ಉಳ್ಳಾಲ, ಬಂಟ್ವಾಳದಲ್ಲಿಯೂ ಕಸ ವಿಂಗಡಣೆಗೆ ಪಾಲಿಕೆಯಿಂದ ಸೂಚನೆ

ಕಸ ವಿಂಗಡಿಸದಿದ್ದರೆ ಪಚ್ಚನಾಡಿಗೆ ತ್ಯಾಜ್ಯ ತರುವಂತಿಲ್ಲ; ಪಾಲಿಕೆ ಮಹತ್ವದ ನಿರ್ಧಾರ

Team Udayavani, Oct 28, 2020, 10:18 PM IST

ಉಳ್ಳಾಲ, ಬಂಟ್ವಾಳದಲ್ಲಿಯೂ ಕಸ ವಿಂಗಡಣೆಗೆ ಪಾಲಿಕೆಯಿಂದ ಸೂಚನೆ

ಮೇಯರ್‌ ದಿವಾಕರ್‌ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಸಮ ರ್ಪಕಗೊಳಿಸಲು ಹಸಿ ಕಸ- ಒಣ ಕಸ ವಿಂಗಡಣೆಯನ್ನು ಕಟ್ಟುನಿಟ್ಟಾಗಿ ಜಾರಿ ಗೊಳಿಸಲಾಗಿದ್ದು, ಇದೇ ಮಾದರಿ ನಿಯಮವನ್ನು ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ಗೆ ತ್ಯಾಜ್ಯ ತರುತ್ತಿರುವ ಬಂಟ್ವಾಳ, ಉಳ್ಳಾಲ, ಕೋಟೆಕಾರು ಸಹಿತ 15 ಗ್ರಾ. ಪಂ.ಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಪಾಲಿಕೆ ನಿರ್ಧಾರ ಕೈಗೊಂಡಿದೆ.

ಮೇಯರ್‌ ದಿವಾಕರ್‌ ಪಾಂಡೇಶ್ವರ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಕಸ ವಿಂಗಡನೆ ಮಾಡದೆ ಪಚ್ಚನಾಡಿಗೆ ತ್ಯಾಜ್ಯ ತಂದರೆ ಪಚ್ಚನಾಡಿ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ ಎಂದು ಮೇಯರ್‌ ಸೂಚಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾತನಾಡಿ, ಪಾಲಿಕೆ ವ್ಯಾಪ್ತಿಯ ವಾರ್ಡ್‌ ಗಳಲ್ಲಿ ಈಗಾಗಲೇ ಮನೆಗಳಿಂದ ತ್ಯಾಜ್ಯ ವಿಂಗಡಿಸಿ ಸಂಗ್ರಹಿಸಲಾಗುತ್ತಿದೆ. ಇದೀಗ ಬಂಟ್ವಾಳ, ಉಳ್ಳಾಲ, ಕೋಟೆಕಾರು ಹಾಗೂ ಇತರ 15 ಗ್ರಾ.ಪಂ.ಗಳ ತ್ಯಾಜ್ಯವನ್ನು ಕೂಡ ವಿಂಗಡಿಸಿಯೇ ವಿಲೇವಾರಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಆಡಳಿತ ಸಂಸ್ಥೆಯವರಿಗೆ ಪತ್ರ ಮುಖೇನ ತಿಳಿಸಲಾಗುವುದು. ಅವರು ಪಾಲಿಕೆಗೆ ನೀಡಬೇಕಾದ ಬಾಕಿ ಮೊತ್ತ ಪಾವತಿಸುವಂತೆ ಪತ್ರದಲ್ಲಿ ತಿಳಿಸಲಾಗುವುದು ಎಂದರು.

