಿದ್ದಾಗ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ. ವಿದ್ಯುತ್ ತಂತಿ ತುಂಡಾಗಿ ಬಿದ್ದಿರುವುದು, ಜೋತಾಡುವುದು ಕಂಡು ಬಂದರೆ ಬಂದರೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುವಂತೆ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತೀಕ್ಷಾ ಶೆಟ್ಟಿ ಸಾವು ಪ್ರಕರಣ: ವಿದ್ಯುತ್ ಕಂಬ ಸ್ಥಳಾಂತರ
ಬೆಳ್ತಂಗಡಿ: ಶಿಬಾಜೆ ಬರ್ಗುಳ ಸಮೀಪ ಗುರುವಾರ ಸಂಜೆ ವಿದ್ಯುತ್ ಸ್ಪರ್ಶಿಸಿ ಪ್ರತೀಕ್ಷಾ ಶೆಟ್ಟಿ ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಘಟನೆಗೆ ಕಾರಣವಾದ ವಿದ್ಯುತ್ ಕಂಬವನ್ನು ಮೆಸ್ಕಾಂ ಇಲಾಖೆ ಜೂ. 28ರಂದು ಸ್ಥಳಾಂತರಿಸಿದೆ.
ಪ್ರತೀಕ್ಷಾ ಸಾವಿಗೀಡಾಗುವ ಮೊದಲು ಆನ್‌ಲೈನ್ ಡೆಲಿವರಿಗೆ ಬಂದಿದ್ದ ಯುವಕ ತೋಡಿನಲ್ಲಿ ನೀರಿನಹರಿವು ಹೆಚ್ಚಿದ್ದರಿಂದ ರಸ್ತೆಯಲ್ಲಿ ನಿಂತಿದ್ದ. ಮನೆಗೆ ಬರುತ್ತಿದ್ದರೆ ಆತನಿಗೆ ವಿದ್ಯುತ್ ಆಘಾತವಾಗುವ
ಸಾಧ್ಯತೆ ಇತ್ತು.
ಧರ್ಮಸ್ಥಳ ಸಬ್ ಸ್ಟೇಶನ್‌ನಿಂದ ಶಿಶಿಲ ವಿದ್ಯುತ್ ಪರಿವರ್ತಕಗಳಿಗೆ ಸಾಗುವ ಈ ಎಚ್.ಟಿ. ಮತ್ತು ಎಲ್. ಟಿ. ಲೈನ್ ಬಹಳಷ್ಟು ಅಪಾಯಕಾರಿ ಯಾಗಿದೆ. ಇದರ ನಿರ್ವಹಣೆಯೆಡೆಗೆ ಒತ್ತು ನೀಡುತ್ತಿದ್ದರೆ ಪ್ರತೀಕ್ಷಾ ಬದುಕುಳಿಯುತ್ತಿದ್ದಳು. ಇದೇ ಮಾರ್ಗವಾಗಿ ಇನ್ನಷ್ಟು ಅಪಾಯಕಾರಿ ವಿದ್ಯುತ್ ಕಂಬಗಳಿದ್ದು, ಅವುಗಳನ್ನೂ ಸ್ಥಳಾಂತರಿಸುವಂತೆ ಹಾಗೂ ಸೂಕ್ತ ನಿರ್ವಹಣೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಇಂದು ಶಾಸಕ ಪೂಂಜ ಭೇಟಿ
ಶಾಸಕ ಹರೀಶ್ ಪೂಂಜ ಅವರು ಕಾರ್ಯನಿಮಿತ್ತ ಬೆಂಗಳೂರಿನಲ್ಲಿದ್ದು, ಜೂ.29ರಂದು ಘಟನಾ ಸ್ಥಳಕ್ಕೆ ಹಾಗೂ ಪ್ರತೀಕ್ಷಾ ಮನೆಗೆ ಭೇಟಿ ನೀಡಲಿರುವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.