ಸಮರ್ಪಕ ಪರಿಹಾರ ದೊರೆಯಲಿ
ಸಭೆಯ ಆರಂಭದಲ್ಲಿ ಮೇಯರ್‌ ದಿವಾಕರ್‌ ಮಾತನಾಡಿ, ಪಚ್ಚನಾಡಿ ತ್ಯಾಜ್ಯ ಕುಸಿತವಾದ ಮಂದಾರ ಪ್ರದೇ ಶದ ಸಂತ್ರಸ್ತರಿಗೆ ಪರಿಹಾರ ನೀಡುವ ಸಲುವಾಗಿ ಸರಕಾರದಿಂದ 20 ಕೋ. ರೂ. ಬಿಡುಗಡೆಯಾಗಿದೆ ಎಂದರು. ಮಾಜಿ ಮೇಯರ್‌ ಭಾಸ್ಕರ್‌ ಕೆ. ಮಾತ ನಾಡಿ, ಅನುದಾನ ಬಿಡುಗಡೆ ಮಾಡಿ ದ್ದಕ್ಕೆ ಅಭಿನಂದನೆಗಳು. ಸಂತ್ರಸ್ತರಿಗೆ ಮೌಲ್ಯಯುತ ಪರಿಹಾರ ನೀಡಬೇಕು. ತಾತ್ಕಾಲಿಕ ವಸತಿ ಸಮುಚ್ಚಯದಲ್ಲಿ ವಾಸಿ ಸುತ್ತಿರುವವರಿಗೆ ಬಾಡಿಗೆ ರಹಿತವಾಗಿ ನೀಡಬೇಕು. ತಾರತಮ್ಯ ಮಾಡಬಾರದು. ಈಗ ಕೆಲವರಿಗೆ ಜಾಸ್ತಿ, ಕಡಿಮೆ ಆಗಿದೆ ಎಂಬ ಮಾತೂ ಇದೆ ಎಂದರು.

ಪಾಲಿಕೆ ಹೊರಗಿನ ತ್ಯಾಜ್ಯ ನಿಷೇಧಿಸೋಣ
ವಿಪಕ್ಷ ನಾಯಕ ಅಬ್ದುಲ್‌ ರವೂಫ್ ಮಾತನಾಡಿ, ಮಂದಾರ ವಿಷಯದಲ್ಲಿ ಸರಕಾರ ಪರಿಹಾರ ನೀಡುವಲ್ಲಿ ವಿಳಂಬ ಮಾಡಿದಾಗ ಸಂತ್ರಸ್ತರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಸಂದರ್ಭ ನ್ಯಾಯಾ ಲಯ ಪಾಲಿಕೆಗೆ ಛೀಮಾರಿ ಹಾಕಿದ್ದಲ್ಲದೆ, ಪಾಲಿಕೆಯ ಸೊತ್ತನ್ನು ಅಡ ವಿಟ್ಟಾದರೂ ಪರಿಹಾರ ನೀಡಬೇಕು ಎಂದು ಆದೇಶಿಸಿ ದಾಗ ಸರಕಾರ ಅನಿವಾರ್ಯವಾಗಿ ಪರಿಹಾರ ನೀಡಲೇಬೇಕಾದ ಪರಿಸ್ಥಿತಿ ಎದು ರಾಯಿತು. ಇಂತಹ ಪರಿಸ್ಥಿತಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಮಹಾನಗರ ಪಾಲಿಕೆ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಬಿಜೆಪಿ ಸದಸ್ಯ ಸುಧೀರ್‌ ಶೆಟ್ಟಿ ಕಣ್ಣೂರು ಮಾತನಾಡಿ, ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಲ್ಲಿ 20 ವರ್ಷಗಳಿಂದ 6 ಲಕ್ಷ ಮೆಟ್ರಿಕ್‌ ಟನ್‌ ಕಸ ತುಂಬಿದೆ. ಪಾಲಿಕೆಯ ಹೊರಗಿನ ಪ್ರದೇಶದಿಂದ ಇಲ್ಲಿಗೆ ಕಸ ಬರುತ್ತಿರುವುದರಿಂದ ಈ ಸಮಸ್ಯೆ ಅಧಿಕವಾಗಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ಸದಸ್ಯರಾದ ಅಬ್ದುಲ್‌ ರವೂಫ್‌, ಎಂ. ಶಶಿಧರ ಹೆಗ್ಡೆ , ನಾಳೆಯಿಂದ ಪಾಲಿಕೆ ವ್ಯಾಪ್ತಿಯ ಹೊರಗಿನ ನಗರದಿಂದ ಬರುವ ತ್ಯಾಜ್ಯವನ್ನು ಸಂಪೂ ರ್ಣವಾಗಿ ನಿಷೇಧಿಸೋಣ ಎಂದರು.

ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾತನಾಡಿ, “ತತ್‌ಕ್ಷಣ ಹೊರಗಿನಿಂದ ಬರುವ ತ್ಯಾಜ್ಯ ನಿಲ್ಲಿಸಿದರೆ ಅವರಿಗೂ ತೊಂದರೆ ಆಗಲಿದೆ. ಹಾಗಾಗಿ ಕಾಲಾವಕಾಶ ನೀಡಿ ಕ್ರಮ ಕೈಗೊಳ್ಳಬಹುದಾಗಿದೆ. ಹೀಗಾಗಿ ಶೇ. 100ರಷ್ಟು ಕಸ ವಿಂಗಡಿಸಿಯೇ ಪಚ್ಚನಾಡಿಗೆ ತರುವಂತೆ ಸಂಬಂಧಪಟ್ಟ ನಗರದ ಆಡಳಿತದವರಿಗೆ ನೋಟಿಸ್‌ ನೀಡಲಾಗುವುದು ಎಂದರು. ಉಪ ಮೇಯರ್‌ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷರಾದ ಶರತ್‌ ಕುಮಾರ್‌, ಪೂರ್ಣಿಮಾ, ಕಿರಣ್‌ ಕುಮಾರ್‌, ಜಗದೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ವಾರದ ಎಲ್ಲ ದಿನ ಹಸಿ ಕಸ ಸಂಗ್ರಹಿಸಿ
ಹಸಿಕಸವನ್ನು ವಾರದ ಎಲ್ಲ ದಿನವೂ ಕೊಂಡೊಯ್ಯಬೇಕು. ಇಲ್ಲವಾದರೆ, ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುವ ಪ್ರಮೇಯ ಎದುರಾಗಲಿದೆ. ಹಸಿ ತ್ಯಾಜ್ಯ ಸಂಸ್ಕರಣೆ ಯಂತ್ರವನ್ನು ಅಲ್ಲಲ್ಲಿ ಪರಿಚಯಿಸಬೇಕು ಎಂದು ನವೀನ್‌ ಡಿ’ಸೋಜಾ ತಿಳಿಸಿದರು. ಸುಧೀರ್‌ ಶೆಟ್ಟಿ ಮಾತನಾಡಿ, ವಸತಿ ಸಮುಚ್ಚಯದಲ್ಲಿ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು. ಭಾಸ್ಕರ್‌ ಮಾತನಾಡಿ, ಶುಕ್ರವಾರ ಹಸಿ ತ್ಯಾಜ್ಯ ಕೊಂಡೊಯ್ಯದ ಕಾರಣದಿಂದ ಮನೆ ಕೆಲಸಕ್ಕೆ ಹೋಗುವವರಿಗೆ ತ್ಯಾಜ್ಯ ವಿಲೇವಾರಿ ಮಾಡುವುದು ಈಗ ಸಮಸ್ಯೆ ಆಗಿದೆ ಎಂದರು.

ಅಭಿವೃದ್ಧಿ ಯಲ್ಲಿ ರಾಜಕೀಯ: ವಾಗ್ವಾದ!
ಮಾಜಿ ಮೇಯರ್‌ ಭಾಸ್ಕರ್‌ ಕೆ. ಮಾತನಾಡಿ, ಇತ್ತೀಚೆಗೆ ಅಳಕೆ ಮಾರುಕಟ್ಟೆ ಉದ್ಘಾಟನೆ ಸಂದರ್ಭ ಶಿಷ್ಟಾಚಾರದ ಪ್ರಕಾರ ವಿಪಕ್ಷ ನಾಯಕರ ಭಾವಚಿತ್ರವನ್ನು ಫ್ಲೆಕ್ಸ್‌ ನಲ್ಲಿ ಹಾಕಿಲ್ಲ. ನಾವು ಸುದೀರ್ಘ‌ ವರ್ಷ ಆಡಳಿತ ಮಾಡಿದ್ದರೂ ವಿಪಕ್ಷವನ್ನು ಯಾವತ್ತೂ ಕಡೆಗಣಿಸಿಲ್ಲ. ಪಾಲಿಕೆಯಲ್ಲಿ ಕೆಲವು ಸಭೆ ನಡೆಸಲಾದರೂ ವಿಪಕ್ಷವನ್ನು ಕರೆಯುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು. ಮಾಜಿ ಮೇಯರ್‌ ಎಂ. ಶಶಿಧರ ಹೆಗ್ಡೆ ಮಾತನಾಡಿ, ಹಿಂದಿನಿಂದಲೂ ಪಾಲಿಕೆಯ ಆಡಳಿತ ವಿಚಾರದಲ್ಲಿ ಶಿಷ್ಟಾಚಾರದ ಪ್ರಕಾರ ವಿಪಕ್ಷಕ್ಕೆ ಗೌರವ ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಆಡಳಿತದಲ್ಲಿ ಪಕ್ಷದ ಜಿಲ್ಲಾಧ್ಯಕ್ಷರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಾರೆ. ಆದರೆ ವಿಪಕ್ಷ‌ ನಾಯಕರನ್ನು ಕರೆಯದೆ ಶಿಷ್ಟಾಚಾರ ನಿಯಮ ಗಾಳಿಗೆ ತೂರಿದ್ದಾರೆ ಎಂದು ಆಕ್ಷೇಪಿಸಿದರು. ಈ ಸಂದರ್ಭ ಕೆಲವು ನಿಮಿಷಗಳ ಕಾಲ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಶಿಷ್ಟಾಚಾರ ಪಾಲಿಸುವಂತೆ ಮೇಯರ್‌ ಅಧಿಕಾರಿಗಳಿಗೆ ಸೂಚಿಸಿದರು.

ಟಾಪ್ ನ್ಯೂಸ್

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

H1-B visa: ಭಾರತೀಯರ ದುಗುಡಕ್ಕೆ ಟ್ರಂಪ್‌ ತೆರೆ!

Mumbai: Third part of the knife used to attack Saif found near Bandra Lake

Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kotekar-Robbery

Kotekar Robbery Case: ಮುಂಬಯಿ, ತಮಿಳುನಾಡಿನಲ್ಲಿ ಮತ್ತೆ ನಾಲ್ವರು ವಶಕ್ಕೆ?

Kotekar-Robb-Police

Kotekar Robbery: ಮುರುಗೆಂಡಿಗೆ ಚಿನ್ನ ಮತ್ತು ಫಿಯೆಟ್‌ನದ್ದೇ ಮೋಹ !

Canara

Mangaluru: ಕೆನರಾ ಶಿಕ್ಷಣ ಸಂಸ್ಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪ

money-Currency

Mangaluru: ವ್ಯವಹಾರ ಮನಸ್ತಾಪ: ಹಣಕ್ಕಾಗಿ ಬೆದರಿಕೆ, ದೂರು ದಾಖಲು

Karnataka Sports Meet: ಈಜು… ಚಿಂತನ್‌ ಶೆಟ್ಟಿ , ರಚನಾ ಬಂಗಾರ ಬೇಟೆ

Karnataka Sports Meet: ಈಜು… ಚಿಂತನ್‌ ಶೆಟ್ಟಿ , ರಚನಾ ಬಂಗಾರ ಬೇಟೆ

MUST WATCH

udayavani youtube

ಕಡಿಮೆ ಜಾಗದಲ್ಲಿ ಉತ್ತಮ ಅನಾನಸ್ ಕೃಷಿ ಮಾಡಲು ಇಲ್ಲಿದೆ ಮಾಹಿತಿ

udayavani youtube

ಮಂಗಳೂರು | ಸ್ಥಳೀಯ ಮನೆಯಂಗಳಕ್ಕೆ ಹರಿಯುತ್ತಿರುವ ಡ್ರೈನೇಜ್ ಕೊಳಚೆ

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

ಹೊಸ ಸೇರ್ಪಡೆ

ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ

Los Angeles: Another wildfire; More than 30,000 people displaced

Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ…

Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ

Karkala: Government bus collides with tempo in Sanoor

Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.